ಕೊತ್ತಂಬರಿ ಸೊಪ್ಪು. ಬೇಸಿಗೆಯಲ್ಲಿ ಕೊತ್ತಂಬರಿ ಸೊಪ್ಪಿನ ಸೇವನೆಯಿಂದ ದೇಹದಿಂದ ಅತಿಯಾದ ಬೆವರು ಬರುತ್ತದೆ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ. ತಾಪಮಾನ ನಿಯಂತ್ರಿಸುತ್ತದೆ. ಕೊತ್ತಂಬರಿ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕವಿದೆ. ಚಯಾಪಚಯ ಹೆಚ್ಚಿಸುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆ ಕಡಿಮೆ ಮಾಡಿ, ಹೊಟ್ಟೆಗೆ ತಂಪು ನೀಡುತ್ತದೆ. ಕೊತ್ತಂಬರಿ ಸೊಪ್ಪನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಅದರ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಸೋಂಪು ಕಾಳು. ಇದು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ. ಭಾರತದ ಬಹುತೇಕ ಎಲ್ಲಾ ಮನೆಗಳಲ್ಲಿ ಸೋಂಪು ಕಾಳನ್ನು ಊಟದ ನಂತರ ತಿನ್ನುತ್ತಾರೆ. ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿ ಊಟದ ನಂತರ ಸೋಂಪು ಕೊಡುತ್ತಾರೆ. ಇದು ತಂಪಾಗಿಸುವ ಗುಣ ಹೊಂದಿದೆ. ಬೇಸಿಗೆಯಲ್ಲಿ ಇದರ ಸೇವನೆಯು ಅಸಿಡಿಟಿ, ವಾಂತಿ, ಮಲಬದ್ಧತೆ ಸಮಸ್ಯೆ ಕಡಿಮೆ ಮಾಡುತ್ತದೆ. ಕರುಳಿನ ಆರೋಗ್ಯ ಕಾಪಾಡುತ್ತದೆ.
ದೇಹವನ್ನು ನಿರ್ವಿಷಗೊಳಿಸಿ, ಉಷ್ಣತೆ ಸಾಮಾನ್ಯವಾಗಿಡುತ್ತದೆ. ಸೊಂಪು ಕಾಳನ್ನು ನೀರಿನಲ್ಲಿ ನೆನೆಸಿ ರಾತ್ರಿಯಿಡೀ ಬಿಡಿ. ಬೆಳಿಗ್ಗೆ ಎದ್ದಾಗ ನೀರನ್ನು ಕುಡಿಯಿರಿ. ಏಲಕ್ಕಿ. ಹಸಿರು ಏಲಕ್ಕಿ ಸೇವಿಸುವುದು ಬೇಸಿಗೆಯಲ್ಲಿ ನಿಮಗೆ ತುಂಬಾ ಪ್ರಯೋಜನಕಾರಿ. ಇದು ದೇಹದ ಉಷ್ಣತೆ ನಿಯಂತ್ರಿಸುತ್ತದೆ. ಇದರ ತಂಪಾಗಿಸುವ ಗುಣವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಅಸಿಡಿಟಿ ಮತ್ತು ಉಬ್ಬುವುದು ಕಡಿಮೆ ಮಾಡುತ್ತದೆ.