ಮನೆಯ ಮುಂದೆ ಹಸಿರು ಮರಗಳು ಮತ್ತು ಬಣ್ಣಬಣ್ಣದ ಹೂವಿನ ಗಿಡಗಳನ್ನು ಹೊಂದಿದ್ದರೆ ತುಂಬಾ ಉಲ್ಲಾಸ. ಆದರೆ ಬೇಸಿಗೆಯಲ್ಲಿ ಗಿಡಗಳು ಒಣಗುತ್ತವೆ. ಬೇಸಿಗೆಯಲ್ಲಿ ತೋಟಗಾರಿಕೆ ಒಂದು ಸವಾಲಿದ್ದಂತೆ. ಬೇಸಿಗೆಯ ಶಾಖದಿಂದ ಸಸ್ಯಗಳು ಹೆಚ್ಚು ಹಾನಿಗೊಳಗಾಗುತ್ತವೆ. ಕೆಲವು ಸಸ್ಯಗಳು ಒಣಗುತ್ತವೆ ಮತ್ತು ಎಲೆಗಳು ಉದುರಿಹೋಗುತ್ತವೆ. ನೀವು ತೋಟಗಾರಿಕೆಗೆ ಹೊಸಬರಾಗಿದ್ದರೆ ಇನ್ನೂ ಕಷ್ಟ.