ಮತ್ತೆ ಕೆಲವರು ಸಕ್ಕರೆ ಬೆರೆಸದ ಟೀ, ಕಾಫಿ ಕುಡಿಯಿರಿ ಎಂದು ಹೇಳಿದರೆ ಮುಖ ಗಂಟು ಹಾಕಿ ಕೊಳ್ಳುತ್ತಾರೆ. ಆದರೆ ಅತಿಯಾಗಿ ಸಕ್ಕರೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಒಂದು ವೇಳೆ ನೀವು ಹೆಚ್ಚು ಸಕ್ಕರೆ ಸೇವಿಸುವವರಾಗಿದ್ದರೆ, ಮೊದಲು ತಿನ್ನುವುದನ್ನು ಬಿಟ್ಟು ಬಿಡಿ. ಇಲ್ಲದಿದ್ದರೆ ನೀವೇ ನಿಮ್ಮನ್ನು ಅಪಾಯಕ್ಕೆ ಸಿಲುಕಿಸಿಕೊಂಡಂತೆ ಆಗುತ್ತದೆ. ಇನ್ನೂ ಸಕ್ಕರೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು ಎಂಬುವುದರ ಕುರಿತಂತೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.
ತೂಕ ಹೆಚ್ಚಾಗುವ ವಿಚಾರದಲ್ಲಿ ಸಕ್ಕರೆಯೇ ವಿಲನ್. ತೂಕ ಹೆಚ್ಚಾಗಲು ಮತ್ತು ಸ್ಥೂಲಕಾಯತೆಗೆ ಸಕ್ಕರೆಯೇ ಮುಖ್ಯ ಕಾರಣ. ಸಕ್ಕರೆ ದೇಹವನ್ನು ಪ್ರವೇಶಿಸಿದಾಗ, ಶಕ್ತಿಯು ಅಧಿಕವಾಗಿ ಹೆಚ್ಚಾಗುತ್ತದೆ. ಅದನ್ನು ಸೇವಿಸದ ನಂತರ ಕೊಬ್ಬಾಗಿ ಬದಲಾಗುತ್ತದೆ. ಕಾಲಕ್ರಮೇಣ ಬೊಜ್ಜು ಕಾಣಿಸಿಕೊಳ್ಳುತ್ತದೆ ಮತ್ತು ಅದರೊಂದಿಗೆ ಮಧುಮೇಹ, ಹೃದ್ರೋಗ, ಅಧಿಕ ರಕ್ತದೊತ್ತಡ ಸಮಸ್ಯೆಗಳು ಬರುತ್ತದೆ.