Cooking Oil: ಸೂರ್ಯಕಾಂತಿ ಎಣ್ಣೆಯ ಬದಲು ಅಡುಗೆಗೆ ಬಳಸಬಹುದಾದ ಪರ್ಯಾಯ ಎಣ್ಣೆಗಳು
Sunflower Oil: ಪ್ರತಿಯೊಬ್ಬರ ಮನೆಯಲ್ಲಿ ಅಡುಗೆ ಮಾಡಬೇಕು ಅಂದ್ರೆ ಸೂರ್ಯಕಾಂತಿ ಎಣ್ಣೆ ಕಡ್ಡಾಯವಾಗಿ ಇರಲೇಬೇಕು.ಆದ್ರೆ ಸೂರ್ಯಕಾಂತಿ ಎಣ್ಣೆಯ ಬೆಲೆ ದುಬಾರಿಯಾಗುತ್ತಿದೆ. ನಮ್ಮ ದೇಶ ಸೂರ್ಯಕಾಂತಿ ಎಣ್ಣೆಗಾಗಿ ಬಹುತೇಕ ವಿದೇಶವನ್ನೇ ಅವಲಂಬಿಸಿದೆ. ಆದರೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನದಿಂದ ನಮ್ಮ ದೇಶಕ್ಕೆ ಸೂರ್ಯಕಾಂತಿ ಎಣ್ಣೆ ಪೂರೈಕೆಯಾಗುವುದರಲ್ಲಿ ಕೊಂಚ ಹಿನ್ನಡೆ ಆಗುತ್ತಿದೆ.. ಹೀಗಾಗಿ ದೇಶದಲ್ಲಿ ಸೂರ್ಯಕಾಂತಿ ಎಣ್ಣೆ ಬೆಲೆ ಮತ್ತೆ ಗಗನಕ್ಕೆ ಇರುವ ಸಾಧ್ಯತೆಯಿದೆ. ಹೀಗಾಗಿ ಅಡುಗೆಗೆ ಸೂರ್ಯಕಾಂತಿ ಎಣ್ಣೆಯ ಬದಲು ಬೇರೆ ಯಾವ ಎಣ್ಣೆ ಬಳಕೆ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.
ಬಾದಾಮಿ ಎಣ್ಣೆ: ಇದರಲ್ಲಿ ಮೊನೊಸಾಚುರೇಟೆಡ್ ಕೊಬ್ಬು ಮತ್ತು ವಿಟಮಿನ್ ಇ ಅಂಶ ಅಧಿಕವಾಗಿದೆ. ಸಂಸ್ಕರಿಸಿದ ಬಾದಾಮಿ ಎಣ್ಣೆಯು ಹೆಚ್ಚಿನ ಹೊಗೆ ಬಿಂದುವನ್ನು ಹೊಂದಿದೆ, ಆದ್ದರಿಂದ ಸೀರಿಂಗ್ ಮತ್ತು ಬ್ರೌನಿಂಗ್ನಂತಹ ಹೆಚ್ಚಿನ ಶಾಖದ ಅಡುಗೆಗೆ ಇದು ಒಳ್ಳೆಯದು.
2/ 7
ಆಲೀವ್ ಆಯಿಲ್: ಅತ್ಯುತ್ತಮ ಅಡಿಗೆ ಎಣ್ಣೆ ಕಿರೀಟ ಯಾವಾಗಲೂ ಆಲಿವ್ ಎಣ್ಣೆಗೆ ಸೇರುತ್ತದೆ.ಇದನ್ನು ನೀವು ಯಾವುದೇ ರೀತಿಯ ಅಡುಗೆಗೆ ಬಳಸಬಹುದು . ರಕ್ತನಾಳಗಳ ಆರೋಗ್ಯವನ್ನು ಸುಧಾರಿಸುವ ಮೂಲಕ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಮೂಲಕ ನಿಮ್ಮ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
3/ 7
ತೆಂಗಿನ ಎಣ್ಣೆ: ಸಾಮಾನ್ಯವಾಗಿ ದಕ್ಷಿಣ ಭಾರತದ ಅಡುಗೆಗಳಲ್ಲಿ ಈಗಲೂ ಹೆಚ್ಚಿನ ಪ್ರಮಾಣದ ಜನರು ಅಡುಗೆಗೆ ಸೂರ್ಯಕಾಂತಿ ಅಥವಾ ಕಡಲೆಕಾಯಿ ಎಣ್ಣೆ ಯಾವುದು ತೆಂಗಿನ ಎಣ್ಣೆಯ ಬಳಕೆ ಮಾಡುತ್ತಾರೆ. ಕೇರಳದಂತಹ ಸಾಂಪ್ರದಾಯಿಕ ರಾಜ್ಯಗಳಲ್ಲಿ ತೆಂಗಿನಕಾಯಿ ಎಣ್ಣೆ ಇಲ್ಲದೆ ಅಡುಗೆ ಆಗುವುದೇ ಇಲ್ಲ
4/ 7
ವಾಲ್ನಟ್ ಎಣ್ಣೆ: ವಾಲ್ನಟ್ ಎಣ್ಣೆಯನ್ನು ನೀವು ಹೆಚ್ಚಿನ ಶಾಖದ ಭಕ್ಷ್ಯಗಳ ತಯಾರಿಕೆಗೆ ಬಳಸಬಾರದು, ಆದರೆ ಆಕ್ರೋಡ ಎಣ್ಣೆಯಲ್ಲಿರುವ ಬೀಜದ ಪರಿಮಳವು ಹಸಿ ತರಕಾರಿಗಳ ಮೇಲೆ ಅಥವಾ ವಿನೆಗರ್ ಡ್ರೆಸ್ಸಿಂಗ್ ಅಥವಾ ಸಾಸ್ನಲ್ಲಿ ಚಿಮುಕಿಸಲು ರುಚಿಕರವಾದ ಆಯ್ಕೆಯಾಗಿದೆ..
5/ 7
ಬೆಣ್ಣೆ: ಸಾಮಾನ್ಯವಾಗಿ ಮನೆಯಲ್ಲಿ ಅಡುಗೆ ಮಾಡಲು ಎಣ್ಣೆ ಇಲ್ಲದೆ ಇದ್ದಾಗ ಅತಿ ಹೆಚ್ಚಿನ ಜನರು ಬೆಣ್ಣೆ ಬಳಕೆ ಮಾಡುತ್ತಾರೆ.. ಅಡುಗೆಯಲ್ಲಿ ಹೆಣ್ಣಿಗಿಂತ ಬೆಣ್ಣೆ ಬಳಕೆ ಮಾಡುವುದು ಅಡುಗೆ ರುಚಿಯನ್ನು ಹೆಚ್ಚು ಮಾಡುತ್ತದೆ.
6/ 7
ಅಗಸೆ ಬೀಜದ ಎಣ್ಣೆ: ಕಡಲೆಕಾಯಿ ಹಾಗೂ ಸೂರ್ಯಕಾಂತಿ ಎಣ್ಣೆಯನ್ನು ಹೊರತುಪಡಿಸಿದರೆ ಅಡುಗೆಯಲ್ಲಿ ಬಳಸಬಹುದಾದ ಮತ್ತೊಂದು ಉತ್ತಮ ಎಣ್ಣೆ ಅಂದ್ರೆ ಅದು ಅಗಸೆ ಬೀಜದ ಎಣ್ಣೆ. ಜೀರ್ಣಶಕ್ತಿಯನ್ನು ಉತ್ತಮಗೊಳಿಸುವ ಅಗಸೇ ಬೀಜಗಳು ಕೂದಲು ಮತ್ತು ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ.
7/ 7
ಕಡಲೇಕಾಯಿ ಎಣ್ಣೆ: ಸೂರ್ಯಕಾಂತಿ ಎಣ್ಣೆಯನ್ನು ಹೊರತುಪಡಿಸಿದರೆ ಹೆಚ್ಚು ಜನಪ್ರಿಯವಾಗಿರುವ ಎಣ್ಣೆಗಳಲ್ಲಿ ಕಡಲೆಕಾಯಿ ಕೂಡ ಒಂದು.ಕಡಲೇಕಾಯಿ ಎಣ್ಣೆಯಲ್ಲಿ ವಿಟಮಿನ್ ಇಅಂಶ ಸಮೃದ್ಧವಾಗಿರುವುದರಿಂದ ಇದನ್ನು ಅಡುಗೆಯಲ್ಲಿ ಬಳಕೆ ಮಾಡಬಹುದು.