ಈ ಕಲೆಗಳನ್ನು ಹೋಗಲಾಡಿಸಲು ಮನೆಯಲ್ಲಿ ಕೆಲವು ಮದ್ದುಗಳಿವೆ. ಈ ಮನೆ ಮದ್ದು ಟ್ರೈ ಮಾಡಿದರೆ ನಿಮ್ಮ ಹೊಟ್ಟೆಯ ಮೇಲಿನ ಚರ್ಮವು ಮೊದಲಿನಂತೆ ಮೃದು ಹಾಗೂ ಸ್ಟ್ರೆಚ್ ಮಾರ್ಕ್ಸ್ ರಹಿತವಾಗಿ ಕಾಣುತ್ತದೆ. ಅಲೋವೆರಾ ಚರ್ಮದ ಅಂಗಾಂಶವನ್ನು ಮತ್ತೆ ಉತ್ಪಾದಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ನೈಸರ್ಗಿಕ ಗುಣಪಡಿಸುವ ಗುಣವನ್ನು ಹೊಂದಿದೆ. ಹೀಗಾಗಿ ನೀವು ಅಲೋವೆರಾ ಜೆಲ್ನ್ನು ಸ್ಟ್ರೆಚ್ ಮಾರ್ಕ್ ಇರುವ ಜಾಗಕ್ಕೆ ಹಚ್ಚಿ. ಅರ್ಧ ಗಂಟೆಯ ಬಳಿಕ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಪ್ರತಿದಿನ ಹೀಗೆ ಮಾಡಿದರೆ, ಕ್ರಮೇಣ ಸ್ಟ್ರೆಚ್ ಮಾರ್ಕ್ ಮಾಯವಾಗುತ್ತದೆ.