Stress Relief Foods: ಒತ್ತಡ ಹಾಗೂ ಮಾನಸಿಕ ಅಸ್ವಸ್ಥತೆ ಕಡಿಮೆ ಮಾಡಲು ಈ ಆಹಾರ ತಿನ್ನಿ!

ವೇಗದ ಹಾಗೂ ಬಿಡುವಿಲ್ಲದ ಜೀವನದಲ್ಲಿ ದಿನವೂ ಒಂದಲ್ಲ ಒಂದು ರೀತಿಯ ಟೆನ್ಶನ್, ಆಯಾಸ, ಒತ್ತಡ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಗರಗಳಲ್ಲಿ ವಾಸಿಸುವ ಜನರ ಜೀವನಶೈಲಿಯು ಮತ್ತಷ್ಟು ಒತ್ತಡದಾಯಕವಾಗಿದೆ. ಇದು ವ್ಯಕ್ತಿಯನ್ನು ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿಸುತ್ತದೆ. ಇದರಿಂದ ಹೊರಗೆ ಬರಲು ನಿಮಗೆ ಕೆಲವು ಆಹಾರಗಳು ಸಹಾಯ ಮಾಡುತ್ತವೆ.

First published:

  • 18

    Stress Relief Foods: ಒತ್ತಡ ಹಾಗೂ ಮಾನಸಿಕ ಅಸ್ವಸ್ಥತೆ ಕಡಿಮೆ ಮಾಡಲು ಈ ಆಹಾರ ತಿನ್ನಿ!

    ದಿನವಿಡೀ ದುಡಿದು, ಬಾಸ್ ನ ಬೈಗುಳ, ಮುಗಿಯದ ಪ್ರೊಜೆಕ್ಟ್, ಕೌಟುಂಬಿಕ ಸಮಸ್ಯೆ ಇತ್ಯಾದಿಗಳ ನಡುವೆ ಹೈರಾಣಾಗುವ ವ್ಯಕ್ತಿ ಒತ್ತಡ ಮತ್ತು ಮಾನಸಿಕ ಖಿನ್ನತೆಗೆ ತುತ್ತಾಗುತ್ತಾನೆ. ಈ ಮಧ್ಯೆ ನಿಮ್ಮ ಒತ್ತಡ ಮತ್ತು ಖಿನ್ನತೆ ಕಡಿಮೆ ಮಾಡಲು ಹಾಗೂ ಮಾನಸಿಕ ಅಸ್ವಸ್ಥತೆ ಕಡಿಮೆ ಮಾಡಲು ಊಟದಲ್ಲಿ ಆಕ್ಸಿಡೇಟಿವ್ ಆಹಾರ ಸೇರಿಸಿ.

    MORE
    GALLERIES

  • 28

    Stress Relief Foods: ಒತ್ತಡ ಹಾಗೂ ಮಾನಸಿಕ ಅಸ್ವಸ್ಥತೆ ಕಡಿಮೆ ಮಾಡಲು ಈ ಆಹಾರ ತಿನ್ನಿ!

    ಆಕ್ಸಿಡೇಟಿವ್ ಆಹಾರ ಅಥವಾ ಕೆಲವು ಒತ್ತಡ ಪರಿಹಾರ ಆಹಾರಗಳ ಸೇವನೆ ಮಾಡಿದರೆ ಒತ್ತಡದ ಮಟ್ಟವು ಕಡಿಮೆ ಆಗುತ್ತದೆ. ಜೊತೆಗೆ ಆರೋಗ್ಯಕರ ಜೀವನಶೈಲಿ ಅಭ್ಯಾಸ ಮಾಡಿದರೆ ಒತ್ತಡ ಮತ್ತು ಖಿನ್ನತೆ ಹಾಗೂ ಮಾನಸಿಕ ಅಸ್ವಸ್ಥತೆ ಸಮಸ್ಯೆ ಕಡಿಮೆ ಆಗುತ್ತದೆ. ಆಗ ಮಾತ್ರ ಒತ್ತಡ ರಹಿತ ಜೀವನವನ್ನು ಆನಂದಿಸಲು ಸಾಧ್ಯ.

    MORE
    GALLERIES

  • 38

    Stress Relief Foods: ಒತ್ತಡ ಹಾಗೂ ಮಾನಸಿಕ ಅಸ್ವಸ್ಥತೆ ಕಡಿಮೆ ಮಾಡಲು ಈ ಆಹಾರ ತಿನ್ನಿ!

    ಬಿಡುವಿದ್ದಾಗ ನೀವು ಸಂಸ್ಕರಿಸಿದ ಚಿಪ್ಸ್ ತಿನ್ನುತ್ತಿದ್ದರೆ ಕೂಡಲೇ ನಿಲ್ಲಿಸಿ. ಇದರ ಬದಲು ಆರೋಗ್ಯಕರ ತಿಂಡಿಗಳ ಸೇವನೆ ಮಾಡಿ. ಬಾಳೆಹಣ್ಣಿನ ಚಿಪ್ಸ್, ಕೇಲ್ ಚಿಪ್ಸ್, ಕ್ಯಾರೆಟ್ ಚಿಪ್ಸ್, ಕಡಲೆಕಾಯಿ ಬೆಣ್ಣೆ, ಸೇಬು ಸೇವಿಸಿ. ಇದು ನಿಮ್ಮ ಹಸಿವನ್ನು ತಣಿಸುತ್ತದೆ. ದೇಹಕ್ಕೆ ಉತ್ತಮ ಪೋಷಣೆ ನೀಡುತ್ತದೆ.

    MORE
    GALLERIES

  • 48

    Stress Relief Foods: ಒತ್ತಡ ಹಾಗೂ ಮಾನಸಿಕ ಅಸ್ವಸ್ಥತೆ ಕಡಿಮೆ ಮಾಡಲು ಈ ಆಹಾರ ತಿನ್ನಿ!

    ಒತ್ತಡ ಕಡಿಮೆ ಮಾಡಲು ವಿಶ್ರಾಂತಿ ಪಡೆಯುವುದು ತುಂಬಾ ಮುಖ್ಯ. ಆರೋಗ್ಯಕರ ದೇಹದ ತೂಕ ಹೊಂದುವುದು ಸಹ ಮುಖ್ಯವಾಗಿದೆ. ಇದರ ಜೊತೆಗೆ ಯೋಗ ಮತ್ತು ವ್ಯಾಯಾಮ ಮಾಡಿ. ಇದು ಮಾನಸಿಕ ನೆಮ್ಮದಿ ಹಾಳಾಗುವುದನ್ನು ತಡೆಯುತ್ತದೆ. ಇಲ್ಲಿ ನಾವು ಕೆಲವು ಸ್ಟ್ರೆಸ್ ಬಸ್ಟರ್ ಆಹಾರಗಳನ್ನು ನೋಡೋಣ.

    MORE
    GALLERIES

  • 58

    Stress Relief Foods: ಒತ್ತಡ ಹಾಗೂ ಮಾನಸಿಕ ಅಸ್ವಸ್ಥತೆ ಕಡಿಮೆ ಮಾಡಲು ಈ ಆಹಾರ ತಿನ್ನಿ!

    ಒತ್ತಡ ಕಡಿಮೆ ಮಾಡಲು ಹಣ್ಣುಗಳ ಸೇವನೆ ಮಾಡಿ. ಖಿನ್ನತೆ ನಿವಾರಿಸಲು ಹಣ್ಣುಗಳ ಸೇವನೆ ಸಹಕಾರಿ. ಸಾಧ್ಯಾವಾದಷ್ಟು ಋತುಮಾನದ ಹಣ್ಣುಗಳನ್ನು ದಿನವೂ ಸೇವಿಸಿ. ಬಾಳೆಹಣ್ಣು, ಚೆರ್ರಿಗಳು, ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿಹಣ್ಣು ಮತ್ತು ಮಾವು ಸೇವಿಸಿ. ಇವುಗಳ ಸೇವನೆ ಒತ್ತಡ ಕಡಿಮೆ ಮಾಡುತ್ತವೆ.

    MORE
    GALLERIES

  • 68

    Stress Relief Foods: ಒತ್ತಡ ಹಾಗೂ ಮಾನಸಿಕ ಅಸ್ವಸ್ಥತೆ ಕಡಿಮೆ ಮಾಡಲು ಈ ಆಹಾರ ತಿನ್ನಿ!

    ಒಮೆಗಾ 3 ಆಹಾರಗಳ ಸೇವನೆ ಮಾಡಿ. ಇವುಗಳು ಆತಂಕ ಮತ್ತು ಖಿನ್ನತೆ ಕಡಿಮೆ ಮಾಡುತ್ತವೆ. ಬೀಜಗಳು, ಮೀನು, ಡ್ರೈಫ್ರೂಟ್ಸ್ ಮತ್ತು ತೋಫು, ಒಮೆಗಾ ಭರಿತ ಆಹಾರ ಸೇವಿಸಿ. ಇವುಗಳು ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಪ್ರೊಟೀನ್ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.

    MORE
    GALLERIES

  • 78

    Stress Relief Foods: ಒತ್ತಡ ಹಾಗೂ ಮಾನಸಿಕ ಅಸ್ವಸ್ಥತೆ ಕಡಿಮೆ ಮಾಡಲು ಈ ಆಹಾರ ತಿನ್ನಿ!

    ಮೀನು ಮತ್ತು ಬೀಜಗಳನ್ನು ಆಹಾರದಲ್ಲಿ ಸೇರಿಸಿ. ಇವುಗಳು ಹೃದಯದ ಆರೋಗ್ಯ ಕಾಪಾಡುತ್ತವೆ. ಒತ್ತಡ ನಿವಾರಣೆಗೆ ಸಹಕಾರಿ. ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್‌ನಿಂದ ಕೂಡಿವೆ. ಇವುಗಳು ನಿಮ್ಮ ಆಹಾರವನ್ನು ರುಚಿಕರವಾಗಿಸುತ್ತವೆ. ಪೋಷಕಾಂಶಗಳ ಶಕ್ತಿ ನೀಡುತ್ತವೆ.

    MORE
    GALLERIES

  • 88

    Stress Relief Foods: ಒತ್ತಡ ಹಾಗೂ ಮಾನಸಿಕ ಅಸ್ವಸ್ಥತೆ ಕಡಿಮೆ ಮಾಡಲು ಈ ಆಹಾರ ತಿನ್ನಿ!

    ತೋಫು ಆಹಾರದಲ್ಲಿ ಸೇರಿಸಿ. ಇದು ಒತ್ತಡ ಪರಿಹಾರ ಆಹಾರವಾಗಿದೆ. ಇದು ಪ್ರೋಟೀನ್ ಮತ್ತು ಅಗತ್ಯ ಪೋಷಕಾಂಶಗಳಿಂದ ಕೂಡಿದೆ. ತೋಫು ಹೃದಯ ಮತ್ತು ಹಾಗು ಅನೇಕ ಆರೋಗ್ಯ ಪ್ರಯೋಜನ ನೀಡುತ್ತವೆ. ಜೊತೆಗೆ ವಾಕಿಂಗ್ ಮಾಡಿ. ಹೆಚ್ಚು ಆಲೋಚನೆ ಮಾಡದಿರಿ.

    MORE
    GALLERIES