ಉಸಿರಾಟದ ವ್ಯಾಯಾಮ ಮಾಡಿ. ಇದು ನಿಮ್ಮ ಇಡೀ ದಿನದ ಸ್ಟ್ರೆಸ್, ಒತ್ತಡ, ಖಿನ್ನತೆ ದೂರ ಮಾಡುತ್ತದೆ. ಧ್ಯಾನ ಮತ್ತು ಉಸಿರಾಟದ ವ್ಯಾಯಾಮವು ಮನಸ್ಸನ್ನು ಹಗುರವಾಗಿಸುತ್ತದೆ. ತಾಜಾತನ ಮೂಡುತ್ತದೆ. ಯೋಗ ಮಾಡಿದರೆ ಗಾಮಾ-ಅಮಿನೊಬ್ಯುಟ್ರಿಕ್ ಆಮ್ಲವು ದೇಹದಲ್ಲಿ ಹೆಚ್ಚಾಗುತ್ತದೆ. ಇದು ಮೆದುಳಿನ ರಾಸಾಯನಿಕ ಮಟ್ಟ ಹೆಚ್ಚಿಸಿ, ಸಮತೋಷ ನೀಡುತ್ತದೆ. ಬಾಲಾಸನ, ಶವಾಸನ ಮತ್ತು ಕಪಾಲಭಾತಿ ಮಾಡಿ.