Pomegranate Benefits: ನಾಲಿಗೆಗೆ ರುಚಿ, ಹಾರ್ಟ್‌ಗೂ ಹಿತ! ದಾಳಿಂಬೆ ತಿಂದರೆ ಅನಾರೋಗ್ಯದ ಚಿಂತೆಯಿಲ್ಲ

ದಾಳಿಂಬೆ ಒಂದು ಸೂಪರ್ ಫ್ರೂಟ್. ಕೆಂಪು ಕಾಳಿನ ಈ ಹಣ್ಣು ನೋಡೋಕೆ ಎಷ್ಟು ಚೆಂದವೋ, ಇದರ ಪೋಷಕತತ್ವಗಳು ಸಹ ಅಷ್ಟೇ ಉತ್ತಮವಾಗಿವೆ. ದಾಳಿಂಬೆ ಹಣ್ಣು ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಸಣ್ಣ ದಾಳಿಂಬೆ ಬೀಜಗಳು ನಿಮಗೆ ಚಮತ್ಕಾರಿಯಂತೆ ಕೆಲಸ ಮಾಡುತ್ತವೆ. ದಾಳಿಂಬೆ ಹಣ್ಣಿನ ಸೇವನೆಯು ಹೃದಯದ ಆರೋಗ್ಯ ಹಾಗೂ ಮೆದುಳು ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.

First published:

  • 18

    Pomegranate Benefits: ನಾಲಿಗೆಗೆ ರುಚಿ, ಹಾರ್ಟ್‌ಗೂ ಹಿತ! ದಾಳಿಂಬೆ ತಿಂದರೆ ಅನಾರೋಗ್ಯದ ಚಿಂತೆಯಿಲ್ಲ

    ದಾಳಿಂಬೆ ಹಣ್ಣು ಉತ್ತಮ ಪೋಷಕಾಂಶ ಗುಣಗಳಿಂದ ಸಮೃದ್ಧವಾಗಿದೆ. ನಿಯಮಿತವಾಗಿ ದಾಳಿಂಬೆಯನ್ನು ಸೇವನೆ ಮಾಡುವುದು ಸಾಕಷ್ಟು ಪ್ರಯೋಜನ ನೀಡುತ್ತದೆ. ನಿಮ್ಮ ಕೆಲವು ಆರೋಗ್ಯ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತವೆ. ದಾಳಿಂಬೆ ಹಣ್ಣು ತುಂಬಾ ವಿಶೇಷವಾಗಿದೆ. ದಾಳಿಂಬೆ ಹಣ್ಣು ಅನೇಕ ಪ್ರಮುಖ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿರುವ ಅತ್ಯುತ್ತಮ ಮೂಲವಾಗಿದೆ.

    MORE
    GALLERIES

  • 28

    Pomegranate Benefits: ನಾಲಿಗೆಗೆ ರುಚಿ, ಹಾರ್ಟ್‌ಗೂ ಹಿತ! ದಾಳಿಂಬೆ ತಿಂದರೆ ಅನಾರೋಗ್ಯದ ಚಿಂತೆಯಿಲ್ಲ

    ದಾಳಿಂಬೆ ಹಣ್ಣಿನ ಸೇವನೆಯು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನ ನೀಡುತ್ತದೆ. ಇದು ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು, ಆರೋಗ್ಯಕರ ಕೊಬ್ಬು, ನೈಸರ್ಗಿಕ ಸಕ್ಕರೆ, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಫೋಲೇಟ್ ಒದಗಿಸುತ್ತದೆ. ಇವೆಲ್ಲಾ ಪೋಷಕಾಂಶಗಳು ಆರೋಗ್ಯಕ್ಕೆ ಅತ್ಯಗತ್ಯವಾಗಿವೆ.

    MORE
    GALLERIES

  • 38

    Pomegranate Benefits: ನಾಲಿಗೆಗೆ ರುಚಿ, ಹಾರ್ಟ್‌ಗೂ ಹಿತ! ದಾಳಿಂಬೆ ತಿಂದರೆ ಅನಾರೋಗ್ಯದ ಚಿಂತೆಯಿಲ್ಲ

    ದಾಳಿಂಬೆ ಹಣ್ಣಿನ ಸೇವನೆಯು ಹೃದಯದ ಆರೋಗ್ಯ ಕಾಪಾಡುತ್ತದೆ. ದಾಳಿಂಬೆ ಹಣ್ಣಿನಲ್ಲಿರುವ ಪಾಲಿಫಿನಾಲಿಕ್ ಸಂಯುಕ್ತಗಳು ಮತ್ತು ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯ ಕಾಪಾಡುತ್ತವೆ. ಇದು ಅಧಿಕ ರಕ್ತದೊತ್ತಡ ಸಮಸ್ಯೆ ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟ ಸಾಮಾನ್ಯಗೊಳಿಸುತ್ತದೆ.

    MORE
    GALLERIES

  • 48

    Pomegranate Benefits: ನಾಲಿಗೆಗೆ ರುಚಿ, ಹಾರ್ಟ್‌ಗೂ ಹಿತ! ದಾಳಿಂಬೆ ತಿಂದರೆ ಅನಾರೋಗ್ಯದ ಚಿಂತೆಯಿಲ್ಲ

    ಮಧುಮೇಹ ಸಮಸ್ಯೆ ನಿಯಂತ್ರಣಕ್ಕೆ ದಾಳಿಂಬೆ ರಸ ಸೇವನೆ ಲಾಭಕಾರಿ. ದಾಳಿಂಬೆ ರಸವನ್ನು ನಿಯಮಿತವಾಗಿ ಸೇವಿಸಿದರೆ ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಯು ದಿನವೂ ದಾಳಿಂಬೆ ರಸ ಸೇವಿಸುವುದು ಮುಖ್ಯ.

    MORE
    GALLERIES

  • 58

    Pomegranate Benefits: ನಾಲಿಗೆಗೆ ರುಚಿ, ಹಾರ್ಟ್‌ಗೂ ಹಿತ! ದಾಳಿಂಬೆ ತಿಂದರೆ ಅನಾರೋಗ್ಯದ ಚಿಂತೆಯಿಲ್ಲ

    ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಗೆ ಪ್ರಯೋಜನ ನೀಡುತ್ತದೆ. ಜೀರ್ಣಕ್ರಿಯೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ದಾಳಿಂಬೆಯಲ್ಲಿರುವ ಫೈಬರ್ ಮತ್ತು ಪ್ರೋಬಯಾಟಿಕ್ ಸಂಯುಕ್ತಗಳು ಮುಖ್ಯವಾಗಿವೆ. ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾದ ಉತ್ಪಾದನೆ ಹೆಚ್ಚಿಸುತ್ತವೆ. ಇದು ಮಲಬದ್ಧತೆ, ಕರುಳಿನ ಕ್ಯಾನ್ಸರ್, ಅನಿಲ, ಆಮ್ಲೀಯತೆ ಕಡಿಮೆ ಮಾಡುತ್ತದೆ.

    MORE
    GALLERIES

  • 68

    Pomegranate Benefits: ನಾಲಿಗೆಗೆ ರುಚಿ, ಹಾರ್ಟ್‌ಗೂ ಹಿತ! ದಾಳಿಂಬೆ ತಿಂದರೆ ಅನಾರೋಗ್ಯದ ಚಿಂತೆಯಿಲ್ಲ

    ಮೂತ್ರದ ಸಮಸ್ಯೆ ನಿವಾರಣೆಗೆ ದಾಳಿಂಬೆ ಸಹಕಾರಿ. ದಾಳಿಂಬೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮೂತ್ರಪಿಂಡದ ಕಲ್ಲುಗಳ ಅಪಾಯ ಕಡಿಮೆ ಮಾಡುತ್ತದೆ. ಯುಟಿಐ ಮತ್ತು ಮೂತ್ರಕೋಶದ ಸೋಂಕು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಆಕ್ಸಲೇಟ್ ಕ್ಯಾಲ್ಸಿಯಂ ಮತ್ತು ರಂಜಕ ನಿಯಂತ್ರಿಸುತ್ತದೆ.

    MORE
    GALLERIES

  • 78

    Pomegranate Benefits: ನಾಲಿಗೆಗೆ ರುಚಿ, ಹಾರ್ಟ್‌ಗೂ ಹಿತ! ದಾಳಿಂಬೆ ತಿಂದರೆ ಅನಾರೋಗ್ಯದ ಚಿಂತೆಯಿಲ್ಲ

    ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕು ನಿವಾರಣೆಗೆ ಸಹಕಾರಿ. ದಾಳಿಂಬೆ ಸೋಂಕು ಮತ್ತು ಅಲರ್ಜಿ ಕಡಿಮೆ ಮಾಡುತ್ತದೆ. ಹಾನಿಕಾರಕ ಬ್ಯಾಕ್ಟೀರಿಯಾ ಬೆಳವಣಿಗೆ ತಡೆಯುತ್ತದೆ. ಸಸ್ಯ ಸಂಯುಕ್ತಗಳು ಅಪಾಯಕಾರಿ ಸೂಕ್ಷ್ಮಜೀವಿಗಳ ಪರಿಣಾಮ ಕಡಿಮೆ ಮಾಡುತ್ತದೆ.

    MORE
    GALLERIES

  • 88

    Pomegranate Benefits: ನಾಲಿಗೆಗೆ ರುಚಿ, ಹಾರ್ಟ್‌ಗೂ ಹಿತ! ದಾಳಿಂಬೆ ತಿಂದರೆ ಅನಾರೋಗ್ಯದ ಚಿಂತೆಯಿಲ್ಲ

    ದಾಳಿಂಬೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದ ಉರಿಯೂತ ಸಮಸ್ಯೆ ತಡೆಯುತ್ತದೆ. ಆಕ್ಸಿಡೇಟಿವ್ ಒತ್ತಡದ ಪರಿಣಾಮ ಕಡಿಮೆ ಮಾಡುತ್ತದೆ. ಹಾಗೂ ಮೆದುಳಿನ ಆರೋಗ್ಯ ಕಾಪಾಡುತ್ತದೆ. ದಾಳಿಂಬೆ ಸೇವನೆಯು ಆಲ್ಝೈಮರ್ನ ಸ್ಥಿತಿ ಕಡಿಮೆ ಮಾಡಿ, ಜ್ಞಾಪಕಶಕ್ತಿ ಹೆಚ್ಚಿಸುತ್ತದೆ.

    MORE
    GALLERIES