ನಾವೆಲ್ಲರೂ ಜ್ಯೂಸ್ ಕುಡಿಯುತ್ತೇವೆ. ಒಬ್ಬೊಬ್ಬರಿಗೆ ಒಂದೊಂದು ತರಹದ ಜ್ಯೂಸ್ ಅಂದ್ರೆ ಇಷ್ಟ. ತರಕಾರಿ ಮತ್ತು ಹಣ್ಣಿನ ಜ್ಯೂಸ್ ಗಳು ಆರೋಗ್ಯಕ್ಕೆ ಸಾಕಷ್ಟು ಪೋಷಕಾಂಶ ಮತ್ತು ಪ್ರಯೋಜನ ನೀಡುತ್ತವೆ. ಜ್ಯೂಸ್ ದೇಹಕ್ಕೆ ತುಂಬಾ ಉತ್ತಮ ಆಯ್ಕೆ. ಅನಾರೋಗ್ಯದಿಂದ ಬಳಲುವವರಿಗೆ ಹೊಟ್ಟೆಗೆ ಮೃದು ಮತ್ತು ಉತ್ತಮವೆಂದು ಜ್ಯೂಸ್ ನೀಡುತ್ತಾರೆ. ಡಯಟ್ ನಲ್ಲಿ ಹೆಚ್ಚು ನೀರು ಮತ್ತು ಜ್ಯೂಸ್ ಕುಡಿಯಲಾಗುತ್ತದೆ.
ದಂಡೇಲಿಯನ್ ರೂಟ್ ಜ್ಯೂಸ್. ಇದು ಮೂತ್ರವರ್ಧಕ ಪರಿಣಾಮ ಹೊಂದಿದೆ. ಇದು ದೇಹದಲ್ಲಿ ಉಬ್ಬುವಿಕೆಯ ಸಮಸ್ಯೆ ಕಡಿಮೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆ ಮತ್ತು ಯಕೃತ್ತನ್ನು ಸ್ವಚ್ಛಗೊಳಿಸುತ್ತದೆ. ಸೌತೆಕಾಯಿ ರಸ. ಇದು ದೇಹದಲ್ಲಿ ನೀರಿನ ಕೊರತೆಯ ಜೊತೆಗೆ ದೇಹದಲ್ಲಿ ಉಬ್ಬುವಿಕೆಯ ಸಮಸ್ಯೆ ತಡೆಯುತ್ತದೆ. ಯಕೃತ್ತನ್ನು ಶುದ್ಧೀಕರಿಸುತ್ತದೆ. ದೇಹದಿಂದ ಕಲ್ಮಶ ತೆಗೆದು ಹಾಕುತ್ತದೆ.