ಭಾರತದ ಪಾಕ ಪದ್ಧತಿ ಇಡೀ ವಿಶ್ವದಲ್ಲೇಮ ಚಿರಪರಿಚಿತ. ಇಲ್ಲಿ ಮಾಡುವಮ ಪ್ರತಿಯೊಂದು ಅಡುಗೆ ಒಂದೊಂದು ಮಸಾಲೆ ಪದಾರ್ಥ ಹೊಂದಿರುತ್ತದೆ. ಸದ್ಯ ಬೇಸಿಗೆ ಆರಂಭವಾಗಿದ್ದು, ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ವಿಪರೀತ ಮಸಾಲೆ ತಿನ್ನೋದು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ಮಸಾಲೆ ಅಡುಗೆಯ ರುಚಿ ಹೆಚ್ಚು ಮಾಡುತ್ತೆ ಅಂತ ಅತಿಯಾಗಿ ಬಳಸಬಾರದು. (ಸಾಂದರ್ಭಿಕ ಚಿತ್ರ)
ಔಷಧೀಯ ಗುಣಗಳಲ್ಲಿ ಸಮೃದ್ಧವಾಗಿರುವ ಬೆಳ್ಳುಳ್ಳಿ ತೂಕ ನಷ್ಟಕ್ಕೆ ನಿಸ್ಸಂದೇಹವಾಗಿ ಉಪಯುಕ್ತವಾಗಿದೆ. ಇದು ಹಸಿವನ್ನು ನಿಯಂತ್ರಿಸುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸುತ್ತದೆ. ಆದರೆ ನೀವು ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಮಿತವಾಗಿ ತಿನ್ನಬೇಕು. ಏಕೆಂದರೆ, ಬಿಸಿ ವಾತಾವರಣದಿಂದಾಗಿ, ಇದು ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಇದು ಆಸಿಡ್ ರಿಫ್ಲಕ್ಸ್ ಅಪಾಯವನ್ನು ಹೆಚ್ಚಿಸುತ್ತದೆ. (ಸಾಂದರ್ಭಿಕ ಚಿತ್ರ)
ಬೇಸಿಗೆಯಲ್ಲಿ ತಿನ್ನಬಾರದ ಇನ್ನೊಂದು ಮಸಾಲೆ ಪದಾರ್ಥ ಅಂದ್ರೆ ಅದು ಕಾಳುಮೆಣಸು. ಬೇಸಿಗೆಯಲ್ಲಿ ಅತಿಯಾಗಿ ಕಾಳು ಮೆಣಸು ತಿನ್ನೋದರಿಂದ ಅಸಿಡಿಟಿ, ಮಲಬದ್ಧತೆ ಮತ್ತು ಹೊಟ್ಟೆನೋವು ಉಂಟಾಗುತ್ತದೆ. (Disclaimer:ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದನ್ನು ಪರಿಶೀಲಿಸಿಲ್ಲ. ಯಾವುದೇ ಪುರಾವೆಗಳಿಲ್ಲ.) (ಸಾಂದರ್ಭಿಕ ಚಿತ್ರ)