Weight Loss Tips: ದಕ್ಷಿಣ ಭಾರತದ ಈ ಆಹಾರಗಳು ನಿಮ್ಮ ತೂಕ ಕಡಿಮೆ ಮಾಡೋದು ಗ್ಯಾರಂಟಿ
South Indian Foods For Weight Loss: ತೂಕ ಇಳಿಸಲು ನಾವು ನಮ್ಮ ದಿನನಿತ್ಯದ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಆದರೆ, ಕೆಲವೊಮ್ಮೆ ನಾವು ತೂಕ ಇಳಿಸಲು ಸಹಾಯ ಮಾಡುವ ಆಹಾರಗಳನ್ನು ನೆಗ್ಲೆಕ್ಟ್ ಮಾಡುತ್ತೇವೆ. ಅದರಲ್ಲೂ ದಕ್ಷಿಣ ಭಾರತದ ಆಹಾರಗಳು ನಮಗೆ ಬಹಳ ಸಹಾಯ ಮಾಡುತ್ತದೆ.
ಭಾರತವು ಆಹಾರ ಪ್ರಿಯರಿಗೆ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ. ಉತ್ತರದಿಂದ ದಕ್ಷಿಣಕ್ಕೆ, ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ವಿಶೇಷತೆಗಳಿವೆ.ದೇಶದಲ್ಲಿ ಹಲವಾರು ವಿಭಿನ್ನ ಆಹಾರಗಳು ಲಭ್ಯವಿದೆ. ನಿಮ್ಮ ತೂಕ ಇಳಿಸಲು ಸಹಾಯ ಮಾಡುವ ಕೆಲ ದಕ್ಷಿಣ ಭಾರತದ ಆಹಾರಗಳ ಲಿಸ್ಟ್ ಇಲ್ಲಿದೆ.
2/ 9
ದಕ್ಷಿಣ ಭಾರತದ ವಿವಿಧ ಆಹಾರ ಪದಾರ್ಥಗಳನ್ನು ದೇಶಾದ್ಯಂತ ಹಲವೆಡೆ ಬಳಸಲಾಗುತ್ತದೆ. ಇಡ್ಲಿ, ಸಾಂಬಾರ್, ರಸಂ, ಲೆಮನ್ ರೈಸ್, ವಡಾ ಮತ್ತು ದೋಸೆ ಅನೇಕ ಆಹಾರಗಳು ಎಲ್ಲರ ಫೇವರೇಟ್ ಎಂದರೆ ತಪ್ಪಾಗಲಾರದು. ಈ ರೀತಿಯ ಆಹಾರಗಳು ಸಹ ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ
3/ 9
ದಕ್ಷಿಣ ಭಾರತದ ಆಹಾರಗಳು ರುಚಿಕರ ಮತ್ತು ಆರೋಗ್ಯಕರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ತೂಕ ಇಳಿಸಲು ಡಯೆಟ್ ಮಾಡುತ್ತಿದ್ದಾರೆ, ದಕ್ಷಿಣ ಭಾರತದ ಆಹಾರಗಳನ್ನಿ ಸೇವಿಸುವುದು ಸಹಾಯ ಮಾಡುತ್ತದೆ.
4/ 9
ತೂಕ ಇಳಿಕೆಗೆ ದಕ್ಷಿಣ ಭಾರತೀಯ ಆಹಾರಗಳ ಡಯಟ್ ಚಾರ್ಟ್ ಇಲ್ಲಿದೆ ಬೆಳಗ್ಗೆ ಒಂದು ಕಪ್ ಬೆಚ್ಚಗಿನ ನೀರನ್ನು ನಿಂಬೆ ರಸ ಮತ್ತು ಜೇನುತುಪ್ಪದೊಂದಿಗೆ ಕುಡಿಯಿರಿ. ಇದಲ್ಲದೇ ತೆಂಗಿನ ನೀರು ಕೂಡ ಒಳ್ಳೆಯದು.
5/ 9
ಬೆಳಗಿನ ತಿಂಡಿ ತಜ್ಞರ ಪ್ರಕಾರ, ಬೆಳಗಿನ ತಿಂಡಿ ದಿನದ ಪ್ರಮುಖ ಊಟವಾಗಿದೆ. ಬೆಳಗ್ಗೆ ಆರೋಗ್ಯಕರ ಮತ್ತು ರುಚಿಕರವಾದ ಉಪಹಾರಕ್ಕಾಗಿ, ದಕ್ಷಿಣ ಭಾರತದ ಆಹಾರಕ್ಕಿಂತ ಉತ್ತಮವಾದ ಆಯ್ಕೆ ಇಲ್ಲ. ಬೆಳಗ್ಗೆ ಕಡಲೆಕಾಯಿ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಇಡ್ಲಿ ಮತ್ತು ಸಾಂಬಾರ್ ತಿನ್ನಿ ಸಾಕು.
6/ 9
ಮಧ್ಯಾಹ್ನ ಊಟಕ್ಕೆ ಮಧ್ಯಾಹ್ನ ಊಟದ ಸಮಯದಲ್ಲಿ, ನೀವು ರಾಗಿ, ತರಕಾರಿ ಸಾಂಬಾರ್, ಮೊಸರು, ರಸಂ, ಅನ್ನ ಮತ್ತು ಮೊಳಕೆ ಕಾಳುಗಳ ಸಲಾಡ್ ಅನ್ನು ತಿನ್ನಬಹುದು. ಈ ಆಹಾರಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುವುದು ಮಾತ್ರವಲ್ಲದೆ ಸುಲಭವಾಗಿ ಜೀರ್ಣವಾಗುತ್ತದೆ.
7/ 9
ಸಂಜೆ ತಿಂಡಿ ಅನೇಕ ಜನರು ಸಂಜೆ ವಿವಿಧ ಆಹಾರಗಳನ್ನು ತಿನ್ನುತ್ತಾರೆ. ಗ್ರೀನ್ ಟೀ, ಬ್ಲ್ಯಾಕ್ ಕಾಫಿ, ಮಲ್ಟಿಗ್ರೇನ್ ಬಿಸ್ಕತ್ತುಗಳು ಅಥವಾ ಪಿಸ್ತಾಗಳನ್ನು ತಿನ್ನುವ ಅಭ್ಐಆಸ ಹೊಂದಿದ್ದಾರೆ. ಆದರೆ ನೀವು ರಾಗಿ ಪ್ಯಾನ್ಕೇಕ್ಗಳು ಮತ್ತು ದೋಸೆಯನ್ನು ಸಹ ಪ್ರಯತ್ನಿಸಬಹುದು,
8/ 9
ರಾತ್ರಿ ಊಟ ತಜ್ಞರ ಪ್ರಕಾರ, ರಾತ್ರಿ ಊಟ ಹಗುರವಾಗಿರಬೇಕು, ಸುಲಭವಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರೊಟ್ಟಿ, ಪಾಲಕ್ ದಾಲ್, ಮೊಸರು, ತರಕಾರಿ ಸಾಂಬಾರ್, ಲೆಂಬ್ರೌನ್ ರೈಸ್, ಮೊಳಕೆ ಕಾಳಿನ ಸಲಾಡ್ ಪ್ರಯತ್ನಿಸಿ.
9/ 9
ಮಲಗುವ ಮುನ್ನ ಪ್ರತಿದಿನ ಒಂದು ಕಪ್ ಬೆಚ್ಚಗಿನ ಅರಿಶಿನ ಹಾಲನ್ನು ಕುಡಿಯುವುದು ಒಳ್ಳೆಯದು. ಇದು ತೂಕ ಇಳಿಸಲು ಮಾತ್ರವಲ್ಲದೇ, ನಿಮ್ಮ ನಿದ್ರೆಯ ಸಮಸ್ಯೆಯನ್ನು ಹೋಗಲಾಡಿಸಿ, ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.