ಪ್ರೇಮಿಗಳ ದಿನದಂದು ಮನೆಯನ್ನು ಅಲಂಕರ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಅಷ್ಟಕ್ಕೂ ಮನೆಯನ್ನು ಅಲಂಕರಿಸುವುದು ಹೇಗೆ? ಯಾವುದರಿಂದ ಅಲಂಕರಿಸಬಹುದು? ಅಲಂಕಾರಿಕ ವಸ್ತುಗಳ ಬೆಲೆ ಎಷ್ಟು ಎಂಬುದರ ಕುರಿತು ನೀವು ಅನೇಕ ವಿಚಾರಗಳನ್ನು ತಿಳಿದುಕೊಳ್ಳಬೇಕು. ಅಲ್ಲದೇ ಮನೆಯನ್ನು ಅಲಂಕರಿಸಲು ಹೆಚ್ಚಿನ ಹಣ ಬೇಕಾಗಿಲ್ಲ. ಹೊಸ ಐಡಿಯಾಗಳಿಂದಲೇ ಮನೆಯನ್ನು ಸುಂದರವಾಗಿ ಮತ್ತು ಕಣ್ಮನ ಸೆಳೆಯುವ ರೀತಿಯಲ್ಲಿ ಅಲಂಕರಿಸಬಹುದು. ಕೆಲವೊಮ್ಮೆ ಸಣ್ಣ ವಿಚಾರಗಳು ಕೂಡ ಮನೆಯನ್ನು ಸುಂದರಗೊಳಿಸಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲದೇ ಇಡಬೇಕಾದ ಸರಿಯಾದ ಸ್ಥಳಗಳಲ್ಲಿ ಇರಿಸಿದರೆ, ಹೆಚ್ಚು ಖರ್ಚು ಮಾಡದೇ ಸುಲಭವಾಗಿ ಮನೆಯನ್ನು ಅಲಂಕರಿಸಬಹುದು.
ಸದ್ಯ ವ್ಯಾಲೆಂಟೈನ್ಸ್ ಡೇ ಅನ್ನು ನಿಮ್ಮ ಸಂಗಾತಿಯೊಂದಿಗೆ ಆಚರಿಸಲು ನಿಮಗಾಗಿ ಅದ್ಭುತವಾದ ಐಡಿಯಾಗಳು ಈ ಕೆಳಗಿನಂತಿವೆ. ಇವುಗಳನ್ನು ಪ್ರಯತ್ನಿಸುವ ಮೂಲಕ ನೀವಿಬ್ಬರೂ ಈ ದಿನವನ್ನು ಸ್ಮರಣೀಯವಾಗಿಸುವ ಜೊತೆಗೆ ಉತ್ತಮ ಅನುಭವವನ್ನು ಪಡೆಯಬಹುದು. ಈ ದಿನದಂದು ಒತ್ತಡದಿಂದ ದೂರ ಉಳಿದು ಸುಂದರವಾದ ರಾತ್ರಿಯನ್ನು ಆರಿಸಿಕೊಳ್ಳಬಹುದು. ನೀವು ಒಟ್ಟಿಗೆ ರುಚಿಕರವಾದ ಊಟವನ್ನು ಅಡುಗೆ ಮಾಡುವ ಮೂಲಕ, ಕರಕುಶಲ ವಸ್ತುಗಳನ್ನು ಬಳಸಿ ರೋಮ್ಯಾಂಟಿಕ್ ವಾತಾವರಣದಲ್ಲಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು.
ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು : ನಿಮ್ಮ ಮನೆ ಸ್ವಚ್ಛವಾಗಿದ್ದರೆ ನೀವು ಮತ್ತು ನಿಮ್ಮ ಸಂಗಾತಿ ಒಟ್ಟಿಗೆ ಆಹ್ಲಾದಕರ ಸಮಯವನ್ನು ಆನಂದಿಸಬಹುದು. ಪ್ರೇಮಿಗಳ ದಿನಕ್ಕೂ ಮುನ್ನ, ನಿಮ್ಮ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಮನೆಯಲ್ಲಿ ನೈಸರ್ಗಿಕ ಪರಿಮಳ ಸ್ಪ್ರೇಗಳನ್ನು ಬಳಸುವುದರಿಂದ, ನೀವು ಆತಂಕದಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಬಹುದು. ಖಿನ್ನತೆಯನ್ನು ಕಡಿಮೆ ಮಾಡಬಹುದು.
ಕೆಂಪು ಥೀಮ್: ಕೆಂಪು ಬಣ್ಣ ಪ್ರೀತಿಯ ಸಂಕೇತವಾಗಿದೆ. ಹಾಗಾಗಿ ಕುಶನ್ ಕವರ್, ಕುಶನ್, ಕರ್ಟನ್ ಆಯ್ಕೆ ಮಾಡುವಾಗ ಕೆಂಪು ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ. ನೀವು ವರ್ಷಗಳಿಂದ ಸಂಗ್ರಹಿಸಿದ ಫೋಟೋಗಳನ್ನು ಕೆಂಪು ಚೌಕಟ್ಟಿನಲ್ಲಿ ಸಂಗ್ರಹಿಸಲು ಪ್ರಯತ್ನಿಸಿ. ಅವುಗಳನ್ನು ಬೆಳಗಿಸಲು ದೀಪಗಳಿಂದ ಅಲಂಕರಿಸಿ. ಇದು ನಿಮ್ಮ ಗೆಳತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಅನುವು ಮಾಡಿಕೊಡುತ್ತದೆ.
ಲೈಟಿಂಗ್ ಲ್ಯಾಪ್ಸ್, ಕ್ಯಾಂಡಲ್: ಹಳದಿ ದೀಪಗಳು ಶಾಂತಿಯ ವಾತಾವರಣವನ್ನು ಒದಗಿಸುತ್ತವೆ. ಆದರೆ ಪರಿಮಳಯುಕ್ತ ಮೇಣದಬತ್ತಿಗಳು ಶಾಂತ ಮನಸ್ಥಿತಿಯನ್ನು ನೀಡುತ್ತದೆ. ಮೇಣದಬತ್ತಿಗಳು ಮತ್ತು ದೀಪಗಳ ಅಲಂಕಾರ ಐಷಾರಾಮಿ ಹೋಟೆಲ್ನಂತಹ ವಾತಾವರಣವನ್ನು ನೀಡುತ್ತವೆ. ವೆನಿಲ್ಲಾ, ನಿಂಬೆ ಅಥವಾ ಮಲ್ಲಿಗೆಯಂತಹ ಪರಿಮಳಯುಕ್ತ ಮೇಣದಬತ್ತಿಗಳನ್ನು ಆರಿಸುವುದು ನಿಮ್ಮ ಪ್ರಣಯ ಭಾವನೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.