Hair Care Tips: ಕೂದಲು ದಟ್ಟವಾಗಿ ಬೆಳೆಯಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ
Home Remedies For Hair Fall: ಆಧುನಿಕ ಯುಗದಲ್ಲಿ ಮನುಷ್ಯ ಆರೋಗ್ಯವಾಗಿರುವುದಕ್ಕಿಂತ ಸುಂದರವಾಗಿ ಕಾಣಲು ಹೆಚ್ಚು ಖರ್ಚು ಮಾಡುತ್ತಾನೆ. ಹಾನಿಗೊಳಗಾದ ಕೂದಲು ಮತ್ತು ಸೌಂದರ್ಯಕ್ಕೆ ಚಿಕಿತ್ಸೆ ನೀಡಲು ಪೋನಿ ಫೇಸ್ ಪ್ಯಾಕ್ಗಳು, ಕ್ರೀಮ್ಗಳು ಮತ್ತು ಹೇರ್ ಆಯಿಲ್ಗಳನ್ನು ಬಳಸಲಾಗುತ್ತದೆ. ಆದರೆ ಮನೆಯಲ್ಲಿಯೇ ಈ ಸಮಸ್ಯೆಗೆ ಕೆಲವೊಂದು ಪರಿಹಾರವಿದ್ದು, ಅದನ್ನ ಬಳಸುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.
ಕೂದಲು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಅದಕ್ಕಾಗಿಯೇ ಕೂದಲಿನ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ವಿಶೇಷವಾಗಿ ಹಸಿರು ಚಹಾ ಎಲೆಗಳು, ಕಪ್ಪು ಜೀರಿಗೆ ಕೂದಲು ದಪ್ಪವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇವುಗಳನ್ನು ಹೇಗೆ ಬಳಸುವುದು ಎಂದು ತಿಳಿದುಕೊಂಡು ಬಳಸಬೇಕು.
2/ 8
ಗ್ರೀನ್ ಟೀ ಆರೋಗ್ಯವನ್ನು ಸುಧಾರಿಸಲು ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಸುಂದರವಾದ ಉದ್ದನೆಯ ಕೂದಲನ್ನು ಪಡೆಯಲು ಸಹ ಸಹಾಯ ಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಈ ಗ್ರೀನ್ ಟೀ ಎಲೆಗಳು ಮತ್ತು ಕಪ್ಪು ಜೀರಿಗೆ ಯಾವುದನ್ನಾದರೂ ಬಳಸಿದರೆ ನಿಮ್ಮ ಕೂದಲು ದಟ್ಟವಾಗಿ ಬೆಳೆಯುತ್ತದೆ.
3/ 8
ಬೇಯಿಸಿದ ಗ್ರೀನ್ ಟೀ ಎಲೆಗಳನ್ನು ನೆತ್ತಿಯ ಮೇಲೆ ನೇರವಾಗಿ ಅನ್ವಯಿಸಬಹುದು. ಹಸಿರು ಚಹಾದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
4/ 8
ಈ ಚಹಾದ ಎಲೆಗಳನ್ನು ನೇರವಾಗಿ ಕೂದಲಿಗೆ ಹಚ್ಚಬಹುದು ಅಥವಾ ತೆಂಗಿನ ಎಣ್ಣೆಯೊಂದಿಗೆ ಸೇರಿಸಿ ಹಚ್ಚಬೇಕು.ಈ ಮಿಶ್ರಣವನ್ನು ಸುಮಾರು 30 ನಿಮಿಷಗಳ ಕಾಲ ತಲೆಯ ಮೇಲೆ ಬಿಡಿ ಮತ್ತು ನಂತರ ಉತ್ತಮ ಶಾಂಪೂ ಮತ್ತು ಕಂಡಿಷನರ್ ಬಳಸಿ ತೊಳೆಯಿರಿ.
5/ 8
ಕಪ್ಪು ಜೀರಿಗೆ ಎಣ್ಣೆ ಕೂದಲು ಆರೋಗ್ಯಕರವಾಗಿ, ಬಲವಾಗಿ ಮತ್ತು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಈ ಎಣ್ಣೆಯಲ್ಲಿ ಥಿಮೊಕ್ವಿನೋನ್ ಎಂಬ ಸಂಯುಕ್ತವಿದೆ. ಇದು ಆಂಟಿಹಿಸ್ಟಮೈನ್ ಅನ್ನು ಸಹ ಹೊಂದಿದೆ.
6/ 8
2 ಚಮಚ ಕಪ್ಪು ಜೀರಿಗೆ ಎಣ್ಣೆಯನ್ನು ತೆಗೆದುಕೊಂಡು ತಲೆಗೆ ಉಜ್ಜಿಕೊಳ್ಳಿ. ನಂತರ ನೆತ್ತಿಯನ್ನು ಮಸಾಜ್ ಮಾಡಿ. ಕೂದಲು ಉದುರುವ ಜಾಗಕ್ಕೆ ಚೆನ್ನಾಗಿ ಮಸಾಜ್ ಮಾಡಿ. ಕೂದಲಿಗೆ ಎಣ್ಣೆಯನ್ನು ಬೇರುಗಳಿಂದ ತುದಿಯವರೆಗೆ ಹಚ್ಚಿ.
7/ 8
ಎಣ್ಣೆಯನ್ನು ಹಚ್ಚಿದ ನಂತರ, ಕೂದಲು 30 ನಿಮಿಷದಿಂದ ಒಂದು ಗಂಟೆಯವರೆಗೆ ಒಣಗಲು ಬಿಡಿ. ತದನಂತರ ನಿಮ್ಮ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ವಾರದಲ್ಲಿ 2-3 ಬಾರಿ ಹೀಗೆ ಮಾಡುವುದರಿಂದ ನಿಮ್ಮ ಕೂದಲು ಚನ್ನಾಗಿ ಬೆಳೆಯುತ್ತದೆ.
8/ 8
ಕೂದಲು ಮತ್ತೆ ಬೆಳೆಯಲು ಎಣ್ಣೆ ಸಹಾಯ ಮಾಡುತ್ತದೆ. ಇದು ಕೂದಲಿನ ಬೆಳವಣಿಗೆಗೆ ಅಗತ್ಯವಾದ ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಅಗತ್ಯವಾದ ಕೊಬ್ಬಿನಾಮ್ಲಗಳು, ಅಮೈನೋ ಆಮ್ಲಗಳು, ಕಬ್ಬಿಣ ಮತ್ತು ವಿಟಮಿನ್ ಸಿ ಮುಂತಾದ ಇತರ ಪೋಷಕಾಂಶಗಳು ಕೂದಲಿಗೆ ಚೆನ್ನಾಗಿ ಕೆಲಸ ಮಾಡುತ್ತವೆ.