Cooking Tips: ಈ ಟಿಪ್ಸ್ ಫಾಲೋ ಮಾಡಿದ್ರೆ ಅಡುಗೆ ತುಂಬಾ ರುಚಿಯಾಗಿರುತ್ತಂತೆ
Simple Kitchen Hacks: ಅಡುಗೆ ಮಾಡುವುದು ಒಂದು ಕಲೆ, ಒಬ್ಬರ ಕೈ ರುಚಿ ಇನ್ನೊಬ್ಬರಿಗಿಂತಲೂ ಭಿನ್ನವಾಗಿರುತ್ತದೆ. ಹಾಗೆಯೇ ಅಡುಗೆ ರುಚಿಯನ್ನು ಹೆಚ್ಚಿಸಲು ವಿಭಿನ್ನ ತಂತ್ರಗಳನ್ನು ಅನುಸರಿಸುತ್ತಾರೆ. ನಿಮ್ಮ ಅಡುಗೆಯ ರುಚಿ ಹೆಚ್ಚಿಸಿಕೊಳ್ಳಲು ಕೆಲ ಟಿಪ್ಸ್ ಇಲ್ಲಿದೆ.
ಅಡುಗೆ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಈಗ ನಾವೆಲ್ಲರೂ ಬಹಳ ಕಡಿಮೆ ಸಮಯವನ್ನು ಹೊಂದಿದ್ದೇವೆ ಇದರ ಪರಿಣಾಮವಾಗಿ, ಅಡುಗೆ ಮಾಡಲು ಸಮಯ ಸಾಕಾಗುವುದಿಲ್ಲ. ಹಾಗಾಗಿ ಕಡಿಮೆ ಸಮಯದಲ್ಲಿ ಒಳ್ಳೆಯ ರುಚಿಕರ ಅಡುಗೆ ಮಾಡುವ ವಿಧಾನ ಇಲ್ಲಿದೆ.
2/ 6
ಆಲೂಗಡ್ಡೆ ಸಿಪ್ಪೆ ಸುಲಿಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ನೀವು ಆಲೂಗಡ್ಡೆಯ ಸಿಪ್ಪೆಯನ್ನು ಬೇಗ ತೆಗೆಯಲು, ಕುದಿಸುವಾಗ ಸ್ವಲ್ಪ ಉಪ್ಪು ಸೇರಿಸಿ ನಂತರ ಆಲೂಗಡ್ಡೆಯ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.
3/ 6
ಪಾಯಸ ಮಾಡುವಾಗ ಹಾಲು ದಪ್ಪವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ನೀವು ಪಾಯಸ ಮಾಡುವಾಗ ಹಾಲು ದಪ್ಪವಾಗದಿದ್ದರೆ ಹಾಲಿನ ಪುಡಿಯನ್ನು ಹಾಕಬಹುದು.
4/ 6
ತೆಂಗಿನಕಾಯಿಯನ್ನು ಯಾವುದೇ ಗ್ರೇವಿ ಅಥವಾ ಸೂಪ್ ಅನ್ನು ದಪ್ಪವಾಗಿಸಲು ಬಳಸಲಾಗುತ್ತದೆ.ಇದನ್ನು ಯಾವುದೇ ತರಕಾರಿಗಳೊಂದಿಗೆ ಸಹ ಹಾಕಿ ಅಡುಗೆ ಮಾಡಬಹುದು.ಆದರೆ ಪದೇ ಪದೇ ತುರಿಯುವುದು ಕಷ್ಟದ ಕೆಲಸ. ಹಾಗಾಗಿ ಕಾಯಿತುರಿಯನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ನೀವು ಅದರಲ್ಲಿ ಕರಿಬೇವನ್ನು ಹಾಕಿಡಿ.
5/ 6
ಅಕ್ಕಿಯನ್ನು ಮೃದುವಾಗಿಸಲು ನೀವು ಅಡುಗೆ ಮಾಡುವಾಗ ಸ್ವಲ್ಪ ತುಪ್ಪ ಅಥವಾ ಎಣ್ಣೆಯನ್ನು ಸೇರಿಸಬಹುದು ಇದರಿಂದ ಅಕ್ಕಿ ಬೇಗನೆ ಬೇಯುತ್ತದೆ. ಅಲ್ಲದೇ ಅನ್ನವು ಉತ್ತಮ ರುಚಿಯನ್ನು ಹೊಂದಿರುತ್ತದೆ.
6/ 6
ಕಾಳುಗಳು ಮತ್ತು ಬೇಳೆಗಳು ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ದಾಲ್ ಮಾಡುವ ಮೊದಲು ಕಾಳು ಅಥವಾ ಬೇಳೆಯನ್ನು ನೆನೆಸಿ ನಂತರ ಬೇಯಿಸಿ.