Hair Care: ಬೇಡ ಶಾಂಪೂಗಳ ಸಹವಾಸ, ಮನೆ ಮದ್ದು ಬಳಸಿದ್ರೆ ಹೊಳೆಯುತ್ತೆ ನಿಮ್ಮ ಕೇಶ!

ಪ್ರತಿಯೊಬ್ಬರಿಗೂ ನಯವಾದ ಹಾಗೂ ಮೃದುವಾದ, ಹೊಳೆಯುವ ಹಾಗೂ ದಪ್ಪ ಕೂದಲು ಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಹಲವು ರಾಸಾಯನಿಕಯುಕ್ತ ಶಾಂಪೂಗಳನ್ನು ಬಳಸಿ ಸೋತು ಹೋಗಿರುತ್ತಾರೆ. ಅಂತವರಿಗೆ ಮನೆಯಲ್ಲೇ ಇದೆ ಮದ್ದು. ಇದರಿಂದ ಹೊಳೆಯುವ ಕೂದಲು ನಿಮ್ಮದಾಗಲಿದೆ.

First published:

  • 18

    Hair Care: ಬೇಡ ಶಾಂಪೂಗಳ ಸಹವಾಸ, ಮನೆ ಮದ್ದು ಬಳಸಿದ್ರೆ ಹೊಳೆಯುತ್ತೆ ನಿಮ್ಮ ಕೇಶ!

    ಮೊಟ್ಟೆ ಮತ್ತು ಬಾದಾಮಿ ಎಣ್ಣೆ: ಮೊಟ್ಟೆಗೆ ಬಾದಾಮಿ ಎಣ್ಣೆ ಸೇರಿಸಿ ನಿಮ್ಮ ಕೂದಲಿಗೆ ಚೆನ್ನಾಗಿ ಹಚ್ಚಿ. ಇದು ನಿಮ್ಮ ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಜೊತೆಗೆ ಕೂದಲನ್ನು ನಯವಾಗಿಸುತ್ತದೆ. ಕೂದಲು ಮೃದುವಾಗುತ್ತದೆ. ಕೂದಲ ಆರೋಗ್ಯ ಸುಧಾರಿಸುತ್ತದೆ. ಮೊಟ್ಟೆ ವಾಸನೆ ಹೋಗಲಾಡಿಸಲು ವೆನಿಲ್ಲಾ ಎಸೆನ್ಸ್ ಸೇರಿಸಬಹುದು.

    MORE
    GALLERIES

  • 28

    Hair Care: ಬೇಡ ಶಾಂಪೂಗಳ ಸಹವಾಸ, ಮನೆ ಮದ್ದು ಬಳಸಿದ್ರೆ ಹೊಳೆಯುತ್ತೆ ನಿಮ್ಮ ಕೇಶ!

    ಮೊಟ್ಟೆ ಮತ್ತು ಬಾದಾಮಿ ಎಣ್ಣೆಗೆ ನೀಲಗಿರಿ ಎಣ್ಣೆ ಸೇರಿಸಿ ಹೇರ್ ಮಾಸ್ಕ್ ತಯಾರಿಸಿ ಹಚ್ಚಿ. ಇದು ಕೂದಲನ್ನು ಆರೋಗ್ಯವಾಗಿರಿಸುತ್ತದೆ. ಪ್ರೀಜಿ ಹೇರ್ ಸಮಸ್ಯೆ ತಡೆಯಲು ಇದು ಸಹಕಾರಿ. ಹೇರ್ ಮಾಸ್ಕ್ ನ್ನು ಸಂಪೂರ್ಣ ಕೂದಲಿನ ಉದ್ದಕ್ಕೂ ಅನ್ವಯಿಸಿ. ಒಂದು ಗಂಟೆ ನಂತರ ಕೂದಲನ್ನು ತೊಳೆಯಿರಿ.

    MORE
    GALLERIES

  • 38

    Hair Care: ಬೇಡ ಶಾಂಪೂಗಳ ಸಹವಾಸ, ಮನೆ ಮದ್ದು ಬಳಸಿದ್ರೆ ಹೊಳೆಯುತ್ತೆ ನಿಮ್ಮ ಕೇಶ!

    ತೆಂಗಿನ ಎಣ್ಣೆಗೆ ಅರೋಮಾ ಥೆರಪಿ ಎಣ್ಣೆ ಸೇರಿಸಿ ಕೂದಲಿಗೆ ಹಚ್ಚಿದರೆ ಸಾಕಷ್ಟು ಪ್ರಯೋಜನಕಾರಿ. ತೆಂಗಿನ ಎಣ್ಣೆ ಕೂದಲಿನ ಆರೋಗ್ಯಕ್ಕೆ ತುಂಬಾ ಉತ್ತಮ ಆಯ್ಕೆ. ಇದಕ್ಕೆ ನೀವು ವಿಟಮಿನ್ ಇ ಸೇರಿಸಬಹುದು. ಇಲ್ಲದಿದ್ದರೆ ರೋಸ್ಮರಿ ಎಣ್ಣೆ ಸಹ ಹಚ್ಚಬಹುದು.

    MORE
    GALLERIES

  • 48

    Hair Care: ಬೇಡ ಶಾಂಪೂಗಳ ಸಹವಾಸ, ಮನೆ ಮದ್ದು ಬಳಸಿದ್ರೆ ಹೊಳೆಯುತ್ತೆ ನಿಮ್ಮ ಕೇಶ!

    ಬಾಳೆಹಣ್ಣು ಮತ್ತು ಹಾಲು ಹಾಗೂ ಜೇನುತುಪ್ಪ ಕೂದಲಿನ ಆರೋಗ್ಯಕ್ಕೆ ಬೆಸ್ಟ್ ಉಪಾಯ. ಇವುಗಳು ನೈಸರ್ಗಿಕ ಪದಾರ್ಥಗಳು. ಇವುಗಳು ಕೂದಲಿನ ಪೋಷಣೆಗೆ ಸಹಕಾರಿ. ಮೊದಲು ಬ್ಲಂಡ್ ಮಾಡಿ ನಂತರ ಹಾಲು ಸೇರಿಸಿ ಪೇಸ್ಟ್ ಮಾಡಿ. ಚೆನ್ನಾಗಿ ಮ್ಯಾಶ್ ಮಾಡಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸಂಪೂರ್ಣ ಕೂದಲಿಗೆ ಹಚ್ಚಿ. ಒಂದು ಗಂಟೆ ನಂತರ ಕೂದಲನ್ನು ತೊಳೆಯಿರಿ.

    MORE
    GALLERIES

  • 58

    Hair Care: ಬೇಡ ಶಾಂಪೂಗಳ ಸಹವಾಸ, ಮನೆ ಮದ್ದು ಬಳಸಿದ್ರೆ ಹೊಳೆಯುತ್ತೆ ನಿಮ್ಮ ಕೇಶ!

    ತಜ್ಞರ ಪ್ರಕಾರ ಬಿಯರ್ ಕೂಡ ಕೂದಲನ್ನು ಮೃದುಗೊಳಿಸುತ್ತದೆ. ಇದು ಕೂದಲಿಗೆ ತೇವಾಂಶ ನೀಡುತ್ತದೆ. ಜೊತೆಗೆ ಪ್ರೀಜಿ ಹೇರ್ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ. ಕೂದಲಿನ ಪೋಷಣೆಗೆ ಸಹ ಪ್ರಯೋಜನಕಾರಿ ಅಂತಾರೆ.

    MORE
    GALLERIES

  • 68

    Hair Care: ಬೇಡ ಶಾಂಪೂಗಳ ಸಹವಾಸ, ಮನೆ ಮದ್ದು ಬಳಸಿದ್ರೆ ಹೊಳೆಯುತ್ತೆ ನಿಮ್ಮ ಕೇಶ!

    ಆವಕಾಡೊ ಮತ್ತು ಜೇನುತುಪ್ಪ ಮತ್ತು ಮೊಸರು ಮಿಕ್ಸ್ ಮಾಡಿ. ಪೇಸ್ಟ್ ತಯಾರಿಸಿ. ಇದನ್ನು ನಿಮ್ಮ ಸಂಪೂರ್ಣ ಕೂದಲಿಗೆ ಚೆನ್ನಾಗಿ ಅನ್ವಯಿಸಿ. ಇದು ಕೂದಲನ್ನು ಪೋಷಿಸುತ್ತದೆ. ಕಾಪಾಡುತ್ತದೆ. ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ. ಶಾಂಪೂ ಹಾಕದೇ ಕೂದಲು ತೊಳೆಯಿರಿ.

    MORE
    GALLERIES

  • 78

    Hair Care: ಬೇಡ ಶಾಂಪೂಗಳ ಸಹವಾಸ, ಮನೆ ಮದ್ದು ಬಳಸಿದ್ರೆ ಹೊಳೆಯುತ್ತೆ ನಿಮ್ಮ ಕೇಶ!

    ಆಲೋವೆರಾ ಜೆಲ್ ಕೂದಲಿಗೆ ಅನ್ವಯಿಸಬಹುದು. ಇದು ಕೂದಲ ಆರೈಕೆಗೆ ಸಹಾಯ ಮಾಡುತ್ತದೆ. ಕೂದಲು ನಯವಾಗಲು ಮತ್ತು ಹೊಳಪು ಬರಲು ಸಹಾಯ ಮಾಡುತ್ತದೆ. ಆಲೋವೆರಾ ಜೆಲ್ ತೆಗೆದುಕೊಂಡು, ಇದಕ್ಕೆ ನಿಮ್ಮ ಆಯ್ಕೆಯ ಎಣ್ಣೆ ಸೇರಿಸಿ ಅನ್ವಯಿಸಿ. ಶಾಂಪೂ ಹಾಕದೇ ತೊಳೆಯಿರಿ.

    MORE
    GALLERIES

  • 88

    Hair Care: ಬೇಡ ಶಾಂಪೂಗಳ ಸಹವಾಸ, ಮನೆ ಮದ್ದು ಬಳಸಿದ್ರೆ ಹೊಳೆಯುತ್ತೆ ನಿಮ್ಮ ಕೇಶ!

    ತೆಂಗಿನ ಹಾಲು, ನಿಂಬೆ ಮತ್ತು ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿರಿ. ಇದು ಕೂದಲಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. 15 ನಿಮಿಷಗಳ ನಂತರ ತೊಳೆಯಿರಿ.

    MORE
    GALLERIES