Types Of Socks: ಒಂದೆರಡು ಬಾರಿ ಧರಿಸಿದ ನಂತ್ರ ಸಾಕ್ಸ್ ಲೂಸ್ ಆಗುತ್ತಾ? ಹಾಗಾದ್ರೆ ಈ ಟಿಪ್ಸ್ ಟ್ರೈ ಮಾಡಿ!

Tips For Selecting And Wearing Socks: ಸಾಕ್ಸ್ ಕೊಳ್ಳುವಾಗ ಜನ ನೋಡಲು ಚೆನ್ನಾಗಿದ್ರೆ ಸಾಕು ಎಂದು ಖರೀದಿಸುತ್ತಾರೆ. ಆದರೆ ಸಾಕ್ಸ್​ಗಳನ್ನು ಆಯ್ಕೆಮಾಡುವಾಗ ವಾಸ್ತವವಾಗಿ ಕೆಲ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಅವು ಯಾವುವು ಎಂದು ನೋಡೋಣ ಬನ್ನಿ.

First published:

  • 17

    Types Of Socks: ಒಂದೆರಡು ಬಾರಿ ಧರಿಸಿದ ನಂತ್ರ ಸಾಕ್ಸ್ ಲೂಸ್ ಆಗುತ್ತಾ? ಹಾಗಾದ್ರೆ ಈ ಟಿಪ್ಸ್ ಟ್ರೈ ಮಾಡಿ!

    ಅನೇಕ ಮಂದಿ ಸಾಕ್ಸ್ಗಳನ್ನು ಪಾದರಕ್ಷೆಯೊಂದಿಗೆ ಧರಿಸಲು ಬಯಸುತ್ತಾರೆ. ಆದರೆ ಸಾಕ್ಸ್ಗಳನ್ನು ಧರಿಸಿದ ಕೆಲ ದಿನಗಳಲ್ಲಿಯೇ ಸಡಿಲಗೊಳ್ಳಲು(ಲೂಸ್) ಆರಂಭವಾಗುತ್ತದೆ. ಸಾಕ್ಸ್ ಕೊಳ್ಳುವಾಗ ಜನ ನೋಡಲು ಚೆನ್ನಾಗಿದ್ರೆ ಸಾಕು ಎಂದು ಖರೀದಿಸುತ್ತಾರೆ. ಆದರೆ ಸಾಕ್ಸ್ಗಳನ್ನು ಆಯ್ಕೆಮಾಡುವಾಗ ವಾಸ್ತವವಾಗಿ ಕೆಲ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಅವು ಯಾವುವು ಎಂದು ನೋಡೋಣ ಬನ್ನಿ. (Image-Canva)

    MORE
    GALLERIES

  • 27

    Types Of Socks: ಒಂದೆರಡು ಬಾರಿ ಧರಿಸಿದ ನಂತ್ರ ಸಾಕ್ಸ್ ಲೂಸ್ ಆಗುತ್ತಾ? ಹಾಗಾದ್ರೆ ಈ ಟಿಪ್ಸ್ ಟ್ರೈ ಮಾಡಿ!

    ಗುಣಮಟ್ಟದತ್ತ ಗಮನ ಕೊಡಿ: ಸಾಕ್ಸ್ ಖರೀದಿಸುವಾಗ ಬಣ್ಣ ಮತ್ತು ವಿನ್ಯಾಸದ ಮೇಲೆ ಮಾತ್ರ ಗಮನಹರಿಸದೇ ಅವುಗಳ ಗುಣಮಟ್ಟಕ್ಕೂ ಗಮನ ಕೊಡಿ. ವಾಸ್ತವವಾಗಿ, ಕಡಿಮೆ ಗುಣಮಟ್ಟದ ಸಾಕ್ಸ್ಗಳಲ್ಲಿ 1-2 ಬ್ಯಾಂಡ್ ಎಲಾಸ್ಟಿಕ್ ಅನ್ನು ಬಳಸಲಾಗುತ್ತದೆ. ಇದರಿಂದಾಗಿ ಸಾಕ್ಸ್ ತ್ವರಿತವಾಗಿ ಸಡಿಲಗೊಳ್ಳುತ್ತದೆ. ಉತ್ತಮ ಗುಣಮಟ್ಟದ ಸಾಕ್ಸ್ಗಳಲ್ಲಿ ಈ ರೀತಿ ಆಗುವುದಿಲ್ಲ. ಬದಲಾಗಿ ಅವು ಹೆಚ್ಚು ಕಾಲ ಬಾಳಿಕೆ ಬರುತ್ತದೆ. (Image-Canva)

    MORE
    GALLERIES

  • 37

    Types Of Socks: ಒಂದೆರಡು ಬಾರಿ ಧರಿಸಿದ ನಂತ್ರ ಸಾಕ್ಸ್ ಲೂಸ್ ಆಗುತ್ತಾ? ಹಾಗಾದ್ರೆ ಈ ಟಿಪ್ಸ್ ಟ್ರೈ ಮಾಡಿ!

    ಸಾಕ್ಸ್ ಆಯ್ಕೆ: ಸರಿಯಾದ ಸಾಕ್ಸ್ ಆಯ್ಕೆ ಮಾಡುವುದು ಕೂಡ ಬಹಳ ಮುಖ್ಯ. ಅನೇಕ ಮಂದಿ ಶೂಗಳ ಜೊತೆಗೆ ಮಿಡ್-ಕಾಫ್ ಸಾಕ್ಸ್ಗಳನ್ನು ಧರಿಸುತ್ತಾರೆ. ಇದರಿಂದಾಗಿ ಕುಳಿತಿರುವಾಗ ಸಾಕ್ಸ್ಗಳು ಸಡಿಲವಾಗುತ್ತವೆ ಮತ್ತು ನಿಮ್ಮ ಲುಕ್ ಕೂಡ ಹಾಳು ಮಾಡುತ್ತವೆ. ಹಾಗಾಗಿ ಯಾವಾಗಲೂ ಔಪಚಾರಿಕ ಪಾದರಕ್ಷೆಗಳೊಂದಿಗೆ ಫುಲ್ ಸಾಕ್ಸ್ಗಳನ್ನು ಧರಿಸಿ. (Image-Canva)

    MORE
    GALLERIES

  • 47

    Types Of Socks: ಒಂದೆರಡು ಬಾರಿ ಧರಿಸಿದ ನಂತ್ರ ಸಾಕ್ಸ್ ಲೂಸ್ ಆಗುತ್ತಾ? ಹಾಗಾದ್ರೆ ಈ ಟಿಪ್ಸ್ ಟ್ರೈ ಮಾಡಿ!

    ಟೈಪ್ ಆಫ್ ಸಾಕ್ಸ್: ನೀವು ಉತ್ತಮವಾಗಿ ಕಾಣಲು, ಫ್ರೀ ಆಗಿರುವ ಸಾಕ್ಸ್ಗಳನ್ನು ಧರಿಸಿ. ಇದಕ್ಕಾಗಿ ಕಡಿಮೆ ಕಟ್ ಬೂಟುಗಳೊಂದಿಗೆ ಪಾದಕ್ಕೆ ಲಾಂಗ್ ಸಾಕ್ಸ್ ಧರಿಸಿ. ಮಧ್ಯಮ ಅಥವಾ ಎತ್ತರದ ಬೂಟುಗಳೊಂದಿಗೆ ಈ ಸಾಕ್ಸ್ ಧರಿಸಬಹುದು. ಅಥ್ಲೆಟಿಕ್ ಬೂಟುಗಳೊಂದಿಗೆ ಈ ತರಹದ ಸಾಕ್ಸ್ಗಳನ್ನು ಕೊಂಡೊಯ್ಯಬಹುದು. ಜೊತೆಗೆ ಈ ಸಾಕ್ಸ್ ಧರಿಸಿದಾಗ ಕಾಲುಗಳು ಸುಂದರವಾಗಿ ಧರಿಸುತ್ತದೆ. (Image-Canva)

    MORE
    GALLERIES

  • 57

    Types Of Socks: ಒಂದೆರಡು ಬಾರಿ ಧರಿಸಿದ ನಂತ್ರ ಸಾಕ್ಸ್ ಲೂಸ್ ಆಗುತ್ತಾ? ಹಾಗಾದ್ರೆ ಈ ಟಿಪ್ಸ್ ಟ್ರೈ ಮಾಡಿ!

    ಟೈಟ್ ಸಾಕ್ಸ್: ಕೆಲವು ದಿನ ಬಳಸಿದ ನಂತರ ಕೂಡ ಹೊಸ ಸಾಕ್ಸ್ಗಳು ಸಹ ಸಡಿಲವಾಗುತ್ತವೆ. ಅಂತಹ ವೇಳೆ ಅವುಗಳನ್ನು ನಿಷ್ಪ್ರಯೋಜಕವೆಂದು ಎಸೆಯುವ ಬದಲು ಮೊದಲೇ ಸ್ಟಿಚ್ ಹಾಕಿಸಿ. ಇದರಿಂದ ನಿಮ್ಮ ಸಾಕ್ಸ್ ಮತ್ತಷ್ಟು ಬಿಗಿಯಾಗಿರುತ್ತದೆ. (Image-Canva)

    MORE
    GALLERIES

  • 67

    Types Of Socks: ಒಂದೆರಡು ಬಾರಿ ಧರಿಸಿದ ನಂತ್ರ ಸಾಕ್ಸ್ ಲೂಸ್ ಆಗುತ್ತಾ? ಹಾಗಾದ್ರೆ ಈ ಟಿಪ್ಸ್ ಟ್ರೈ ಮಾಡಿ!

    ಈ ವಿಷಯಗಳನ್ನು ಸಹ ನೆನಪಿನಲ್ಲಿಡಿ: ನಿಮ್ಮ ಸಾಕ್ಸ್ ಅನ್ನು ಹೆಚ್ಚು ಕಾಲ ಹೊಸದಾಗಿ ಕಾಣುವಂತೆ ಮಾಡಲು, ಮೃದುವಾದ, ತೇವಾಂಶ-ವಿಕಿಂಗ್ ಫ್ಯಾಬ್ರಿಕ್ ಅನ್ನು ಆಯ್ಕೆ ಮಾಡುವುದು ಮುಖ್ಯ. ಅಷ್ಟೇ ಅಲ್ಲ, ಸಾಕ್ಸ್ಗಳ ಸರಿಯಾಗಿ ಫಿಟ್ ಆಗಿದ್ಯಾ ಎಂದು ನೋಡಿಕೊಳ್ಳಿ. ತುಂಬಾ ಬಿಗಿಯಾದ ಅಥವಾ ತುಂಬಾ ಸಡಿಲವಾಗಿರುವ ಸಾಕ್ಸ್ಗಳನ್ನು ಆಯ್ಕೆ ಮಾಡಬೇಡಿ. (Image-Canva)

    MORE
    GALLERIES

  • 77

    Types Of Socks: ಒಂದೆರಡು ಬಾರಿ ಧರಿಸಿದ ನಂತ್ರ ಸಾಕ್ಸ್ ಲೂಸ್ ಆಗುತ್ತಾ? ಹಾಗಾದ್ರೆ ಈ ಟಿಪ್ಸ್ ಟ್ರೈ ಮಾಡಿ!

    ಆಲ್ ಟೈಮ್ ಫೇವರಿಟ್ ಸಾಕ್ಸ್ : ಸಾಕ್ಸ್ ಕೊಳ್ಳಲು ಆಕರ್ಷಕ ಬಣ್ಣಕ್ಕೆ ಒತ್ತು ನೀಡುವ ಬದಲು ಬಿಳಿ, ಕಪ್ಪು, ಕಂದು, ನೀಲಿ ಬಣ್ಣದ ಸಾಕ್ಸ್ ಗಳನ್ನು ಖರೀದಿಸುವುದು ಉತ್ತಮ. ನಿಮ್ಮ ಬಳಿ ಸಾಕ್ಸ್ ಕಲೆಕ್ಷನ್ ಹೆಚ್ಚಿಲ್ಲದಿದ್ದರೂ, ಇವುಗಳನ್ನು ಯಾವುದೇ ಉಡುಪಿನ ಜೊತೆಗೆ ಕೂಡ ಧರಿಸಬಹುದು. (Image-Canva) (Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES