ಇದೇ ರೀತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ತಮಮ್ ಸ್ನೇಹಿತೆಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಆಕೆ ಮೊದಲ ಬಾರಿಗೆ ಗರ್ಭಿಣಿಯಾದ ಬಳಿಕ ನಾಲ್ಕನೇ ತಿಂಗಳು ಚೆಕಾಪ್ಗಾಗಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ನಾನು ಗರ್ಭಿಣಿಯಾಗಿ ನಾಲ್ಕು ತಿಂಗಳು ಮುಗಿದಿದೆ. ಆದರೂ ನನ್ನ ಹೊಟ್ಟೆ ದಪ್ಪ ಆಗಿಲ್ಲ. ಮಗು ಸರಿಯಾಗಿ ಬೆಳವಣಿಗೆ ಆಗುತ್ತಿದ್ಯಾ ಎಂದು ವೈದ್ಯರ ಬಳಿ ಅನುಮಾನ ವ್ಯಕ್ತಪಡಿಸಿದ್ದಾರೆ.
ನಂತರ ಮಗುವಿನ ಬೆಳವಣಿಗೆ ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಂದು ಪರೀಕ್ಷಿಸಿದ ವೈದ್ಯರು, ಮಗುವಿನ ಹೃದಯ ಬಡಿತ ಮತ್ತು ಚಲನೆಗಳು ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ಕೇಳಿ ಸಂತಸಗೊಂಡ ಮಹಿಳೆ ಮನೆಗೆ ನೆಮ್ಮದಿಯಿಂದ ತಲುಪಿದರು. (Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)