Sleeping Tips: ಬೆತ್ತಲೆಯಾಗಿ ಮಲಗುವುದರಿಂದ ಉತ್ತಮ ಆರೋಗ್ಯ! ಏನಿದು ಇಂಟ್ರೆಸ್ಟಿಂಗ್ ಸ್ಟೋರಿ?

ಬಟ್ಟೆ ಧರಿಸದೇ ಮಲಗುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿದೆ ಎಂಬುದು ಸತ್ಯ. ಉತ್ತಮ ನಿದ್ರೆ ನಿಮ್ಮ ಆರೋಗ್ಯವನ್ನು ಹಲವು ವಿಧಗಳಲ್ಲಿ ಸುಧಾರಿಸುತ್ತದೆ. ಹಾಗಾದರೆ ಇದರ ಪ್ರಯೋಜನಗಳೇನು ಎಂಬುವುದರ ಬಗ್ಗೆ ತಿಳಿಯೋಣ ಬನ್ನಿ.

First published:

  • 17

    Sleeping Tips: ಬೆತ್ತಲೆಯಾಗಿ ಮಲಗುವುದರಿಂದ ಉತ್ತಮ ಆರೋಗ್ಯ! ಏನಿದು ಇಂಟ್ರೆಸ್ಟಿಂಗ್ ಸ್ಟೋರಿ?

    ಒಮ್ಮೆ ಕೆಲಸ ಮುಗಿಸಿ ಮನೆಗೆ ಹೋದ ನಂತರ ರಾತ್ರಿ ಮಲಗುವ ವೇಳೆ ನಾವು ಸಡಿಲವಾದ ಬಟ್ಟೆಗಳನ್ನು ಧರಿಸುತ್ತೇವೆ. ಅಂತಹ ಬಟ್ಟೆಗಳನ್ನು ಧರಿಸುವುದರಿಂದ ನಮಗೆ ಕಂಫರ್ಟ್ ಫೀಲ್ ಜೊತೆಗೆ, ಆರಾಮದಾಯಕವಾದ ಬಟ್ಟೆಗಳಲ್ಲಿ ಮಲಗುವುದರಿಂದ ಉತ್ತಮ ನಿದ್ರೆ ಬರುತ್ತದೆ. ಹಾಗಾಗಿ ಜನ ಈ ರೀತಿ ಮಲಗುತ್ತಾರೆ.

    MORE
    GALLERIES

  • 27

    Sleeping Tips: ಬೆತ್ತಲೆಯಾಗಿ ಮಲಗುವುದರಿಂದ ಉತ್ತಮ ಆರೋಗ್ಯ! ಏನಿದು ಇಂಟ್ರೆಸ್ಟಿಂಗ್ ಸ್ಟೋರಿ?

    ಆದರೆ ಈ ವಿಚಾರ ತಿಳಿದ್ರೆ ನಿಮಗೆ ಶಾಕ್ ಆಗಬಹುದು, ಏಕೆಂದರೆ ಬಟ್ಟೆ ಧರಿಸದೇ ಮಲಗುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿದೆ ಎಂಬುದು ಸತ್ಯ. ಉತ್ತಮ ನಿದ್ರೆ ನಿಮ್ಮ ಆರೋಗ್ಯವನ್ನು ಹಲವು ವಿಧಗಳಲ್ಲಿ ಸುಧಾರಿಸುತ್ತದೆ. ಹಾಗಾದರೆ ಇದರ ಪ್ರಯೋಜನಗಳೇನು ಎಂಬುವುದರ ಬಗ್ಗೆ ತಿಳಿಯೋಣ ಬನ್ನಿ.

    MORE
    GALLERIES

  • 37

    Sleeping Tips: ಬೆತ್ತಲೆಯಾಗಿ ಮಲಗುವುದರಿಂದ ಉತ್ತಮ ಆರೋಗ್ಯ! ಏನಿದು ಇಂಟ್ರೆಸ್ಟಿಂಗ್ ಸ್ಟೋರಿ?

    ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತೆ: ಬೆತ್ತಲೆಯಾಗಿ ಮಲಗುವುದರಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆ ಆಗುತ್ತದೆ. ವಿಶೇಷವಾಗಿ ನೀವು ನಿಮ್ಮ ಸಂಗಾತಿಯೊಂದಿಗೆ ಮಲಗಿದರೆ, ಚರ್ಮದಿಂದ ಚರ್ಮಕ್ಕೆ ಸಂಪರ್ಕವು ದೇಹದಲ್ಲಿ ಆಕ್ಸಿಟೋಸಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ನೀವು ಏಕಾಂಗಿಯಾಗಿ ಮಲಗಿದರೆ, ಅದು ನಿಮ್ಮ ದೇಹವನ್ನು ತಂಪಾಗಿರಿಸುತ್ತದೆ. ಅಲ್ಲದೇ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

    MORE
    GALLERIES

  • 47

    Sleeping Tips: ಬೆತ್ತಲೆಯಾಗಿ ಮಲಗುವುದರಿಂದ ಉತ್ತಮ ಆರೋಗ್ಯ! ಏನಿದು ಇಂಟ್ರೆಸ್ಟಿಂಗ್ ಸ್ಟೋರಿ?

    ತೂಕ ಹೆಚ್ಚಾಗುವುದಿಲ್ಲ: ಉತ್ತಮ ನಿದ್ರೆ ಮಾಡದಿದ್ದರೆ ತೂಕ ಹೆಚ್ಚಾಗಬಹುದು ಎಂಬ ವಿಚಾರ ಸಂಶೋಧನೆಯಿಂದ ತಿಳಿದುಬಂದಿದೆ. ಬಟ್ಟೆ ಇಲ್ಲದೇ ಮಲಗುವುದರಿಂದ ಉತ್ತಮ ನಿದ್ರೆಯನ್ನು ಪಡೆಯಬಹುದು ಮತ್ತು ತೂಕ ಕೂಡ ಹೆಚ್ಚಾಗುವುದಿಲ್ಲ. ಜೊತೆಗೆ, ಬಟ್ಟೆ ಇಲ್ಲದೇ ಮಲಗುವುದು ನಿಮ್ಮ ದೇಹವನ್ನು ತಂಪಾಗಿರಿಸುತ್ತದೆ. ಇದು ಕೊಬ್ಬಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸುತ್ತದೆ. ದೇಹದಲ್ಲಿ ಕಂದು ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸುವುದರಿಂದ ಬೊಜ್ಜು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

    MORE
    GALLERIES

  • 57

    Sleeping Tips: ಬೆತ್ತಲೆಯಾಗಿ ಮಲಗುವುದರಿಂದ ಉತ್ತಮ ಆರೋಗ್ಯ! ಏನಿದು ಇಂಟ್ರೆಸ್ಟಿಂಗ್ ಸ್ಟೋರಿ?

    ಹೃದ್ರೋಗ ಮತ್ತು ಟೈಪ್-2 ಮಧುಮೇಹದ ಅಪಾಯ ಕಡಿಮೆ: ಯುಎಸ್ ಸಿಡಿಸಿ ಪ್ರಕಾರ, ನಿದ್ರೆಯ ಕೊರತೆಯು ಇತರ ಸಮಸ್ಯೆಗಳ ಜೊತೆಗೆ ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಬಟ್ಟೆ ಕಳಚಿ ಮಲಗಿದರೆ ಹೆಚ್ಚು ಕಾಲ ಚೆನ್ನಾಗಿ ನಿದ್ರೆ ಮಾಡಬಹುದು. ಇದು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

    MORE
    GALLERIES

  • 67

    Sleeping Tips: ಬೆತ್ತಲೆಯಾಗಿ ಮಲಗುವುದರಿಂದ ಉತ್ತಮ ಆರೋಗ್ಯ! ಏನಿದು ಇಂಟ್ರೆಸ್ಟಿಂಗ್ ಸ್ಟೋರಿ?

    ಪುರುಷ ಫಲವತ್ತತೆ ಹೆಚ್ಚಾಗುತ್ತದೆ: ಬಟ್ಟೆ ಇಲ್ಲದೇ ಮಲಗುವುದರಿಂದ ಪುರುಷರಿಗೂ ಲಾಭವಿದೆ. ಇತ್ತೀಚಿನ ಅಧ್ಯಯನವು ಬಿಗಿಯಾದ ಒಳ ಉಡುಪು ಮತ್ತು ಕಡಿಮೆ ವೀರ್ಯದ ನಡುವಿನ ಆಳವಾದ ಸಂಪರ್ಕವನ್ನು ಬಹಿರಂಗಪಡಿಸಿದೆ. ಅಧ್ಯಯನದ 656 ಪುರುಷರಲ್ಲಿ, ಬಾಕ್ಸರ್ಗಳನ್ನು ಧರಿಸಿದವರು ಬಿಗಿಯಾದ ಒಳ ಉಡುಪುಗಳನ್ನು ಧರಿಸಿದವರಿಗಿಂತ ಹೆಚ್ಚಿನ ವೀರ್ಯವನ್ನು ಹೊಂದಿದ್ದಾರೆ.

    MORE
    GALLERIES

  • 77

    Sleeping Tips: ಬೆತ್ತಲೆಯಾಗಿ ಮಲಗುವುದರಿಂದ ಉತ್ತಮ ಆರೋಗ್ಯ! ಏನಿದು ಇಂಟ್ರೆಸ್ಟಿಂಗ್ ಸ್ಟೋರಿ?

    ಯೋನಿ ಆರೋಗ್ಯವನ್ನು ಸುಧಾರಿಸುತ್ತದೆ: ಬಿಗಿಯಾದ ಬಟ್ಟೆ ಅಥವಾ ಒಳ ಉಡುಪುಗಳನ್ನು ಧರಿಸುವುದರಿಂದ ನೀವು ಬೆವರಿದರೆ, ಯೋನಿಯ ಬಳಿ ಯೀಸ್ಟ್ ಸೋಂಕು ಬರುವ ಅಪಾಯ ಹೆಚ್ಚಾಗಬಹುದು. ಅದರಲ್ಲೂ ಒಳಉಡುಪು ಬದಲಿಸಿದ ನಂತರ ರಾತ್ರಿ ಮಲಗಲು ಸಾಧ್ಯವಾಗದಿದ್ದರೆ. ಬೆತ್ತಲೆಯಾಗಿ ಮಲಗುವುದು ಯೀಸ್ಟ್ ಸೋಂಕನ್ನು ತಡೆಯುತ್ತದೆ ಮತ್ತು ಯೋನಿಯ ಆರೋಗ್ಯವನ್ನು ಕಾಪಾಡುತ್ತದೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿ ಆಗಿದೆ)

    MORE
    GALLERIES