Skin Care: ತ್ವಚೆ ಚೆನ್ನಾಗಿರಲು ಕೊಲಾಜೆನ್ ತುಂಬಾ ಮುಖ್ಯ, ಅದಕ್ಕಾಗಿ ಹೀಗೆ ಮಾಡಿ

ತ್ವಚೆಯ ಸಮಸ್ಯೆಗಳು ದೀರ್ಘಕಾಲ ಸರಿಯಾಗದೇ ಇದ್ದರೆ ಚಿಂತೆಯಾಗುತ್ತದೆ. ತ್ವಚೆಯ ಆರೈಕೆಗೆ ಎಲ್ಲಾ ಸೌಂದರ್ಯವರ್ಧಕಗಳು ಮತ್ತು ಮನೆಮದ್ದುಗಳನ್ನು ಪ್ರಯತ್ನಿಸಿದ ಬಳಿಕವೂ ಚರ್ಮದ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗದಿದ್ದರೆ ಚರ್ಮದ ಕೊಲಾಜೆನ್ ಅಂಶದ ಬಗ್ಗೆ ಗಮನಹರಿಸಿ. ಕೊಲಾಜೆನ್ ದೇಹದಲ್ಲಿ ಈಗಾಗಲೇ ಇರುವ ನೈಸರ್ಗಿಕ ಪ್ರೋಟೀನ್ ಆಗಿದೆ.

First published:

  • 18

    Skin Care: ತ್ವಚೆ ಚೆನ್ನಾಗಿರಲು ಕೊಲಾಜೆನ್ ತುಂಬಾ ಮುಖ್ಯ, ಅದಕ್ಕಾಗಿ ಹೀಗೆ ಮಾಡಿ

    ಕೊಲಾಜೆನ್ ತ್ವಚೆಯ ಸಮಸ್ಯೆ ಕಡಿಮೆ ಮಾಡುತ್ತದೆ. ಇದು ಮೂಳೆಗಳು, ಚರ್ಮ, ಕೂದಲು, ಸ್ನಾಯುಗಳು, ಸ್ನಾಯುರಜ್ಜುಗಳು ಮತ್ತು ಅಸ್ಥಿರಜ್ಜುಗಳಿಗೆ ಬಿಲ್ಡಿಂಗ್ ಬ್ಲಾಕ್ ಆಗಿ ಕೆಲಸ ಮಾಡುತ್ತದೆ. ಕೊಲಾಜೆನ್ ಕೊರತೆಯು ಅಕಾಲಿಕ ವಯಸ್ಸಾಗುವಿಕೆ ಸಮಸ್ಯೆ ತಂದೊಡ್ಡುತ್ತದೆ.

    MORE
    GALLERIES

  • 28

    Skin Care: ತ್ವಚೆ ಚೆನ್ನಾಗಿರಲು ಕೊಲಾಜೆನ್ ತುಂಬಾ ಮುಖ್ಯ, ಅದಕ್ಕಾಗಿ ಹೀಗೆ ಮಾಡಿ

    ಆಹಾರದಲ್ಲಿ ನೀವು ಹೆಚ್ಚು ಸಕ್ಕರೆ ಆಹಾರ ಸೇವಿಸುವುದು, ಬಾಹ್ಯ ಮಾಲಿನ್ಯ, ಧೂಮಪಾನ ಚಟ ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದಾಗಿ ಕೊಲಾಜೆನ್ ಉತ್ಪಾದನೆ ಕೆಟ್ಟ ಪರಿಣಾಮ ಬೀರುತ್ತವೆ. ಇದು ಚರ್ಮಕ್ಕೆ ಸಂಬಂಧಿಸಿದ ವಿವಿಧ ರೀತಿಯ ಸಮಸ್ಯೆ ಹೆಚ್ಚಿಸುತ್ತದೆ. ದೇಹದಲ್ಲಿ ಕೊಲಾಜೆನ್ ಪ್ರಮಾಣ ಹೇಗೆ ಕಾಪಾಡಿಕೊಳ್ಳುವುದು ನೋಡೋಣ.

    MORE
    GALLERIES

  • 38

    Skin Care: ತ್ವಚೆ ಚೆನ್ನಾಗಿರಲು ಕೊಲಾಜೆನ್ ತುಂಬಾ ಮುಖ್ಯ, ಅದಕ್ಕಾಗಿ ಹೀಗೆ ಮಾಡಿ

    ಕೊಲಾಜೆನ್ ಅನ್ನು ಹೆಚ್ಚಿಸಲು ಕೊಲಾಜೆನ್ ಪೂರಕ ಸೇವಿಸಿ. ಇದು ಚರ್ಮ ಮತ್ತು ಮೂಳೆಗಳ ಆರೋಗ್ಯಕ್ಕೆ ಸಹಕಾರಿ. ಚರ್ಮದ ಸ್ಥಿತಿಸ್ಥಾಪಕತ್ವ ಮತ್ತು ಜಲಸಂಚಯ ಕಾಪಾಡುತ್ತದೆ. ಕೊಲಾಜೆನ್ ಪೂರಕಗಳ ಸೇವನೆಯು ಚರ್ಮದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

    MORE
    GALLERIES

  • 48

    Skin Care: ತ್ವಚೆ ಚೆನ್ನಾಗಿರಲು ಕೊಲಾಜೆನ್ ತುಂಬಾ ಮುಖ್ಯ, ಅದಕ್ಕಾಗಿ ಹೀಗೆ ಮಾಡಿ

    ಕೊಲಾಜೆನ್ ಉತ್ಪಾದನೆಗೆ ವಿಟಮಿನ್ ಸಿ ಬೇಕು. ವಿಟಮಿನ್ ಸಿ ಕೊಲಾಜೆನ್ ಅನ್ನು ನಿಯಂತ್ರಿಸುತ್ತದೆ. ಬಲವಾದ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ. ಚರ್ಮದ ಆರೋಗ್ಯ ಕಾಪಾಡುತ್ತದೆ. ತ್ವಚೆಯ ಆರೋಗ್ಯಕ್ಕೆ ವಿಟಮಿನ್ ಸಿ ಸಮೃದ್ಧ ಪದಾರ್ಥ ಸೇವಿಸಿ, ಇದು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ.

    MORE
    GALLERIES

  • 58

    Skin Care: ತ್ವಚೆ ಚೆನ್ನಾಗಿರಲು ಕೊಲಾಜೆನ್ ತುಂಬಾ ಮುಖ್ಯ, ಅದಕ್ಕಾಗಿ ಹೀಗೆ ಮಾಡಿ

    ವಿವಿಧ ತ್ವಚೆಯ ಸಮಸ್ಯೆ ನಿವಾರಣೆಗೆ ಅಲೋವೆರಾ ಪರಿಣಾಮಕಾರಿ ಮನೆಮದ್ದಾಗಿದೆ. ಚರ್ಮದ ಆರೈಕೆಗೆ ಸಾಕಷ್ಟು ಲಾಭಕಾರಿ. ಚರ್ಮಕ್ಕೆ ಅಲೋವೆರಾ ಹಚ್ಚಿದರೆ, ಸೇವಿಸಿದರೆ ಚರ್ಮಕ್ಕೆ ಸಾಕಷ್ಟು ಜಲಸಂಚಯನ ಸಿಗುತ್ತದೆ. ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳ ಸಮಸ್ಯೆ ಕಡಿಮೆಯಾಗುತ್ತದೆ. ಇದರಲ್ಲಿರುವ ಹೈಲುರಾನಿಕ್ ಆಮ್ಲವು ಕೊಲಾಜೆನ್ ಹೆಚ್ಚಿಸುತ್ತದೆ.

    MORE
    GALLERIES

  • 68

    Skin Care: ತ್ವಚೆ ಚೆನ್ನಾಗಿರಲು ಕೊಲಾಜೆನ್ ತುಂಬಾ ಮುಖ್ಯ, ಅದಕ್ಕಾಗಿ ಹೀಗೆ ಮಾಡಿ

    ತ್ವಚೆಯ ಸಮಸ್ಯೆ ಕಡಿಮೆ ಮಾಡಲು ಸರಿಯಾಗಿ ನಿದ್ದೆ ಮಾಡುವುದು ಅತ್ಯವಶ್ಯಕ. ರಾತ್ರಿ ಸರಿಯಾದ ಸಮಯಕ್ಕೆ ಮಲಗಿ. ಚರ್ಮಕ್ಕೆ ನಿದ್ರೆ ಬಹಳ ಮುಖ್ಯ. ನಿದ್ರೆಯ ಕೊರತೆಯು ದೇಹದಲ್ಲಿ ಕಾರ್ಟಿಸೋಲ್ ಪ್ರಮಾಣ ಹೆಚ್ಚಿಸುತ್ತದೆ. ಈ ಒತ್ತಡದ ಹಾರ್ಮೋನ್ ಕಾಲಜನ್ ಅನ್ನು ಒಡೆಯುತ್ತದೆ. ನಿದ್ರೆ ಮತ್ತು ಕೊಲಾಜೆನ್ ಉತ್ಪಾದನೆ ಮಧ್ಯೆ ಸಂಪರ್ಕವಿದೆ.

    MORE
    GALLERIES

  • 78

    Skin Care: ತ್ವಚೆ ಚೆನ್ನಾಗಿರಲು ಕೊಲಾಜೆನ್ ತುಂಬಾ ಮುಖ್ಯ, ಅದಕ್ಕಾಗಿ ಹೀಗೆ ಮಾಡಿ

    ಮುಖಕ್ಕೆ ಮಸಾಜ್ ಮಾಡಿ. ಇದು ಚರ್ಮಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಸಾಕಷ್ಟು ಆಮ್ಲಜನಕವು ಚರ್ಮದ ಪ್ರತಿಯೊಂದು ಕೋಶ ತಲುಪುತ್ತದೆ. ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಕೊಲಾಜೆನ್ ಸಂಶ್ಲೇಷಣೆ ಸುಧಾರಿಸುತ್ತದೆ. ಸೂಕ್ಷ್ಮ ರೇಖೆಗಳು, ಸುಕ್ಕುಗಳು, ಪಿಗ್ಮೆಂಟೇಶನ್ ಮುಂತಾದ ಸಮಸ್ಯೆ ಕಡಿಮೆ ಮಾಡುತ್ತದೆ.

    MORE
    GALLERIES

  • 88

    Skin Care: ತ್ವಚೆ ಚೆನ್ನಾಗಿರಲು ಕೊಲಾಜೆನ್ ತುಂಬಾ ಮುಖ್ಯ, ಅದಕ್ಕಾಗಿ ಹೀಗೆ ಮಾಡಿ

    ಮ್ಯಾಂಗನೀಸ್, ಸತು ಮತ್ತು ತಾಮ್ರ ಪೋಷಕಾಂಶ ಸಮೃದ್ಧ ಆಹಾರ ಸೇವಿಸಿ. ಇದು ಕೊಲಾಜೆನ್ ಹೆಚ್ಚಿಸುತ್ತದೆ. ಸತುವು ಕೊಲಾಜೆನ್ ಉತ್ಪಾದನೆಗೆ ಅಗತ್ಯವಾಗಿದೆ. ಮ್ಯಾಂಗನೀಸ್ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ. ಅಮೈನೋ ಆಮ್ಲಗಳ ಉತ್ಪಾದನೆ ಹೆಚ್ಚಿಸುತ್ತದೆ.

    MORE
    GALLERIES