Skin Care: ಮನೆ ಮದ್ದುಗಳ ಅತಿ ಬಳಕೆ ಒಳ್ಳೆಯದಲ್ಲ, ತ್ವಚೆ ಹೊಳೆಯುವ ಬದಲು ಹಾಳಾಗಬಹುದು!

ಇತ್ತೀಚಿನ ದಿನಗಳಲ್ಲಿ ಮುಖದ ಸೌಂದರ್ಯ ಹೆಚ್ಚಿಸಲು ಮನೆಮದ್ದುಗಳ ಬಳಕೆ ಸಾಕಷ್ಟು ಪರಿಣಾಮಕಾರಿ. ಇದು ರಾಸಾಯನಿಕ ಮುಕ್ತವಾಗಿದ್ದು, ತ್ವಚೆಯ ಆರೈಕೆಗೆ ಬೆಸ್ಟ್ ಆಯ್ಕೆ ಎಂದು ಹೇಳಲಾಗುತ್ತದೆ. ಆದರೆ ಈ ಮನೆಮದ್ದುಗಳನ್ನು ಸರಿಯಾಗಿ ಬಳಸದೇ ಹೋದರೆ, ತ್ವಚೆಗೆ ಅನೇಕ ಬಾರಿ ಬಳಕೆ ಮಾಡಿದರೆ ಅದು ತ್ವಚೆಯನ್ನು ಹಾಳು ಮಾಡುತ್ತದೆ. ಹಾಗಾಗಿ ಕೆಲವು ಮನೆಮದ್ದುಗಳನ್ನು ಹೇಗೆ ಬಳಸಬೇಕು, ಸರಿಯಾದ ವಿಧಾನ ಯಾವುದು ಎಂದು ಇಲ್ಲಿ ತಿಳಿಯಿರಿ...

First published:

  • 18

    Skin Care: ಮನೆ ಮದ್ದುಗಳ ಅತಿ ಬಳಕೆ ಒಳ್ಳೆಯದಲ್ಲ, ತ್ವಚೆ ಹೊಳೆಯುವ ಬದಲು ಹಾಳಾಗಬಹುದು!

    ತ್ವಚೆಗೆ ನೈಸರ್ಗಿಕ ಹೊಳಪು ತರಲು ನೈಸರ್ಗಿಕ ವಸ್ತುಗಳು ಸಹಕಾರಿ. ಇದು ಚರ್ಮದ ಆರೋಗ್ಯ ಸುಧಾರಿಸುತ್ತದೆ. ಮನೆ ಮದ್ದುಗಳು ಚರ್ಮದ ಆರೋಗ್ಯ ಮತ್ತು ಆರೈಕೆಗೆ ಪರಿಣಾಮಕಾರಿ. ಆದರೆ ಅತಿಯಾಗಿ ಬಳಸುವುದು ಒಳ್ಳೆಯದಲ್ಲ. ಸ್ಕ್ರಬ್ಬಿಂಗ್‌ಗೆ ಸಕ್ಕರೆಯನ್ನು ಅತಿಯಾಗಿ ಬಳಸಬೇಡಿ. ತ್ವಚೆಯ ಆರೈಕೆಗೆ ಸಕ್ಕರೆಯನ್ನು ಸ್ಕ್ರಬ್ಬಿಂಗ್ ಮಾಡಲು ಅಕ್ಕಿ ಹಿಟ್ಟು ಅಥವಾ ಲೈಟ್ ಸ್ಕ್ರಬ್ ಬಳಸಿ ತಯಾರಿಸಿ, ಹಚ್ಚಿ.

    MORE
    GALLERIES

  • 28

    Skin Care: ಮನೆ ಮದ್ದುಗಳ ಅತಿ ಬಳಕೆ ಒಳ್ಳೆಯದಲ್ಲ, ತ್ವಚೆ ಹೊಳೆಯುವ ಬದಲು ಹಾಳಾಗಬಹುದು!

    ತ್ವಚೆಗೆ ನಿಂಬೆಯನ್ನು ನೇರವಾಗಿ ಅನ್ವಯಿಸಬೇಡಿ. ಯಾಕಂದ್ರೆ ಇದು ಕೆಂಪು ದದ್ದು, ತುರಿಕೆ ಮತ್ತು ಚರ್ಮದ ಕಿರಿಕಿರಿ ಉಂಟು ಮಾಡುತ್ತದೆ. ಹಾಗಾಗಿ ನಿಂಬೆಯನ್ನು ನೀವು ಕಡಲೆಹಿಟ್ಟಿನ ಜೊತೆ ಬೆರೆಸಿ ಹಚ್ಚುವುದು ಉತ್ತಮ.

    MORE
    GALLERIES

  • 38

    Skin Care: ಮನೆ ಮದ್ದುಗಳ ಅತಿ ಬಳಕೆ ಒಳ್ಳೆಯದಲ್ಲ, ತ್ವಚೆ ಹೊಳೆಯುವ ಬದಲು ಹಾಳಾಗಬಹುದು!

    ಫೇಸ್ ಪ್ಯಾಕ್‌ಗೆ ಅಡುಗೆ ಸೋಡಾದ ಅತಿಯಾದ ಬಳಕೆ ಚರ್ಮಕ್ಕೆ ಹಾನಿ ಮಾಡುತ್ತದೆ. ಮುಖದ ಮೇಲೆ ಅಡಿಗೆ ಸೋಡಾವನ್ನು ಹೆಚ್ಚು ಬಳಸಿದರೆ ಅಥವಾ ನೇರವಾಗಿ ಬಳಸಿದರೆ ಅದು ಚರ್ಮದ ಶುಷ್ಕತೆ, ಕಿರಿಕಿರಿ ಮತ್ತು ಅಡ್ಡ ಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ ಅಡುಗೆ ಸೋಡಾವನ್ನು ವಾರಕ್ಕೆ ಒಮ್ಮೆ ಮಾತ್ರ ಯಾವುದಾದರೂ ಫೇಸ್ ಪ್ಯಾಕ್ ಜೊತೆ ಬಳಸಬಹುದು.

    MORE
    GALLERIES

  • 48

    Skin Care: ಮನೆ ಮದ್ದುಗಳ ಅತಿ ಬಳಕೆ ಒಳ್ಳೆಯದಲ್ಲ, ತ್ವಚೆ ಹೊಳೆಯುವ ಬದಲು ಹಾಳಾಗಬಹುದು!

    ಫೇಸ್ ಪ್ಯಾಕ್‌ನಲ್ಲಿ ಟೊಮೆಟೊ ರಸ ಉತ್ತಮ ಆಯ್ಕೆ. ಆದ್ರೆ ಅತಿಯಾಗಿ ಬಳಸಬೇಡಿ ಅಥವಾ ನೇರವಾಗಿ ಟೊಮೆಟೋ ರಸ ಹಚ್ಚಬೇಡಿ. ಇದರಲ್ಲೂ ಸಿಟ್ರಿಕ್ ಆಮ್ಲವಿದೆ. ಇದರ ಬಳಕೆಯು ಚರ್ಮದ ಕಿರಿಕಿರಿ ಉಂಟು ಮಾಡುತ್ತದೆ. ಚರ್ಮ ಸೂಕ್ಷ್ಮವಾಗಿದ್ದರೆ ಟೊಮೆಟೋ ಬಳಕೆ ತಪ್ಪಿಸಿ. ಟೊಮೆಟೋವನ್ನು ಕಡಲೆಹಿಟ್ಟು, ಅಕ್ಕಿ ಹಿಟ್ಟು ಜೊತೆ ಸೇರಿಸಿ ವಾರಕ್ಕೆ ಎರಡು ಬಾರಿ ಅನ್ವಯಿಸಿ.

    MORE
    GALLERIES

  • 58

    Skin Care: ಮನೆ ಮದ್ದುಗಳ ಅತಿ ಬಳಕೆ ಒಳ್ಳೆಯದಲ್ಲ, ತ್ವಚೆ ಹೊಳೆಯುವ ಬದಲು ಹಾಳಾಗಬಹುದು!

    ಅರಿಶಿನವು ಎಲ್ಲಾ ರೀತಿಯ ಚರ್ಮದ ಆರೈಕೆಗೂ ಪ್ರಯೋಜನಕಾರಿ. ಇದು ಶಕ್ತಿಯುತ ಉತ್ಕರ್ಷಣ ನಿರೋಧಕವಾಗಿದೆ. ತ್ವಚೆಗೆ ಅದ್ಭುತವಾದ ಹೊಳಪನ್ನು ಸಾಧಿಸಲು ಸಹಾಯ ಮಾಡುತ್ತದೆ. ಅರಿಶಿನವನ್ನು ಕಡಲೆ ಬೇಳೆ ಹಿಟ್ಟಿನೊಂದಿಗೆ ಮಿಶ್ರಣ ಮಾಡಿ ಹಚ್ಚಿರಿ.

    MORE
    GALLERIES

  • 68

    Skin Care: ಮನೆ ಮದ್ದುಗಳ ಅತಿ ಬಳಕೆ ಒಳ್ಳೆಯದಲ್ಲ, ತ್ವಚೆ ಹೊಳೆಯುವ ಬದಲು ಹಾಳಾಗಬಹುದು!

    ಅರಿಶಿನವನ್ನು ನೀವು ನೇರವಾಗಿ ಬಳಸುವ ಬದಲು ಹಲವು ವಿಧದ ಫೇಸ್ ಪ್ಯಾಕ್ ಮೂಲಕ ಅನ್ವಯಿಸಬಹುದು. ಹನಿ, ರೋಸ್ ವಾಟರ್‌ನಲ್ಲಿ ಅರಿಶಿನ ಸೇರಿಸಿ, ಮುಖ, ಕುತ್ತಿಗೆ ಭಾಗಕ್ಕೆ ಹಚ್ಚಿರಿ. ಇದು ನಂತರ ತಂಪಾದ ನೀರಿನಿಂದ ತೊಳೆಯಿರಿ. ಇದು ಚರ್ಮಕ್ಕೆ ಆರೈಕೆ ನೀಡುತ್ತದೆ. ಆದರೆ ಅತಿಯಾಗಿ ಬಳಸಬೇಡಿ.

    MORE
    GALLERIES

  • 78

    Skin Care: ಮನೆ ಮದ್ದುಗಳ ಅತಿ ಬಳಕೆ ಒಳ್ಳೆಯದಲ್ಲ, ತ್ವಚೆ ಹೊಳೆಯುವ ಬದಲು ಹಾಳಾಗಬಹುದು!

    ಜೇನುತುಪ್ಪವನ್ನು ಎಣ್ಣೆಯುಕ್ತ, ಮೊಡವೆ ಪೀಡಿತ ಮತ್ತು ಸಂಯೋಜನೆ ಹೊಂದಿರುವ ಚರ್ಮಕ್ಕೂ ಬಳಕೆ ಮಾಡುತ್ತಾರೆ. ಜೇನುತುಪ್ಪ ನೈಸರ್ಗಿಕ ಮಾಯಿಶ್ಚರೈಸರ್ ಆಗಿದೆ. ಆದರೆ ಹನಿಯನ್ನು ನೇರವಾಗಿ ದಿನವೂ ಚರ್ಮಕ್ಕೆ ಹಚ್ಚುವುದನ್ನು ತಪ್ಪಿಸಿ. ಇದನ್ನು ಫೇಸ್ ಪ್ಯಾಕ್ ನಲ್ಲಿ ಬಳಸಿ ಅನ್ವಯಿಸಿ. ಕಲೆ ಮೊಡವೆ ಹೋಗಲಾಡಿಸುತ್ತದೆ.

    MORE
    GALLERIES

  • 88

    Skin Care: ಮನೆ ಮದ್ದುಗಳ ಅತಿ ಬಳಕೆ ಒಳ್ಳೆಯದಲ್ಲ, ತ್ವಚೆ ಹೊಳೆಯುವ ಬದಲು ಹಾಳಾಗಬಹುದು!

    ಆಲಿವ್ ಎಣ್ಣೆಯನ್ನು ಚರ್ಮಕ್ಕೆ ಬಳಸುತ್ತಾರೆ. ತ್ವಚೆಗೆ ಆಲಿವ್ ಎಣ್ಣೆಯ ಬಳಕೆಯು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ. ಆಲಿವ್ ಎಣ್ಣೆ ಚರ್ಮದ ಹಾನಿ ಸರಿಪಡಿಸುತ್ತದೆ. ಆದರೆ ಇದನ್ನು ಹಗಲು ಹಚ್ಚಿಕೊಂಡು ಬಿಸಿಲಿಗೆ, ದೂಳಿನಲ್ಲಿ ಓಡಾಡುವುದನ್ನು ತಪ್ಪಿಸಿ. ಆಲಿವ್ ಎಣ್ಣೆ ಮಸಾಜ್ ಮಾಡಿ.

    MORE
    GALLERIES