Milk Cream Benefits: ಹಾಲಿನ ಕೆನೆಯಲ್ಲಿ ಅಡಗಿದೆ ನಿಮ್ಮ ಸೌಂದರ್ಯದ ಗುಟ್ಟು
Benefits of Milk Cream: ಹಾಲಿನ ಕೆನೆಯನ್ನು ಹೆಚ್ಚಿನ ಜನರು ಇಷ್ಟಪಡುವುದಿಲ್ಲ, ಇದನ್ನು ಕೆಲವರು ಮನೆಯಲ್ಲಿ ತುಪ್ಪ ಮಾಡುವಾಗ ಬಳಸುತ್ತಾರೆ. ಆದರೆ, ಈ ಹಾಲಿನ ಕೆನೆ ನಮ್ಮ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಹೊಳಪು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅನೇಕರಿಗೆ ಗೊತ್ತಿಲ್ಲ. ಹಾಗಾದ್ರೆ ಈ ಹಾಲಿನ ಕೆನೆಯ ಪ್ರಯೋಜನಗಳೇನು ಎಂಬುದು ಇಲ್ಲಿದೆ.
ಚಳಿಗಾಲದಲ್ಲಿ ಚರ್ಮದ ಸಮಸ್ಯೆ ಬರದಂತೆ ತಡೆಯಲು ನಾವು ಹಲವಾರು ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಖರೀದಿ ಮಾಡುತ್ತೇವೆ, ಇನ್ನೂ ಕೆಲವರು ಮನೆಯಲ್ಲಿಯೇ ಕೆಲ ವಸ್ತುಗಳನ್ನು ಬಳಸುತ್ತಾರೆ. ಆದರೆ ಬಹಳ ಸುಲಭವಾಗಿ ಸಿಗುವ ಇನ್ನೊಂದು ವಸ್ತು ಬಗ್ಗೆ ಎಲ್ಲರೂ ಮರೆಯುತ್ತಾರೆ, ಅದೇ ಹಾಲಿನ ಕೆನೆ.
2/ 8
ಈ ಹಾಲಿನ ಕೆನೆ ಸಹ ನಿಮ್ಮ ಚರ್ಮದ ಸಮಸ್ಯೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಸಿದರೆ ಕಳೆದ ಹೋದ ಚರ್ಮದ ಹೊಳಪನ್ನು ಮರಳಿ ಪಡೆಯಬಹುದು.
3/ 8
ನಿಮ್ಮ ತ್ವಚೆ ಬಹಳ ಟ್ಯಾನ್ ಆಗಿದ್ದರೆ ಸ್ವಲ್ಪ ಹಾಲಿನ ಕೆನೆಗೆ ಅರಿಶಿನ ಸೇರಿಸಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಸುಮಾರು 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.
4/ 8
ನಿಮ್ಮದು ಒಣ ಚರ್ಮ ಆಗಿದ್ದರೆ ಈ ಹಾಲಿನ ಕೆನೆ ಬೆಸ್ಟ್ ಮದ್ದು ಎನ್ನಬಹುದು. ಆದರೆ ಇದಕ್ಕೆ ಏನೂ ಮಿಕ್ಸ್ ಮಾಡದೇ ಬರೀ ಕೆನೆಯನ್ನು ಹಚ್ಚಿ ಸುಮಾರು 1 ಗಂಟೆಯ ನಂತರ ತೊಳೆಯಿರಿ. ಇದಕ್ಕಿಂತ ಬೇರೆ ಪರಿಹಾರ ನಿಮಗೆ ಬೇಕಿಲ್ಲ.
5/ 8
ಹೊರಗಿನ ಧೂಳು ಹಾಗೂ ಕೊಳಕು ಮುಖವನ್ನು ಹಾಳು ಮಾಡುತ್ತದೆ. ಅದಕ್ಕಾಗಿ ಕ್ಲೀನರ್, ಫೇಶಿಯಲ್ ಎಂದೆಲ್ಲಾ ಪಾರ್ಲರ್ ಮೊರೆ ಹೋಗಬೇಕಾಗುತ್ತದೆ. ಆದರೆ ಅದರ ಬದಲು ಈ ಹಾಲಿನ ಕೆನೆಯನ್ನು ಬಳಸಿ. ಇದು ಚರ್ಮವನ್ನು ಆಳವಾಗಿ ಸ್ವಚ್ಛ ಮಾಡುತ್ತದೆ.
6/ 8
ನೀವು ಹಾಲಿನ ಕೆನೆಯನ್ನು ಅಲೊವೇರಾ ಜೊತೆ ಮಿಶ್ರಣ ಮಾಡಿ ಹಚ್ಚಿದರೆ ಮೊಡವೆಗಳಿಗೆ ಪರಿಹಾರ ಸಿಗುತ್ತದೆ. ಅಲ್ಲದೇ ಇದು ಮೊಡವೆಗಳ ಕಲೆಯನ್ನು ಸಹ ಹೋಗಲಾಡಿಸುತ್ತದೆ. ಇದರ ಜೊತೆ ನೀವು ಜೇನುತುಪ್ಪವನ್ನುಸಹ ಹಾಕಬಹುದು.
7/ 8
ನಿಮ್ಮ ಚರ್ಮ ಎಣ್ಣೆಯುಕ್ತವಾಗಿದ್ದರೆ ಹಾಲಿನ ಕೆನೆಯನ್ನು ಕಡಲೆಹಿಟ್ಟಿನ ಜೊತೆ ಮಿಕ್ಸ್ ಮಾಡಿ ಬಳಕೆ ಮಾಡಿ. ಈ ಮಿಶ್ರಣಕ್ಕೆ ನೀರನ್ನು ಸೇರಿಸಬೇಡಿ, ಕೇವಲ ಹಾಲಿನ ಕೆನೆಯಲ್ಲಿಯೇ ಕಲಸಿ.
8/ 8
ಈ ಹಾಲಿನ ಕೆನೆ ಸತ್ತ ಚರ್ಮಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ನೀವು ರಾತ್ರಿ ಮಲಗುವ ಮುನ್ನ ಹಾಲಿನ ಕೆನೆಯನ್ನು ಹಚ್ಚಿ ಮಲಗಿದರೆ ಹೆಚ್ಚು ಲಾಭವಿದೆ. ಹಾಗೆಯೇ ಇದು ಒಡೆದ ತುಟಿಗಳಿಗೆ ಸಹ ಪರಿಹಾರ ನೀಡುತ್ತದೆ.