ಹಾಗಾಗಿ ಕೆಲ ಮಂದಿ ಹೋಳಿ ಹಬ್ಬದಂದು ಮನೆಯಿಂದ ಹೊರಗೆ ಬರಲು ಈ ದಿನ ಹಿಂಜರಿಯುತ್ತಾರೆ. ಏಕೆಂದರೆ ಕೆಮಿಕಲ್ ಮಿಶ್ರಿತ ಬಣ್ಣ ಆಡುವುದರಿಂದ ಎಲ್ಲಿ ಮುಖದ ಮೇಲೆ ಬಣ್ಣ ಹೋಗುವುದಿಲ್ಲವೋ, ಚರ್ಮದ ಅಲರ್ಜಿ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತದೆಯೋ ಎಂದು ಆತಂಕಕ್ಕೊಳಗಾಗಿರುತ್ತಾರೆ. ಆದರೆ ಆ ಭಯವನ್ನು ಬಿಡಿ. ಮುಖದ ಮೇಲೆ ಆಗುವ ಬಣ್ಣದ ಕಲೆಗಳನ್ನು ಸುಲಭವಾಗಿ ತೆಗೆದು ಹಾಕಲು ಒಂದಷ್ಟು ಟಿಪ್ಸ್ಗಳನ್ನು ನಾವು ನಿಮಗೆ ತಿಳಿಸುತ್ತೇವೆ.