Beauty Tips: ನಿಮ್ಮ ತ್ವಚೆಯ ಅಂದ ಕೆಡಬಾರದಂದ್ರೆ ಮೇಕಪ್​ ರಿಮೂವ್ ಹೀಗೆ ಮಾಡಿ!

Makeup removing tips: ಕಣ್ಣಿನ ಮೇಲಿನ ಮೇಕ್ಅಪ್ ಅನ್ನು ತೆಗೆದುಹಾಕದಿದ್ದರೇ ಕೆಲವು ತೊಡಕುಗಳು ಡ್ರೈ ಹೇರ್, ಸ್ಟೈ, ಕಣ್ಣಿನ ಅಸ್ವಸ್ಥತೆ, ಕಣ್ಣಿನ ಸೋಂಕುಗಳು ಉಂಟಾಗಬಹುದು. ಅಲ್ಲದೇ, ಮೇಕ್ಅಪ್ ತೆಗೆಯದೇ ಮಲಗುವುದು ಕೂಡ ಮೊಡವೆಗಳು ಮತ್ತು ಸುಕ್ಕುಗಳಿಗೆ ಕಾರಣವಾಗಬಹುದು.

First published:

  • 18

    Beauty Tips: ನಿಮ್ಮ ತ್ವಚೆಯ ಅಂದ ಕೆಡಬಾರದಂದ್ರೆ ಮೇಕಪ್​ ರಿಮೂವ್ ಹೀಗೆ ಮಾಡಿ!

    ಪಾರ್ಟಿ, ಫಂಕ್ಷನ್, ಡಿನ್ನರ್, ಔಟಿಂಗ್ ಹೀಗೆ ಹೊರಗೆ ಹೋಗುವಾಗ ಅನೇಕ ಮಹಿಳೆಯರು ಸೌಂದರ್ಯವರ್ಧಕಗಳನ್ನು ಬಳಸಿ ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ ಹಚ್ಚಿಕೊಂಡಿದ್ದ ಮೇಕ್ಅಪ್ ಅನ್ನು ತೆಗೆದು ಹಾಕುವುದು, ವಿಶೇಷವಾಗಿ ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ ಸ್ವಲ್ಪ ಕಷ್ಟಕರವಾಗಿರುತ್ತದೆ.

    MORE
    GALLERIES

  • 28

    Beauty Tips: ನಿಮ್ಮ ತ್ವಚೆಯ ಅಂದ ಕೆಡಬಾರದಂದ್ರೆ ಮೇಕಪ್​ ರಿಮೂವ್ ಹೀಗೆ ಮಾಡಿ!

    ಕಣ್ಣಿನ ಮೇಲಿನ ಮೇಕಪ್ ಅನ್ನು ತೆಗೆದುಹಾಕದಿದ್ದರೇ ಕೆಲವು ತೊಡಕುಗಳು ಡ್ರೈ ಹೇರ್, ಸ್ಟೈ, ಕಣ್ಣಿನ ಅಸ್ವಸ್ಥತೆ, ಕಣ್ಣಿನ ಸೋಂಕುಗಳು ಉಂಟಾಗಬಹುದು. ಅಲ್ಲದೇ, ಮೇಕ್ಅಪ್ ತೆಗೆಯದೇ ಮಲಗುವುದು ಕೂಡ ಮೊಡವೆಗಳು ಮತ್ತು ಸುಕ್ಕುಗಳಿಗೆ ಕಾರಣವಾಗಬಹುದು. ಹಾಗಾಗಿ ಹೊರಗೆ ಹೋಗಿ ಬಂದ ನಂತರ ಮೇಕಪ್ ತೆಗೆಯುವುದು ಬಹಳ ಮುಖ್ಯ. ಮೇಕಪ್ ಧರಿಸುವುದು ಎಷ್ಟು ಮುಖ್ಯವೋ ಮೇಕಪ್ ತೆಗೆಯುವುದು ಕೂಡ ಅಷ್ಟೇ ಮುಖ್ಯ. ನಿಮ್ಮ ಮುಖದ ಮೇಕಪ್ ಅನ್ನು ಸುಲಭವಾಗಿ ತೆಗೆದುಹಾಕಲು ಕೆಲವು ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ.

    MORE
    GALLERIES

  • 38

    Beauty Tips: ನಿಮ್ಮ ತ್ವಚೆಯ ಅಂದ ಕೆಡಬಾರದಂದ್ರೆ ಮೇಕಪ್​ ರಿಮೂವ್ ಹೀಗೆ ಮಾಡಿ!

    ಸರಿಯಾದ ಮೇಕಪ್ ರಿಮೂವರ್ ಬಳಸಿ: ಮೇಕಪ್ ತೆಗೆಯುವಾಗ ಜಾಗರೂಕರಾಗಿರಿ. ನೀವು ತಪ್ಪಾಗಿ ಹಚ್ಚಿದ ಮೇಕಪ್ ಹೋಗಲಾಡಿಸಲು ಸರಿಯಾದ ಸಾಧನವನ್ನು ಬಳಸಿ. ಇದನ್ನು ಬಳಸುವಾಗ ನಿಮ್ಮ ಚರ್ಮವನ್ನು ಮಸಾಜ್ ಮಾಡಬೇಕು. ಹೌದು, ಅಂದರೆ ನಿಮ್ಮ ಮೇಕಪ್ ಅನ್ನು ಸುಲಭವಾಗಿ ತೆಗೆದುಹಾಕಲು ಸಾಧ್ಯವಾಗುವುದಿಲ್ಲ. ನಿಮ್ಮ ಚರ್ಮದ ಪ್ರಕಾರವನ್ನು ಆಧರಿಸಿ ಮೇಕಪ್ ಹೋಗಲಾಡಿಸುವ ಸಾಧನವನ್ನು ಆಯ್ಕೆ ಮಾಡಬೇಕು. ಎಣ್ಣೆಯುಕ್ತ ಅಥವಾ ಸೂಕ್ಷ್ಮ ಚರ್ಮ ಹೊಂದಿರುವವರು ಸೌಮ್ಯವಾದ ಜೆಲ್ ಆಧಾರಿತ ಕ್ಲೆನ್ಸರ್​ಗಳನ್ನು ಬಳಸಬಹುದು.

    MORE
    GALLERIES

  • 48

    Beauty Tips: ನಿಮ್ಮ ತ್ವಚೆಯ ಅಂದ ಕೆಡಬಾರದಂದ್ರೆ ಮೇಕಪ್​ ರಿಮೂವ್ ಹೀಗೆ ಮಾಡಿ!

    ಮೇಕಪ್ ತೆಗೆಯಲು ಮೃದುವಾದ ಬಟ್ಟೆಯನ್ನು ಬಳಸಿ: ಮೇಕಪ್ ತೆಗೆಯುವ ಬಟ್ಟೆಯು ಮೃದುವಾಗಿದ್ಯಾ ಎಂದು ಖಚಿತಪಡಿಸಿಕೊಳ್ಳಿ. ಮೇಕಪ್ ತೆಗೆಯುವಾಗ, ಮೊದಲು ಕಣ್ಣುಗಳು, ತುಟಿಗಳು ಮತ್ತು ಹುಬ್ಬುಗಳಂತಹ ಭಾಗಗಳಿಂದ ಮೇಕಪ್ ತೆಗೆದುಹಾಕಿ. ನಂತರ ನಿಮ್ಮ ಕೈಗಳನ್ನು ತೊಳೆಯಿರಿ ಮತ್ತು ನಿಮ್ಮ ಮುಖದ ಉಳಿದ ಭಾಗವನ್ನು ಒರೆಸಲು ಫ್ರೆಶ್ ಮೇಕಪ್ ರಿಮೂವರ್ ಬಟ್ಟೆಯನ್ನು ಬಳಸಿ.

    MORE
    GALLERIES

  • 58

    Beauty Tips: ನಿಮ್ಮ ತ್ವಚೆಯ ಅಂದ ಕೆಡಬಾರದಂದ್ರೆ ಮೇಕಪ್​ ರಿಮೂವ್ ಹೀಗೆ ಮಾಡಿ!

    ಶೀಟ್ ಮಾಸ್ಕ್​ಗಳು, ಟೋನರ್​ಗಳನ್ನು ಬಳಸಿ: ಮುಖದ ಮೇಲಿನ ಹೋಲ್ಸ್ ಮುಚ್ಚಲು ಮತ್ತು ಮೇಕಪ್ ಅಪ್ಲಿಕೇಶನ್​ಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ಪುನಃಸ್ಥಾಪಿಸಲು ನೀವು ಟೋನರ್​ಗಳು, ಶೀಟ್ ಮಾಸ್ಕ್​ಗಳನ್ನು ಬಳಸಬಹುದು.

    MORE
    GALLERIES

  • 68

    Beauty Tips: ನಿಮ್ಮ ತ್ವಚೆಯ ಅಂದ ಕೆಡಬಾರದಂದ್ರೆ ಮೇಕಪ್​ ರಿಮೂವ್ ಹೀಗೆ ಮಾಡಿ!

    ಮೇಕಪ್ ತೆಗೆದ ನಂತರ ನಿಮ್ಮ ಮುಖವನ್ನು ತೊಳೆಯಿರಿ: ಅನೇಕ ಜನರು ಮಲಗುವ ಮುನ್ನ ತಮ್ಮ ಮುಖವನ್ನು ತೊಳೆಯುವುದಿಲ್ಲ. ಮೇಕಪ್ ತೆಗೆದ ನಂತರ ಫೇಸ್ ವಾಶ್ ಮೂಲಕ ನಿಮ್ಮ ತ್ವಚೆಯನ್ನು ಸರಿಯಾಗಿ ತೊಳೆಯುವುದರಿಂದ ಮೊಡವೆಯಂತಹ ಸಮಸ್ಯೆಗಳನ್ನು ತಡೆಯಬಹುದು. ಆದ್ದರಿಂದ ಮಲಗುವ ಮುನ್ನ ಒಮ್ಮೆ ಮುಖ ತೊಳೆಯುವುದನ್ನು ಮರೆಯದಿರಿ.

    MORE
    GALLERIES

  • 78

    Beauty Tips: ನಿಮ್ಮ ತ್ವಚೆಯ ಅಂದ ಕೆಡಬಾರದಂದ್ರೆ ಮೇಕಪ್​ ರಿಮೂವ್ ಹೀಗೆ ಮಾಡಿ!

    ನಿಮ್ಮ ತ್ವಚೆಯನ್ನು ಮಾಯಿಶ್ಚರೈಸ್ ಮಾಡಿ: ನೀವು ಒಣ ಚರ್ಮವನ್ನು ಹೊಂದಿದ್ದರೆ, ಮೇಕ್ಅಪ್ ತೆಗೆದ ನಂತರ ಸ್ವಲ್ಪ ಮಾಯಿಶ್ಚರೈಸ್ ಅನ್ನು ಹಚ್ಚಿ. ನಿಮ್ಮ ಲಿಪ್ಸ್​ಸ್ಟಿಕ್​  ಅನ್ನು ನೀವು ತೆಗೆದುಹಾಕಿದಾಗ ನಿಮ್ಮ ತುಟಿಗಳನ್ನು ತೇವಗೊಳಿಸಿ.

    MORE
    GALLERIES

  • 88

    Beauty Tips: ನಿಮ್ಮ ತ್ವಚೆಯ ಅಂದ ಕೆಡಬಾರದಂದ್ರೆ ಮೇಕಪ್​ ರಿಮೂವ್ ಹೀಗೆ ಮಾಡಿ!

    ನಿಮ್ಮ ಕುತ್ತಿಗೆ ಮತ್ತು ಕಿವಿಗಳನ್ನು ಸ್ವಚ್ಛಗೊಳಿಸಲು ಮರೆಯಬೇಡಿ. ನೀವು ಚರ್ಮದ ಆರೈಕೆ ಉತ್ಪನ್ನಗಳನ್ನು ಅನ್ವಯಿಸುವಾಗ ನಿಮ್ಮ ಕುತ್ತಿಗೆ ಮತ್ತು ಕಿವಿಗಳನ್ನು ಸ್ವಚ್ಛಗೊಳಿಸಲು ಮರೆಯಬೇಡಿ. ಸಾಕಷ್ಟು ಮಂದಿ ರಾತ್ರಿ ಹೊತ್ತು ಸ್ನಾನ ಮಾಡುವ ಅಭ್ಯಾಸವನ್ನು ಹೊಂದಿರುವುದಿಲ್ಲ. ಆದ್ದರಿಂದ ಕುತ್ತಿಗೆ ಮತ್ತು ಕಿವಿಗಳು ಸ್ವಚ್ಛವಾಗಿರುವುದನ್ನು ಬಹಳ ಮುಖ್ಯ. ಅದನ್ನು ಎಂದಿಗೂ ಮರೆಯಬೇಡಿ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES