ಜನರು ಮನೆಯನ್ನು ಸ್ವಚ್ಛವಾಗಿಡಲು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಸ್ವಿಚ್ ಬೋರ್ಡ್ನ ಕೊಳಕು ಕಪ್ಪು ಕಲೆಯನ್ನು ನಿರ್ಲಕ್ಷಿಸುತ್ತೇವೆ. ಅನೇಕ ಮನೆಗಳಲ್ಲಿ ಸ್ವಿಚ್ ಬೋರ್ಡ್ಗಳು ಕಪ್ಪಾಗಿವೆ. ಏಕೆಂದರೆ ಟಿವಿ ಅಥವಾ ಫ್ಯಾನ್, ಬಲ್ಬ್ ಅಥವಾ ಟ್ಯೂಬ್ ಲೈಟ್ ಎಲ್ಲವನ್ನೂ ಚಲಾಯಿಸಲು ಪ್ರತಿ ದಿನ ಸ್ವಿಚ್ ಬೋರ್ಡ್ ಅನ್ನು ಮುಟ್ಟುತ್ತೇವೆ. ಹಾಗಾಗಿ ನಾವು ಇದನ್ನು ಸ್ವಚ್ಛಗೊಳಿಸಲು ಈ ಕೆಳಗೆ ನೀಡಿರುವ ಕೆಲವು ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ.
ಮೊದಲು ವಿದ್ಯುತ್ ಕಡಿತಗೊಳಿಸಿ : ಸ್ವಿಚ್ ಬೋರ್ಡ್ ಅನ್ನು ಸ್ವಚ್ಛಗೊಳಿಸುವಾಗ ವಿದ್ಯುತ್ ಆಘಾತದ ಹೆಚ್ಚಿನ ಅಪಾಯವಿದೆ. ಆದ್ದರಿಂದ ಸ್ವಿಚ್ ಬೋರ್ಡ್ ಅನ್ನು ಸ್ವಚ್ಛಗೊಳಿಸುವ ಮುನ್ನ ವಿದ್ಯುತ್ ಕಡಿತಗೊಳಿಸುವುದು ಬಹಳ ಮುಖ್ಯ. ಇದು ನಿಮ್ಮನ್ನು ವಿದ್ಯುತ್ ಆಘಾತದಿಂದ ತಡೆಯುತ್ತದೆ. ಅಷ್ಟೇ ಅಲ್ಲ ಸ್ವಿಚ್ ಬೋರ್ಡ್ ಕ್ಲೀನ್ ಮಾಡುವ ಮುನ್ನ ಗ್ಲೌಸ್ ಮತ್ತು ಸ್ಲೀಪರ್ಸ್ ಧರಿಸಿ.
ವಿನೆಗರ್ ಬಳಸಿ: ಸ್ವಿಚ್ ಬೋರ್ಡ್ ಮೇಲಿನ ಎಣ್ಣೆ ಮತ್ತು ಮಸಾಲೆಗಳ ಹಳದಿ ಕಲೆಗಳನ್ನು ತೆಗೆದುಹಾಕಲು ನೀವು ವಿನೆಗರ್ ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ, ಒಂದು ಕಪ್ ನೀರಿನಲ್ಲಿ ಎರಡು ಚಮಚ ವಿನೆಗರ್ ಮತ್ತು ಒಂದು ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ. ನಂತರ ಈ ಮಿಶ್ರಣದಲ್ಲಿ ಹತ್ತಿ ಬಟ್ಟೆಯನ್ನು ಅದ್ದಿ ಚೆನ್ನಾಗಿ ಹಿಂಡಿ. ನಂತರ ಈ ಮಿಶ್ರಣದಿಂದ ಸ್ವಿಚ್ ಬೋರ್ಡ್ ಅನ್ನು ಸ್ವಚ್ಛಗೊಳಿಸಿ. ಇದು ಸ್ವಿಚ್ ಬೋರ್ಡ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ.
ಅಡಿಗೆ ಸೋಡಾ ಬಳಸಿ: ಸ್ವಿಚ್ ಬೋರ್ಡ್ ನ ಕಪ್ಪುತನವನ್ನು ಹೋಗಲಾಡಿಸಲು ನೀವು ಅಡಿಗೆ ಸೋಡಾವನ್ನು ಸಹ ಬಳಸಬಹುದು. ಇದಕ್ಕಾಗಿ ಎರಡು-ಮೂರು ಟೀ ಚಮಚ ಅಡಿಗೆ ಸೋಡಾದಲ್ಲಿ ಅರ್ಧ ನಿಂಬೆಹಣ್ಣನ್ನು ಹಿಂಡಿ. ನಂತರ ಈ ಮಿಶ್ರಣವನ್ನು ಸ್ವಿಚ್ ಬೋರ್ಡ್ ಮೇಲೆ ಹಚ್ಚಿ ಮತ್ತು ಒಣ ಬಟ್ಟೆಯಿಂದ ಒರೆಸಿ ಬೋರ್ಡ್ ಅನ್ನು ಸ್ವಚ್ಛಗೊಳಿಸಿ. ಇದು ಸ್ವಿಚ್ ಬೋರ್ಡ್ನಲ್ಲಿರುವ ಕೊಳೆಯನ್ನು ನಿಮಿಷಗಳಲ್ಲಿ ತೆಗೆದುಹಾಕುತ್ತದೆ ಮತ್ತು ಬೋರ್ಡ್ ಅನ್ನು ಹೊಸದಂತೆ ಹೊಳೆಯುವಂತೆ ಮಾಡುತ್ತದೆ.
ಕ್ಲೀನ್ ಮಾಡಿದ ತಕ್ಷಣ ಪವರ್ ಆನ್ ಮಾಡಬೇಡಿ: ಸ್ವಿಚ್ ಬೋರ್ಡ್ ಕ್ಲೀನ್ ಮಾಡಿದ ತಕ್ಷಣ ಪವರ್ ಆನ್ ಮಾಡಬೇಡಿ. ಸ್ವಚ್ಛಗೊಳಿಸಿ ಅರ್ಧ ಗಂಟೆಯ ನಂತರ ಸ್ವಿಚ್ ಆನ್ ಮಾಡಿ. ಇದು ಬೋರ್ಡ್ ಅನ್ನು ಸರಿಯಾಗಿ ಒಣಗಿಸುತ್ತದೆ ಮತ್ತು ಬೋರ್ಡ್ನಾದ್ಯಂತ ಕರೆಂಟ್ ಹೊಡೆಯುವ ಅಪಾಯವನ್ನು ತಪ್ಪಿಸುತ್ತದೆ. ಪವರ್ ಆನ್ ಮಾಡುವ ಮುನ್ನ, ಒಣ ಹತ್ತಿ ಬಟ್ಟೆಯಿಂದ ಬೋರ್ಡ್ ಅನ್ನು ಮತ್ತೆ ಒರೆಸಿ, ಸ್ವಿಚ್ ಬೋರ್ಡ್ ಸಂಪೂರ್ಣವಾಗಿ ಒಣಗಿದ್ಯಾ ಎಂದು ಪರಿಶೀಲಿಸಿ.