Kitchen Hacks: ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಅಡುಗೆ ಮನೆ ಕೆಲಸ ಸುಲಭವಾಗುತ್ತೆ
Simple Kitchen Hacks: ಅಡುಗೆ ಮನೆಯ ಕೆಲಸ ನಿಜಕ್ಕೂ ಸವಾಲಿನ ಕೆಲಸ. ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಅಡುಗೆ ಮಾಡುವುದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆದರೆ ಕೆಲವೊಂದು ಟಿಪ್ಸ್ ಫಾಲೋ ಮಾಡಿದ್ರೆ ಅಡುಗೆ ಮನೆಯ ಕೆಲಸ ಬಹಳ ಸುಲಭವಾಗುತ್ತದೆ. ಯಾವುವು ಆ ಟಿಪ್ಸ್ ಎಂಬುದು ಇಲ್ಲಿದೆ.
ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉತ್ತಮ. ಯಾವುದೇ ರೀತಿಯ ರೋಗಗಳು ಬರದಂತೆ ತಡೆಯುತ್ತದೆ. ಆದರೆ ಹೆಚ್ಚು ಸಮಯ ತೆಗೆದುಕೊಳ್ಳುವ ಈ ಕೆಲಸವನ್ನು ಸುಲಭಗೊಳಿಸುವುದು ಅನಿವಾರ್ಯ.
2/ 8
ಚಪಾತಿ ಲಟ್ಟಿಸುವಾಗ ಸಾಮಾನ್ಯವಾಗಿ ಹಿಟ್ಟು ಹರಡುತ್ತದೆ. ಅದನ್ನು ಮತ್ತೆ ಸ್ವಚ್ಛ ಮಾಡುವುದು ಕಷ್ಟ. ಹಾಗಾಗಿ ಚಪಾತಿ ಲಟ್ಟಿಸುವಾಗ ನೀವು ಕೆಳಗಡೆ ಬಟ್ಟೆಯನ್ನು ಹಾಕಿಕೊಳ್ಳಿ, ಆಗ ಹಿಟ್ಟು ಒಂದು ಕಡೆ ಬೀಳುತ್ತದೆ. ಅದನ್ನು ಸ್ವಚ್ಛ ಮಾಡಬಹುದು.
3/ 8
ಅಡುಗೆ ಮಾಡುವಾಗ ಕುಕ್ಕಿಂಗ್ ಬಟ್ಟೆಯನ್ನು ಧರಿಸಿ, ಇದರಿಂದ ನಿಮ್ಮ ಬಟ್ಟೆ ಕೊಳೆಯಾಗುವುದಿಲ್ಲ. ಅಡುಗೆ ಮಾಡುವಾಗ ಯಾವುದೇ ಪದಾರ್ಥ ಸಾಮಾನ್ಯವಾಗಿ ಬೀಳುತ್ತದೆ. ಅದರಿಂದ ನಿಮ್ಮ ಬಟ್ಟೆ ಹಾಳಾಗುತ್ತದೆ. ಹಾಗಾಗಿ ಮರೆಯದೇ ಕುಕ್ಕಿಂಗ್ ಬಟ್ಟೆ ಧರಿಸಿ.
4/ 8
ಅಡುಗೆಯ ಮನೆಯ ಇನ್ನೊಂದು ದೊಡ್ಡ ತಲೆನೋವು ಎಂದರೆ ಬೆಳ್ಳುಳ್ಳಿ ಸಿಪ್ಪೆ ಬಿಡಿಸುವುದು. ಅದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕೆ ನೀವು ಮಾರುಕಟ್ಟೆಯಲ್ಲಿ ಸಿಗುವ ಬಿಡಿಸಿದ ಬೆಳ್ಳುಳ್ಳಿ ಖರೀದಿಸಿ ಇದು ನಿಮ್ಮ ಸಮಯವನ್ನು ಉಳಿಸುತ್ತದೆ ಹಾಗೂ ಕೆಲಸವನ್ನು ಸಹ ಕಡಿಮೆ ಮಾಡುತ್ತದೆ.
5/ 8
ನಿಮ್ಮ ಸಮಯ ಉಳಿಸಲು ಸಹಾಯ ಮಾಡುವ ಮತ್ತೊಂದು ಐಡಿಯಾ ಎಂದರೆ ಕಾಫಿ ಮೇಕರ್ ಬಳಸದೇ ಇರುವುದು. ಇದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ. ಇದರ ಬದಲಾಗಿ ನೀವು ಇನ್ಸ್ಟಂಟ್ ಕಾಫಿ ಪೌಡರ್ ಗಳನ್ನು ಬಳಸುವುದು ನಿಮ್ಮ ಸಮಯವನ್ನು ಉಳಿಸುತ್ತದೆ.
6/ 8
ಶುಂಠಿಯಲ್ಲಿ ಹೆಚ್ಚಿನ ಮಣ್ಣು ಇರುತ್ತದೆ, ಅದನ್ನು ಸ್ವಚ್ಛ ಮಾಡುವುದು ಮತ್ತು ಅದರ ಸಿಪ್ಪೆ ತೆಗೆಯುವುದು ಸಹ ನಿಮ್ಮ ಸಮಯವನ್ನು ಹಾಳು ಮಾಡುತ್ತದೆ. ಅದಕ್ಕೆ ನೀವು ಆ ಶುಂಠಿಯನ್ನು ನೀರಿನಲ್ಲಿ ಹಾಕಿ, ಚಮಚದಿಂದ ಸಿಪ್ಪೆ ತೆಗೆಯಿರಿ. ಅದು ಸುಲಭವಾಗಿ ಸಿಪ್ಪೆ ಬಿಡಿಸಲು ಸಹಾಯ ಮಾಡುತ್ತದೆ.
7/ 8
ಸಾಮಾನ್ಯವಾಗಿ ಅಡುಗೆ ಮಾಡುವಾಗ ತರಕಾರಿ, ಹಣ್ಣುಗಳನ್ನು ಕತ್ತರಿಸಿ ಅಲ್ಲಿಯೇ ಇಟ್ಟುಕೊಳ್ಳುವುದು ಕೆಲಸವನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಗಾರ್ಬೇಜ್ ಬೌಲ್ ಇಟ್ಟುಕೊಳ್ಳುವುದು ಉತ್ತಮ ಕೆಲಸ, ಅಲ್ಲೇ ಕತ್ತರಿಸಿ ಆ ಬೌಲ್ನಲ್ಲಿ ಹಾಕಿದರೆ ಕಸ ಆಗುವುದಿಲ್ಲ.
8/ 8
ನೀವು ಅಡುಗೆ ಮಾಡುವಾಗ ಮಾಂಸವನ್ನು ಕತ್ತರಿಸುವ ಮೊದಲು ಪ್ರಿಜ್ಡ್ ನಲ್ಲಿ ಇಡಿ. ಇದರಿಂದ ಸುಲಭವಾಗಿ ಮಾಂಸವನ್ನು ನಿಮಗೆ ಬೇಕಾದ ರೀತಿಯಲ್ಲಿ ಕತ್ತರಿಸಬಹುದು.