ಅನೇಕರಿಗೆ ತೆಲೆಹೊಟ್ಟು ದೊಡ್ಡ ಸಮಸ್ಯೆಗಾಗಿ ಕಾಡುತ್ತದೆ. ಅದರ ನಿವಾರಣೆಗಾಗಿ ಪೇಚಾಡುತ್ತಿರುತ್ತಾರೆ, ಔಷಧಿಯ ಪ್ರಯೋಗ ಮಾಡುತ್ತಾರೆ. ಆದರೆ ಮನೆ ಮದ್ದಿನಿಂದಲೂ ಕೂಡ ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಣೆ ಮಾಡಬಹುದು.
2/ 8
ತಲೆಹೊಟ್ಟು ಬಾರದಂತೆ ಮಾಡಲು ದಿನನಿತ್ಯ ತಲೆಕೂದಲನ್ನು ಬಾಚಬೇಕು.ಕೂದಲಿನ ಬೇರುಗಳಿಗೆ ಸರಿಯಾದ ಎಣ್ಣೆ ಅಂಶ ದೊರೆತರೆ ತಲೆಹೊಟ್ಟು ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.
3/ 8
ಶಾಂಪೂ ಬಳಸುವ ಮೂಲಕ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಆದರೆ ಗುಣಮಟ್ಟದ ಶಾಂಪೂ ಬಳಕೆ ಉತ್ತಮ. ಯಾಕೆಂದರೆ ಕೆಲವೊಮ್ಮೆ ಯೋಗ್ಯವಲ್ಲದ ಶಾಂಪೂ ಬಳಸಿ ಕೂದಲು ಕಳೆದುಕೊಂಡ ಪ್ರಸಂಗಗಳು ಕಣ್ಣೆದುರುಗೆ ಕಂಡುಬರುತ್ತದೆ.
4/ 8
ಕೂದಲಿಗೆ ಅಲೊವೆರಾ ರಸದಿಂದ ಮಸಾಜ್ ಮಾಡುವ ಮೂಲಕ ತಲೆಹೊಟ್ಟು ಸಮಸ್ಯೆಗೆ ಫುಲ್ಸ್ಟಾಪ್ ನೀಡಬಹುದು. ತಲೆಗೆ ಅಲೊವೆರಾ ರಸ ಹಚ್ಚಿಕೊಂಡ ಒಂದು ಗಂಟೆ ನಂತರ ತಣ್ಣೀರಿನಲ್ಲಿ ಸ್ನಾನ ಮಾಡಬೇಕು.
5/ 8
ತೆಂಗಿನ ಎಣ್ಣೆಗೆ ಕರ್ಪೂರ ಮಿಶ್ರ ಮಾಡಿ ಕೂದಲಿಗೆ ಹಚ್ಚಿಕೊಂಡು ಅರ್ಧ ಗಂಟೆಗೆಯ ಬಳಿಕ ಸ್ನಾನಮಾಡಿ. ಸ್ವಲ್ಲ ದಿನಗಳ ಕಾಲ ಹೀಗೆ ಮಾಡುತ್ತಿದ್ದರೆ ತಲೆಹೊಟ್ಟು ಬೇಗನೆ ನಿವಾರಣೆ ಆಗುತ್ತದೆ.
6/ 8
ಕಡಲೆ ಹಿಟ್ಟಿನಿಂದ ಕೂಡ ತಲೆಹೊಟ್ಟಿನ ಸಮಸ್ಯೆಗೆ ಪರಿಹಾರವಿದೆ. ಒಂದು ಗ್ಲಾಸ್ ಲೋಟಕ್ಕೆ 4 ಚಮಚ ಕಡಲೆ ಹಿಟ್ಟಿ ಮಿಶ್ರಣ ಮಾಡಿ ನಂತರ ಕೂದಲಿಗೆ ಹಚ್ಚಬೇಕು. ಒಂದು ಗಂಟೆ ನಂತರ ಕೂದಲನ್ನು ಸರಿಯಾಗಿ ತೊಳೆಯಬೇಕು.
7/ 8
ಬೇವಿನ ಎಣ್ಣೆ ತಲೆಹೊಟ್ಟಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತದೆ. ನಿಮ್ಮ ತಲೆಯಲ್ಲಿ ಹೇಣುಗಳಿದ್ದರೆ ಸಹ ಬೇವಿನ ಎಣ್ಣೆಯನ್ನು ಹಚ್ಚಬಹುದು. ರಾತ್ರಿಯಲ್ಲಿ ತಲೆಗೆ ಬೇವಿನ ಎಣ್ಣೆ ಹಚ್ಚಿ ಬೆಳಿಗ್ಗೆ ತೊಳೆಯುವುದರಿಂದ ಹೇಣಿನ ಸಮಸ್ಯೆಯನ್ನು ಇಲ್ಲದಾಗಿಸಬಹುದು.
8/ 8
ಔಷಧಿ ಬಳಸುವ ಬದಲು, ಮನೆಮದ್ದಿನಿಂದ ತಲೆಹೊಟ್ಟು ನಿವಾರಣೆ ಮಾಡಬಹುದಾಗಿದೆ.