ಸ್ವಯಂ-ಅರಿವುಳ್ಳವರಾಗಿರುತ್ತೀರಿ: ಒಬ್ಬರನ್ನು ತೀರ್ಪಿಸುವುದು ನಮ್ಮ ಆಲೋಚನೆಗೆ ಬಿಟ್ಟಿರುವ ವಿಚಾರ. ಒಬ್ಬರನ್ನು ಜಡ್ಜ್ ಮಾಡುವುದು ನಮ್ಮ ಕೆಲಸವಲ್ಲ, ನಾವು ಅದಕ್ಕೆ ಪರಿಪೂರ್ಣರಲ್ಲ ಮತ್ತು ನಮ್ಮ ದೃಷ್ಟಿಕೋನಗಳು ಯಾವಾಗಲೂ ಸರಿಯಾಗಿರುವುದಿಲ್ಲ ಎಂದು ಗುರುತಿಸಲು ನಿಮ್ಮಲ್ಲಿ ಸ್ವಯಂ ಅರಿವಿರುತ್ತದೆ. ಸ್ವಯಂ ಅರಿವು ಹೊಂದಿರುವವರು ಹಮ್ಮ-ಬಿಮ್ಮು ಬಿಟ್ಟು ನಮ್ರತೆ ಮತ್ತು ಮುಕ್ತ ಮನಸ್ಸಿನಿಂದ ಎಲ್ಲರ ಜೊತೆ ಬೆರಯುತ್ತಾರೆ. ಈ ಗುಣ ಅವರನ್ನು ಉತ್ತಮರು ಎಂದೆನಿಸುತ್ತದೆ.
ಯೋಚಿಸದೇ ಯಾವುದೇ ತೀರ್ಮಾನ ಮಾಡಲ್ಲ: ದಿಢೀರ್ ಅಂತಾ ತೀರ್ಪುಗಳನ್ನು ಮಾಡುವುದು ಮಾನವ ಸ್ವಭಾವವಾಗಿದೆ, ಆದರೆ ಇಂತಹ ವ್ಯಕ್ತಿಗಳು ಈ ಪ್ರಚೋದನೆಯನ್ನು ವಿರೋಧಿಸುತ್ತಾರೆ. ಬದಲಾಗಿ, ಅವರು ಮಾಹಿತಿಯನ್ನು ಸಂಗ್ರಹಿಸಲು ಸಮಯವನ್ನು ತೆಗೆದುಕೊಳ್ಳುತ್ತಾರೆ ಮತ್ತು ಅಭಿಪ್ರಾಯವನ್ನು ರೂಪಿಸುವ ಮೊದಲು ಅನೇಕ ದೃಷ್ಟಿಕೋನಗಳನ್ನು ಪರಿಗಣಿಸುತ್ತಾರೆ. ನಂತರವೇ ಅವರು ಬಲವಾದ ನಿರ್ಧಾರ ಮಾಡುತ್ತಾರೆ. ಹೀಗೆ ವಿವೇಚನಾ ಶಕ್ತಿ ಅವರನ್ನು ಯಾರೊಬ್ಬರು ಬೆಟ್ಟು ಮಾಡಿ ತೋರಿಸದ ವ್ಯಕ್ತಿಯನ್ನಾಗಿಸುತ್ತದೆ.