ಮದುವೆ ಸಮಯದಲ್ಲಿ ವಧುವಿಗೆ ಮಾಡುವ ನೋ ಮೇಕಪ್ ಬಗ್ಗೆ ನಿಮಗೆ ಗೊತ್ತಾ? ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ತಮ್ಮ ಮದುವೆ ವೇಳೆ ನೋ ಮೇಕಪ್ ಮೂಲಕ ಕಂಗೊಳಿಸಿದ್ದಾರೆ. ಇದು ಅಂದಿನಿಂದ ಇಂದಿನವರೆಗೂ ಟ್ರೆಂಡ್ ಆಗಿದೆ. ವಾಸ್ತವವಾಗಿ ಮದುವೆಯ ವೇಳೆ ಗ್ರ್ಯಾಂಡ್ ಡ್ರೆಸ್, ಡಾರ್ಕ್ ಮೇಕ್ಅಪ್, ಹೆಚ್ಚು ಆಭರಣ ಧರಿಸುತ್ತಾರೆ. ಆದರೆ ಕಿಯಾರಾ ಅಡ್ವಾಣಿ ನ್ಯಾಚುರಲ್ ಲುಕ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಹಾಗಾದ್ರೆ ಈ ರೀತಿ ಮೇಕಪ್ ಮಾಡುವುದು ಹೇಗೆ ಅಂತ ಯೋಚಿಸ್ತಿದ್ದೀರಾ?
ನೋ ಮೇಕಪ್ಗಾಗಿ ಏನು ಮಾಡಬೇಕು: ಮೇಕಪ್ ಇಲ್ಯುಮಿನೇಟರ್ಗಳು ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ ಎನ್ನುತ್ತಾರೆ ಮೇಕಪ್ ತಜ್ಞರು. ಇದನ್ನು ಚರ್ಮಕ್ಕೆ ಸರಿಹೊಂದುವಂತೆ ಖರೀದಿಸಬಹುದು ಮತ್ತು ಮೇಕಪ್ಗೂ ಮುನ್ನ ಬಳಸಬಹುದು. ಇದು ಚರ್ಮಕ್ಕೆ ಉತ್ತಮ ಹೊಳಪನ್ನು ನೀಡುತ್ತದೆ. ಇಲ್ಯುಮಿನೇಟರ್ ಒಂದು ರೀತಿಯ ಕೆನೆ ಇದ್ದಂತೆ ಇರುತ್ತದೆ. ಮುಖಕ್ಕೆ ಹಚ್ಚಿದರೆ ಚರ್ಮ ಕಾಂತಿಯುತವಾಗುತ್ತದೆ. ನೋ ಮೇಕಪ್ ಉತ್ತಮವಾಗಿ ಕಾಣುತ್ತದೆ.