Lipstick Effect: ಜಾಸ್ತಿ ಲಿಪ್ಸ್ಟಿಕ್ ಹಚ್ಚಿದ್ರೆ ತುಟಿಯ ಅಂದ ಮಾತ್ರ ಅಲ್ಲ, ಆರೋಗ್ಯನೂ ಹಾಳಾಗುತ್ತೆ
Side Effects Of Lipstick: ಪ್ರತಿ ಮಹಿಳೆಗೆ ಲಿಪ್ಸ್ಟಿಕ್ ಎಂದರೆ ಬಹಳ ಇಷ್ಟ. ಯಾವುದೇ ಕಾರ್ಯಕ್ರಮಕ್ಕೆ ಹೋಗಬೇಕು ಎಂದರೆ ಸಾಕು ಲಿಪ್ಸ್ಟಿಕ್ ಹಚ್ಚದೇ ಇರುವುದಿಲ್ಲ. ಆದರೆ ಈ ರೀತಿ ಅತಿಯಾಗಿ ಲಿಪ್ಸ್ಟಿಕ್ ಬಳಕೆ ಮಾಡುವುದು ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಈ ಲಿಪಸ್ಟಿಕ್ ಬಳಸುವುದರಿಂದ ಉಂಟಾಗುವ ಅಡ್ಡಪರಿಣಾಮಗಳು ಇಲ್ಲಿದೆ.
ಈ ಲಿಪ್ಸ್ಟಿಕ್ನಲ್ಲಿ ಕ್ಯಾಡ್ಮಿಯಮ್, ಅಲ್ಯೂಮಿನಿಯಂ, ಕ್ರೋಮಿಯಂ, ಸೀಸ ಸೇರಿದಂತೆ ಹಲವಾರು ರಾಸಾಯನಿಕಗಳಿರುತ್ತದೆ. ಇದು ತುಟಿಯ ಅಂದವನ್ನು ಹಾಳು ಮಾಡುತ್ತದೆ ಎನ್ನುತ್ತಾರೆ ತಜ್ಞರು.
2/ 8
ಇದರಲ್ಲಿರುವ ಸೀಸ ನಿಮ್ಮ ರಕ್ತಡೊತ್ತಡವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಸೀಸ ಅಂಶ ಬಹಳ ಹಾನಿಕಾರ. ಅಲ್ಲದೇ ಇದು ಹೃದಯದ ಸಮಸ್ಯೆಗಳನ್ನು ಸಹ ಉಂಟುಮಾಡುತ್ತದೆ. ಹಾಗಾಗಿ ಹೆಚ್ಚು ಲಿಪ್ಸ್ಟಿಕ್ ಬಳಸುವುದು ಸೂಕ್ತವಲ್ಲ.
3/ 8
ಈ ಲಿಪ್ಸ್ಟಿಕ್ನಲ್ಲಿರುವ ರಾಸಾಯನಿಕ ಅಂಶಗಳು ಚರ್ಮದ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಹೆಚ್ಚು. ನಿಮ್ಮದು ಸೂಕ್ಷ್ಮ ಚರ್ಮವಾಗಿದ್ದರೆ, ಸಾಧ್ಯವಾದಷ್ಟು ಲಿಪ್ಸ್ಟಿಕ್ ಬಳಕೆ ಮಾಡಬೇಡಿ.
4/ 8
ಮುಖ್ಯವಾಗಿ ಗರ್ಭಿಣಿಯರಿಗೆ ಈ ಲಿಪ್ಸ್ಟಿಕ್ ಹಾನಿಕಾರಕ ಎನ್ನುತ್ತಾರೆ ವೈದ್ಯರು. ಇದು ಸ್ತನದ ಕ್ಯಾನ್ಸರ್ ಸೇರಿದಂತೆ ಇತರ ಮಹಿಳೆಯರ ಸಮಸ್ಯೆಗೆ ಮುಖ್ಯ ಕಾರಣ. ಈ ಲಿಪ್ಸ್ಟಿಕ್ ಖರೀದಿಸುವಾಗ ಕೆಲ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡು ಖರೀದಿಸಿ.
5/ 8
ಇದರಲ್ಲಿರುವ ಪಾಲಿಥಿಲೀನ್ ನಿಮ್ಮ ನರಮಂಡಲದ ಹಾನಿಗೆ ಕಾರಣವಾಗುತ್ತದೆ. ಹಾಗಾಗಿ ಲಿಪ್ಸ್ಟಿಕ್ ಖರೀದಿ ಮಾಡುವಾಗ ಪಾಲಿಥಿಲೀನ್ ಎಷ್ಟಿದೆ ಎಂದು ಗಮನಿಸಿ, ಹೆಚ್ಚಿನ ಪ್ರಮಾಣದಲ್ಲಿ ಪಾಲಿಥಿಲೀನ್ ಇದ್ದರೆ ಖರೀದಿ ಮಾಡಬೇಡಿ..
6/ 8
ಕೆಲವೊಮ್ಮೆ ಲಿಪ್ಸ್ಟಿಕ್ಗಳು ನಮ್ಮ ದೇಹವನ್ನು ಸೇರುತ್ತವೆ. ಆಹಾರವನ್ನು ತಿನ್ನುವಾಗ ಅಥವಾ ಕುಡಿಯುವಾಗ ಇದು ಸಾಮಾನ್ಯ. ಆದರೆ ಇದರಲ್ಲಿರುವ ಪ್ಯಾರಾಬೆನ್ ಅತಿಸಾರ ಉಂಟು ಮಾಡುತ್ತದೆ ಎಂದು ಸಾಬೀತಾಗಿದೆ.
7/ 8
ಕೆಲ ಲಿಪ್ಸ್ಟಿಕ್ಗಳು ಚರ್ಮದ ಕಿರಿಕಿರಿ, ಉಬ್ಬಸ, ಕೆಮ್ಮು ಮತ್ತು ಕಣ್ಣುಗಳನ್ನು ಉಂಟುಮಾಡುತ್ತದೆ. ನಿಮಗೆ ಈಗಾಗಲೇ ಈ ಸಮಸ್ಯೆಗಳು ಇದ್ದರೆ ಲಿಪ್ಸ್ಟಿಕ್ ಬಳಕೆ ಮಾಡದಿರುವುದು ಉತ್ತಮ.
8/ 8
ಇದರಲ್ಲಿರುವ ಕೆಲ ಅಂಶಗಳು ಬುದ್ಧಿವಂತಿಕೆ, ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗುತ್ತದೆ ಎನ್ನಲಾಗುತ್ತದೆ. ಹಾಗಾಗಿ ಇವುಗಳನ್ನು ಹೆಚ್ಚಾಗಿ ಬಳಕೆ ಮಾಡುವುದು ಸೂಕ್ತವಲ್ಲ. ಕೇವಲ ಸುಂದರವಾಗಿ ಕಾಣಲು, ನಾವು ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು.