ಸಾಮಾನ್ಯವಾಗಿ ಸಿಹಿ ಪದಾರ್ಥಗಳು ಎಲ್ಲರಿಗೂ ಇಷ್ಟ. ಸಿಹಿತಿಂಡಿಗಳ ನೋಡಿದಾಕ್ಷಣ ಸವಿಯಬೇಕೆಂಬ ಬಯಕೆ ಮನದಲ್ಲಿ ಮೂಡುತ್ತದೆ. ಇಂತಹ ಬಯಕೆಗನುಗುಣವಾಗಿ ಎಲ್ಲ ಶುಭಕಾರ್ಯದಲ್ಲೂ ಸಿಹಿ ತಿಂಡಿಗೆ ವಿಶೇಷ ಸ್ಥಾನ. ಅತಿಯಾದರೆ ಅಮೃತವು ವಿಷ ಎಂಬ ಮಾತು ಸಿಹಿ ತಿನಿಸುಗಳಿಗೂ ಅನ್ವಯಿಸುತ್ತದೆ. ಏಕೆಂದರೆ ನಿಮ್ಮಲ್ಲಿ ಉಂಟಾಗುವ ಆಯಾಸಕ್ಕೂ ನೀವು ತಿನ್ನುವ ಸಿಹಿ ಪದಾರ್ಥಗಳಿಗೂ ಸಂಬಂಧವಿದೆ ಎಂದರೆ ನಂಬುತ್ತೀರಾ?
ಅನೇಕ ಜನರಲ್ಲಿ ಸಕ್ಕರೆ ಸೇವನೆಯಿಂದ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಮುಖ್ಯವಾಗಿ ಚರ್ಮ ಸುಕ್ಕುಗಟ್ಟುವುದು ಮತ್ತು ಡ್ರೈ ಸ್ಕಿನ್ ಸಮಸ್ಯೆ. ಅತಿಯಾದ ಸಕ್ಕರೆ ಸೇವನೆಯಿಂದ ನಮ್ಮ ಚರ್ಮದ ಜೀವಕೋಶಗಳು ನಿರ್ಜೀವವಾಗುತ್ತದೆ. ಇದರಿಂದ ಚರ್ಮವು ಡ್ರೈ ಸ್ಕಿನ್ ಸಮಸ್ಯೆ ಮತ್ತು ಶೀಘ್ರ ಸುಕ್ಕುಗಟ್ಟುವ ತೊಂದರೆಗೆ ಒಳಗಾಗುತ್ತದೆ. ಹೀಗಾಗಿಯೇ ಮೊಡವೆಗಳ ಸಮಸ್ಯೆ ಇರುವರಿಗೆ ವೈದ್ಯರು ಸಿಹಿ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡಿಕೊಳ್ಳುವಂತೆ ಶಿಫಾರಸ್ಸು ಮಾಡುತ್ತಾರೆ. ಒಟ್ಟಿನಲ್ಲಿ ಬಾಯಿಗೆ ರುಚಿ ಎಂದು ಹೆಚ್ಚು ಸಿಹಿ ತಿಂದರೆ ಸಮಸ್ಯೆಯಂತು ಕಟ್ಟಿಟ್ಟ ಬುತ್ತಿ.