ಬಡವರ ಬಾದಾಮಿ ಅಂತಲೇ ಕರೆಯುವ ಕಡಲೆಕಾಯಿಯಲ್ಲಿ ದೇಹಕ್ಕೆ ಬೇಕಾದ ಕೊಬ್ಬು, ಪ್ರೊಟೀನ್, ನಾರಿನಾಂಶ, ರಂಜಕ, ಮೆಗ್ನೀಷಿಯಂ, ವಿಟಮಿನ್ ಬಿ ಮುಂತಾದ ಪೋಷಕಾಂಶಗಳಿವೆ. ಆದರೆ, ನಾವು ಕಡಲೆಕಾಯಿಯನ್ನು ಅತಿಯಾಗಿ ಸೇವಿಸಿದರೆ ಆರೋಗ್ಯದ ಮೇಲೆ ಕೆಲವು ಅಡ್ಡ ಪರಿಣಾಮ ಬೀರಬಹುದು ಎಂಬ ವಿಚಾರ ತಿಳಿದಿದ್ಯಾ? ನೀವು ಹೆಚ್ಚು ಕಡಲೆಕಾಯಿಯನ್ನು ತಿಂದರೆ ಏನಾಗುತ್ತದೆ ಎಂಬುವುದಕ್ಕೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ.
ರಕ್ತ ಹೆಪ್ಪುಗಟ್ಟುವಿಕೆ: ಕಡಲೆಕಾಯಿಯಲ್ಲಿರುವ ರೆಸ್ವೆರಾಟ್ರೊಲ್ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ದೇಹಕ್ಕೆ ಗಾಯವಾದಾಗ ಉಂಟಾಗುವ ಅಧಿಕ ರಕ್ತಸ್ರಾವವನ್ನು ನಿಯಂತ್ರಿಸಲು ರಕ್ತ ಹೆಪ್ಪುಗಟ್ಟುವಿಕೆ ಅಗತ್ಯ. ಕಡಲೆಕಾಯಿಯಲ್ಲಿರುವ ಸಂಯುಕ್ತಗಳು ಈ ಚಟುವಟಿಕೆಯನ್ನು ಪ್ರತಿಬಂಧಿಸುತ್ತದೆ. ಯಾವುದೇ ಆಹಾರವನ್ನು ನಾವು ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.