Banana Side Effects: ರಾತ್ರಿ ಹೊತ್ತು ಬಾಳೆಹಣ್ಣು ತಿನ್ನಬಾರದಾ? ತಜ್ಞರು ಹೀಗಂತ ಹೇಳುತ್ತಿರುವುದು ಏಕೆ?

ಬಾಳೆಹಣ್ಣುಗಳು ಅನೇಕ ನೈಸರ್ಗಿಕ ಆಂಟಾಸಿಡ್​ಗಳನ್ನು ಹೊಂದಿರುತ್ತವೆ. ಇದು ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಬಾಳೆಹಣ್ಣಿನಲ್ಲಿರುವ ಸಿಹಿಯ ಅಂಶ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.

First published:

  • 18

    Banana Side Effects: ರಾತ್ರಿ ಹೊತ್ತು ಬಾಳೆಹಣ್ಣು ತಿನ್ನಬಾರದಾ? ತಜ್ಞರು ಹೀಗಂತ ಹೇಳುತ್ತಿರುವುದು ಏಕೆ?

    ಬಾಳೆಹಣ್ಣು ದೇಹಕ್ಕೆ ಅತ್ಯಂತ ಆರೋಗ್ಯಕರ ಹಣ್ಣು ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಬಾಳೆಹಣ್ಣನ್ನು ಪೊಟ್ಯಾಸಿಯಮ್ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದು ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

    MORE
    GALLERIES

  • 28

    Banana Side Effects: ರಾತ್ರಿ ಹೊತ್ತು ಬಾಳೆಹಣ್ಣು ತಿನ್ನಬಾರದಾ? ತಜ್ಞರು ಹೀಗಂತ ಹೇಳುತ್ತಿರುವುದು ಏಕೆ?

    ಬಾಳೆಹಣ್ಣುಗಳು ಅನೇಕ ನೈಸರ್ಗಿಕ ಆಂಟಾಸಿಡ್​ಗಳನ್ನು ಹೊಂದಿರುತ್ತವೆ. ಇದು ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಬಾಳೆಹಣ್ಣಿನಲ್ಲಿರುವ ಸಿಹಿಯ ಅಂಶ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.

    MORE
    GALLERIES

  • 38

    Banana Side Effects: ರಾತ್ರಿ ಹೊತ್ತು ಬಾಳೆಹಣ್ಣು ತಿನ್ನಬಾರದಾ? ತಜ್ಞರು ಹೀಗಂತ ಹೇಳುತ್ತಿರುವುದು ಏಕೆ?

    ಹೆಚ್ಚಿನ ಫೈಬರ್ ಅಂಶದಿಂದಾಗಿ, ಬಾಳೆಹಣ್ಣು ಕರುಳಿನ ಚಲನೆ ಮತ್ತು ಮಲಬದ್ಧತೆಗೆ ಸಹಕಾರಿಯಾಗಿದೆ. ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದ್ದರೂ ಮನೆಯಲ್ಲಿರುವ ಹಿರಿಯರು ರಾತ್ರಿ ಹೊತ್ತು ಹೆಚ್ಚಾಗಿ ಬಾಳೆಹಣ್ಣನ್ನು ತಿನ್ನಬೇಡಿ ಅಂತ ಹೇಳುತ್ತಾರೆ. ಅಷ್ಟಕ್ಕೂ ಇದಕ್ಕೆ ಕಾರಣವೇನು ಗೊತ್ತಾ?

    MORE
    GALLERIES

  • 48

    Banana Side Effects: ರಾತ್ರಿ ಹೊತ್ತು ಬಾಳೆಹಣ್ಣು ತಿನ್ನಬಾರದಾ? ತಜ್ಞರು ಹೀಗಂತ ಹೇಳುತ್ತಿರುವುದು ಏಕೆ?

    ಹೌದು, ರಾತ್ರಿ ಹೊತ್ತು ಬಾಳೆಹಣ್ಣು ತಿಂದರೆ ನೆಗಡಿ, ಕೆಮ್ಮು ಬರಬಹುದು. ಏಕೆಂದರೆ ಇದು ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ಆದರೆ ಮತ್ತೆ ಕೆಲವು ತಜ್ಞರು ರಾತ್ರಿ ಹೊತ್ತು ಬಾಳೆಹಣ್ಣು ತಿನ್ನಬಹುದು ಎನ್ನುತ್ತಾರೆ. ಹೀಗಿದ್ದರೂ ತಡರಾತ್ರಿ ಬಾಳೆಹಣ್ಣು ತಿನ್ನಬೇಡಿ ಎನ್ನಲಾಗುತ್ತದೆ.

    MORE
    GALLERIES

  • 58

    Banana Side Effects: ರಾತ್ರಿ ಹೊತ್ತು ಬಾಳೆಹಣ್ಣು ತಿನ್ನಬಾರದಾ? ತಜ್ಞರು ಹೀಗಂತ ಹೇಳುತ್ತಿರುವುದು ಏಕೆ?

    ಬಾಳೆಹಣ್ಣನ್ನು ದೊಡ್ಡ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಇದು ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದರೆ ನೀವು ಇದನ್ನು ರಾತ್ರಿ ಹೊತ್ತು ತಿನ್ನಲು ಬಯಸಿದರೆ, ಮಲಗುವ 2 ರಿಂದ 3 ಗಂಟೆಗಳಿಗೂ ಮುನ್ನವೇ ತಿನ್ನಲು ಪ್ರಯತ್ನಿಸಿ.

    MORE
    GALLERIES

  • 68

    Banana Side Effects: ರಾತ್ರಿ ಹೊತ್ತು ಬಾಳೆಹಣ್ಣು ತಿನ್ನಬಾರದಾ? ತಜ್ಞರು ಹೀಗಂತ ಹೇಳುತ್ತಿರುವುದು ಏಕೆ?

    ಶೀತ-ಕೆಮ್ಮು ಅಥವಾ ನೆಗಡಿಯಿಂದ ಬಳಲುತ್ತಿರುವವರು ಬಾಳೆಹಣ್ಣು ಅಥವಾ ಯಾವುದೇ ಹುಳಿ ಹಣ್ಣನ್ನು ತಿನ್ನಬಾರದು. ವಿಶೇಷವಾಗಿ ರಾತ್ರಿ ಹೊತ್ತು ತಿನ್ನಬಾರದು. ಏಕೆಂದರೆ ಈ ಸಮಯದಲ್ಲಿ ನಮ್ಮ ಚಯಾಪಚಯವು ನಿಧಾನವಾಗಿರುತ್ತದೆ ಮತ್ತು ದೇಹವು ವಿಶ್ರಾಂತಿ ಪಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಏನನ್ನಾದರೂ ತಿಂದರೆ, ಅದು ಶಕ್ತಿಯಾಗಿ ಬದಲಾಗುತ್ತದೆ. ಮಲಗುವಾಗ ಬಾಳೆಹಣ್ಣು ತಿನ್ನುವುದು ನಿಮಗೆ ಒಳ್ಳೆಯದಲ್ಲ.

    MORE
    GALLERIES

  • 78

    Banana Side Effects: ರಾತ್ರಿ ಹೊತ್ತು ಬಾಳೆಹಣ್ಣು ತಿನ್ನಬಾರದಾ? ತಜ್ಞರು ಹೀಗಂತ ಹೇಳುತ್ತಿರುವುದು ಏಕೆ?

    ಬಾಳೆಹಣ್ಣುಗಳು ಹೊಟ್ಟೆಯಲ್ಲಿ ಲೋಳೆಯ ಮಟ್ಟವನ್ನು ಹೆಚ್ಚಿಸುತ್ತವೆ. ಆದ್ದರಿಂದ ಇದು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆಯುರ್ವೇದದ ಪ್ರಕಾರ ರಾತ್ರಿ ಬಾಳೆಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ರಾತ್ರಿ ಬಾಳೆಹಣ್ಣು ತಿನ್ನುವುದರಿಂದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ರಾತ್ರಿ ಬಾಳೆಹಣ್ಣು ತಿನ್ನುವುದರಿಂದ ಬೊಜ್ಜು ಹೆಚ್ಚಾಗಬಹುದು.

    MORE
    GALLERIES

  • 88

    Banana Side Effects: ರಾತ್ರಿ ಹೊತ್ತು ಬಾಳೆಹಣ್ಣು ತಿನ್ನಬಾರದಾ? ತಜ್ಞರು ಹೀಗಂತ ಹೇಳುತ್ತಿರುವುದು ಏಕೆ?

    ಮತ್ತೊಂದೆಡೆ, ರಾತ್ರಿಯಲ್ಲಿ ಅರ್ಧ ಬಾಳೆಹಣ್ಣು ತಿನ್ನುವುದು ಆರೋಗ್ಯಕರ ಪ್ರಯೋಜನಗಳಿದೆ ಎಂದು ಕೆಲವರು ನಂಬುತ್ತಾರೆ. ಆರೋಗ್ಯ ತಜ್ಞರ ಪ್ರಕಾರ, ರಾತ್ರಿ ಹೊತ್ತು ಬಾಳೆಹಣ್ಣು ತಿನ್ನುವುದರಿಂದ ನಮಗೆ ಉತ್ತಮ ನಿದ್ರೆ ಬರುತ್ತದೆ. ಏಕೆಂದರೆ ಬಾಳೆಹಣ್ಣಿನಲ್ಲಿ ಡೈರೋಸಿನ್ ಇರುತ್ತದೆ. ಡೈರೋಸಿನ್ ನೈಸರ್ಗಿಕವಾಗಿ ದೇಹದಲ್ಲಿ ಮೆಲಟೋನಿನ್ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ. ಮೆಲಟೋನಿನ್ ನಮಗೆ ನಿದ್ದೆ ಬರುವಂತೆ ಮಾಡುತ್ತದೆ.

    MORE
    GALLERIES