Hot Water In Winter: ಚಳಿಗಾಲದಲ್ಲಿ ಬೆಚ್ಚಗಿರಲು ಅತಿಯಾಗಿ ಬಿಸಿನೀರು ಕುಡಿಬೇಡಿ, ಅಪಾಯ ಅಂತಾರೆ ತಜ್ಞರು
Side Effects of Drinking Hot Water: ಜನರು ತೂಕ ಇಳಿಸಲು, ಗಂಟಲು ನೋವಿಗೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಬಿಸಿನೀರನ್ನು ಕುಡಿಯುತ್ತಾರೆ. ಆದರೆ ಇದನ್ನು ಅತಿಯಾಗಿ ಸೇವನೆ ಮಾಡಿದರೆ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾದ್ರೆ ಅತಿಯಾಗಿ ಬಿಸಿನೀರು ಕುಡಿದರೆ ಏನಾಗುತ್ತದೆ ಎಂಬುದು ಇಲ್ಲಿದೆ.
ಬಿಸಿನೀರು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅನೇಕ ಫಿಟ್ನೆಸ್ ತಜ್ಞರು ಬಿಸಿ ನೀರನ್ನು ಕುಡಿಯಲು ಶಿಫಾರಸು ಮಾಡುತ್ತಾರೆ. ಆದರೆ ನಿಜಕ್ಕೂ ಬೀಸಿನೀರನ್ನು ಅತಿಯಾಗಿ ಕುಡಿದರೆ ಲಾಭವಿದೆಯಾ ಎನ್ನುವ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ.
2/ 8
ಬಿಸಿನೀರು ಕುಡಿಯುವುದರಿಂದ ದೇಹದಲ್ಲಿನ ರಕ್ತನಾಳಗಳು ಹಿಗ್ಗುತ್ತವೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ನೋವಿನಿಂದ ಪರಿಹಾರವನ್ನು ನೀಡುತ್ತದೆ, ಆದರೆ ಬಿಸಿನೀರಿನ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ.
3/ 8
ಕಲೆ ವರದಿಗಳ ಪ್ರಕಾರ ಬಿಸಿನೀರಿನ ಅತಿಯಾದ ಸೇವನೆಯು ಆರೋಗ್ಯಕ್ಕೆ ಅಪಾಯವನ್ನು ಉಂಟು ಮಾಡಬಹುದು. ಈ ಬಿಸಿನೀರನ್ನು ದೀರ್ಘಕಾಲ ಕುಡಿಯುವುದರಿಂದ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು ಎನ್ನಲಾಗುತ್ತದೆ.
4/ 8
ಗಂಟಲು ಸುಡುವ ಅಪಾಯ ಹೆಚ್ಚು: ಬಿಸಿ ನೀರನ್ನು ಸೇವಿಸುವುದರಿಂದ ಗಂಟಲಿನಲ್ಲಿ ಸುಡುವ ಸಂವೇದನೆಯನ್ನು ಉಂಟುಮಾಡಬಹುದು ಇದರಿಂದ ಉಸಿರಾಟದ ಪ್ರದೇಶವು ಹದಗೆಡುವ ಮತ್ತು ಉಸಿರಾಟದ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆ ಇದೆ.
5/ 8
ಬಿಸಿನೀರು ಚರ್ಮಕ್ಕೆ ತಾಗಿದಾಗ, ಶಾಖದಿಂದ ಸ್ನಾಯುಗಳು ಹಾನಿಗೊಳಗಾಗುತ್ತದೆ ಎನ್ನುತ್ತಾರೆ. ಅತಿಯಾದ ಬಿಸಿನೀರು ಗಂಟಲಿನ ಅಂಗಾಂಶವನ್ನು ಸಹ ಹಾನಿ ಮಾಡುತ್ತದೆ. ಇದು ಸುಟ್ಟಗಾಯಗಳಿಗೆ ಕಾರಣವಾಗಬಹುದು.
6/ 8
ನೀರು ಕಲ್ಮಶಗಳನ್ನು ಹೊಂದಿರಬಹುದು: ಈ ವಿಷಯದ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಲಾಗಿಲ್ಲವಾದರೂ ಸಹ ಬಿಸಿನೀರಿನಲ್ಲಿ ಧೂಳು ಇರಬಹುದು ಎಂದು ತಜ್ಞರು ಹೇಳುತ್ತಾರೆ. ನೀರನ್ನು ಬಿಸಿ ಮಾಡುವ ಉಪಕರಣಗಳು ಇದಕ್ಕೆ ಕಾರಣ ಎನ್ನಲಾಗುತ್ತದೆ. ಇದು ಬಹಳ ಸಮಯದ ನಂತರ ಸಮಸ್ಯೆಗಳನ್ನು ಉಂಟುಮಾಡಬಹುದು
7/ 8
ಹೊಟ್ಟೆಯ ಉಷ್ಣತೆಯು ಹೆಚ್ಚಾಗಬಹುದು: ಕೆಲವೊಮ್ಮೆ ಬಿಸಿನೀರು ಕುಡಿಯುವುದರಿಂದ ಹೊಟ್ಟೆಯ ಉಷ್ಣತೆಯು ಉಂಟಾಗುತ್ತದೆ. ಹೊಟ್ಟೆಯಲ್ಲಿನ ಶಾಖದಿಂದಾಗಿ, ಬಾಯಿ ಮತ್ತು ಹೊಟ್ಟೆಯಲ್ಲಿ ಗುಳ್ಳೆಗಳು ಉಂಟಾಗುತ್ತವೆ.
8/ 8
ಚಳಿಗಾಲದಲ್ಲಿ ಬಿಸಿನೀರನ್ನು ನಿಗದಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ನೀವು ಉಗುರುಬೆಚ್ಚಗಿನ ಕುಡಿಯಿವುದು ಸೂಕ್ತ. ಚಳಿಗಾಲದಲ್ಲಿ ಬಿಸಿನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ, ಆದರೆ ಬಿಸಿನೀರು ಕುಡಿಯುವುದರಿಂದ ಸಮಸ್ಯೆಗಳು ಸಹ ಆಗುತ್ತದೆ ಎಂಬುದನ್ನ ಮರೆಯಬೇಡಿ.