ಅನೇಕ ಮಂದಿ ಮನ್ಸೂನ್ ಮತ್ತು ಚಳಿಗಾಲದಲ್ಲಿ ಹೆಚ್ಚು ಚಹಾವನ್ನು ಕುಡಿಯುತ್ತಾರೆ. ಆದರೆ ಬೇಸಿಗೆ ಕಾಲ ಬಂದರೆ ಚಹಾ ಕುಡಿಯಬೇಕಾ? ಎಂಬ ಪ್ರಶ್ನೆ ಮೂಡುತ್ತದೆ. ಏಕೆಂದರೆ ಬೇಸಿಗೆಯಲ್ಲಿ ಬಿಸಿಬಿಸಿ ಟೀ ಕುಡಿಯುವುದು ಕಷ್ಟವೇ ಸರಿ. ಆದರೆ ಮುಂಜಾನೆ ಮತ್ತು ರಾತ್ರಿ ಹೊತ್ತು ಹೆಚ್ಚು ತೊಂದರೆ ಆಗದಿದ್ದರೂ, ಮಧ್ಯಾಹ್ನ ಚಹಾ ಕುಡಿಯಲು ಜನ ಹಿಂದೇಟು ಹಾಕುತ್ತಾರೆ.