ಬೇಸಿಗೆಯಲ್ಲಿ ಸೌತೆಕಾಯಿ ಅತ್ಯಂತ ಜನಪ್ರಿಯ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಇದು ಬೇಸಿಗೆಯಲ್ಲಿ ಉಂಟಾಗುವ ದೇಹದ ಶಾಖವನ್ನು ತಂಪಾಗಿಸಲು ಸಹಾಯ ಮಾಡುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇಂದು, ಸೌತೆಕಾಯಿಯನ್ನು ಸಲಾಡ್ ಅಥವಾ ಆಹಾರದೊಂದಿಗೆ ಉಪ್ಪು ಬೆರೆಸಿ ವಿವಿಧ ರೂಪಗಳಲ್ಲಿ ಸೇವಿಸಲಾಗುತ್ತದೆ. ಕೆಲವರು ಸೌತೆಕಾಯಿಯನ್ನು ಸಂಪೂರ್ಣವಾಗಿ ಸಿಪ್ಪೆ ತೆಗೆದು ತಿನ್ನುತ್ತಾರೆ. ಆದರೆ ಇನ್ಮುಂದೆ ನೀವು ಸೌತೆಕಾಯಿಯನ್ನು ತಿಂದರೆ ಅದರ ಸಿಪ್ಪೆ ಸುಲಿಯದೇ ತಿನ್ನುವುದು ಉತ್ತಮ.
ಅಲ್ಲದೇ ಸೌತೆಕಾಯಿಯ ಸಿಪ್ಪೆ ಸುಲಿದು ತಿನ್ನುವಾಗ, ಅದನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿದ ನಂತರ ಮಾತ್ರ ಸೇವಿಸಬೇಕು. ಏಕೆಂದರೆ ಈಗ ಅಂಗಡಿಗಳಲ್ಲಿ ಸಿಗುವ ಸೌತೆಕಾಯಿಗಳನ್ನು ಸಂರಕ್ಷಿಸಲು ಮೇಣವನ್ನು ಲೇಪಿಸಲಾಗಿದೆ. ಅದಕ್ಕಾಗಿಯೇ ಸೌತೆಕಾಯಿಗಳನ್ನು ತಿನ್ನುವ ಮೊದಲು ತೊಳೆದು ಸ್ವಚ್ಛಗೊಳಿಸಬೇಕು. ಸೌತೆಕಾಯಿಯನ್ನು ಬಿಸಿ ನೀರಿನಲ್ಲಿ ತೊಳೆದರೆ ಹಾನಿಕಾರಕ ಮೇಣದಿಂದ ನಮ್ಮನ್ನು ರಕ್ಷಿಸುತ್ತದೆ.
ಸೌತೆಕಾಯಿಯನ್ನು ಸಾಮಾನ್ಯವಾಗಿ ಸಲಾಡ್, ರೈತಾ ಮತ್ತು ಜ್ಯೂಸ್ ಆಗಿ ಸೇವಿಸಲಾಗುತ್ತದೆ. ಕೆಲವು ಮಂದಿ ಯಾವುದೇ ಮಸಾಲೆಗಳನ್ನು ಸೇರಿಸದೇ ಕೇವಲ ಸೌತೆಕಾಯಿಯನ್ನು ಮಾತ್ರ ತಿನ್ನಲು ಬಯಸುತ್ತಾರೆ. ವಿಶೇಷವಾಗಿ ಬೇಸಿಗೆಯಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ಬೇಸಿಗೆಯಲ್ಲಿ ಸಾಧ್ಯವಾದಷ್ಟು ಸೌತೆಕಾಯಿಯನ್ನು ಸೇವಿಸುವುದರಿಂದ ನಿಮಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಪ್ರತಿದಿನ ಸೌತೆಕಾಯಿಯನ್ನು ಸೇವಿಸಿದರೆ ನಮ್ಮ ದೇಹದಲ್ಲಿ ನೀರಿನ ಕೊರತೆಯಾಗುವುದಿಲ್ಲ ಎಂಬುದು ಗಮನಾರ್ಹ.