High Blood Pressure: ಅಧಿಕ ರಕ್ತದೊತ್ತಡದ ಸಮಸ್ಯೆ ಇರೋರು ಒಣಮೀನು ತಿನ್ನಬಹುದಾ?

High blood pressure: ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಯಾವ ಆಹಾರ ಸೇವಿಸಬೇಕು ಅನ್ನೋ ಗೊಂದಲ ಇರುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ಜನರು ಒಣಮೀನು ಸೇವಿಸಬೇಕಾ?

First published:

  • 17

    High Blood Pressure: ಅಧಿಕ ರಕ್ತದೊತ್ತಡದ ಸಮಸ್ಯೆ ಇರೋರು ಒಣಮೀನು ತಿನ್ನಬಹುದಾ?

    ಒತ್ತಡದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಇಂದು ಹೆಚ್ಚಿನ ಜನರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಕಂಡುಬರುತ್ತದೆ. ರಕ್ತದೊತ್ತಡದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಈ ಕಾಯಿಲೆಯಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ಅಧಿಕ ಉಪ್ಪು ಮತ್ತು ಎಣ್ಣೆ ಪದಾರ್ಥಗಳನ್ನು ಸೇವಿಸಬಾರದು. ಅಧಿಕ ರಕ್ತದೊತ್ತಡ ಇರುವವರು ಉಪ್ಪು ಹೆಚ್ಚಿರುವ ಒಣಮೀನನ್ನು ಏಕೆ ತಿನ್ನಬಾರದು ಎಂಬುದರ ಮಾಹಿತಿ ಇಲ್ಲಿದೆ.

    MORE
    GALLERIES

  • 27

    High Blood Pressure: ಅಧಿಕ ರಕ್ತದೊತ್ತಡದ ಸಮಸ್ಯೆ ಇರೋರು ಒಣಮೀನು ತಿನ್ನಬಹುದಾ?

    ಮಳೆಗಾಲದಲ್ಲಿ ತಾಜಾ ಹಸಿ ಮೀನುಗಳು ಸುಲಭವಾಗಿ ಸಿಗುವುದಿಲ್ಲ, ಆದ್ದರಿಂದ ತೇವಾಂಶವನ್ನು ಉಳಿಸಿಕೊಳ್ಳಲು ಸಣ್ಣ ಮೀನುಗಳನ್ನು ಉಪ್ಪಿನ ಮಿಶ್ರಣದೊಂದಿಗೆ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಈ ರೀತಿ ಮಾಡೋದರಿಂದ ಮೀನುಗಳು ಚೆನ್ನಾಗಿರುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    High Blood Pressure: ಅಧಿಕ ರಕ್ತದೊತ್ತಡದ ಸಮಸ್ಯೆ ಇರೋರು ಒಣಮೀನು ತಿನ್ನಬಹುದಾ?

    ಒಣ ಮೀನಿನಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದರಲ್ಲಿ ಕೊಬ್ಬಿನಂಶ ಕಡಿಮೆ ಇರುತ್ತದೆ. ಕೊಬ್ಬಿನಾಮ್ಲ, ವಿಟಮಿನ್ ಮತ್ತು ಮಿನರಲ್ಸ್ ಹೇರಳವಾಗಿದೆ. ಆದರೆ ಒಣ ಮೀನಿನಲ್ಲಿ ಉಪ್ಪು ಹೆಚ್ಚಿರುವುದರಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಇಂತಹ ಮೀನುಗಳನ್ನು ತ್ಯಜಿಸುವುದು ಉತ್ತಮ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    High Blood Pressure: ಅಧಿಕ ರಕ್ತದೊತ್ತಡದ ಸಮಸ್ಯೆ ಇರೋರು ಒಣಮೀನು ತಿನ್ನಬಹುದಾ?

    ಒಣಮೀನು ತಿನ್ನೋದರಿಂದ ರಕ್ತ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಕೊನೆಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಅಧಿಕ ರಕ್ತದೊತ್ತಡ ಇರುವವರು ಆಹಾರದಲ್ಲಿ ಉಪ್ಪನ್ನು ಕಡಿಮೆ ಬಳಸಬೇಕು. ಉಪ್ಪು ಹೆಚ್ಚಿರುವ ಯಾವುದೇ ಆಹಾರವನ್ನು ತಿನ್ನಬಾರದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    High Blood Pressure: ಅಧಿಕ ರಕ್ತದೊತ್ತಡದ ಸಮಸ್ಯೆ ಇರೋರು ಒಣಮೀನು ತಿನ್ನಬಹುದಾ?

    ಒಣ ಮೀನಿನಲ್ಲಿ ಉಪ್ಪಿನ ಅಂಶ ಹೆಚ್ಚಿರುವುದರಿಂದ ಅಧಿಕ ರಕ್ತದೊತ್ತಡ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಅಮೆರಿಕದ ಪ್ರತಿಷ್ಠಿತ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    High Blood Pressure: ಅಧಿಕ ರಕ್ತದೊತ್ತಡದ ಸಮಸ್ಯೆ ಇರೋರು ಒಣಮೀನು ತಿನ್ನಬಹುದಾ?

    ಅಧ್ಯಯನವೊಂದರ ಪ್ರಕಾರ, ಅಧಿಕ ರಕ್ತದೊತ್ತಡ ಇರುವವರ ದೇಹದಲ್ಲಿ ಸೋಡಿಯಂ ಕಡಿಮೆ ಇರುತ್ತದೆ. ಇದು ಹೃದಯ ಸಂಬಂಧಿ ಸಮಸ್ಯೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ . (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    High Blood Pressure: ಅಧಿಕ ರಕ್ತದೊತ್ತಡದ ಸಮಸ್ಯೆ ಇರೋರು ಒಣಮೀನು ತಿನ್ನಬಹುದಾ?

    ಈಗಾಗಲೇ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳಿರುವವರು ಖಾರ ಪದಾರ್ಥಗಳ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ವೈದ್ಯರು ಸೂಚಿಸುತ್ತಾರೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದನ್ನು ಪರಿಶೀಲಿಸಿಲ್ಲ. ಯಾವುದೇ ಪುರಾವೆಗಳಿಲ್ಲ.)

    MORE
    GALLERIES