ಚಿಕ್ಕ ವಯಸ್ಸಿನಲ್ಲೇ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾದ್ರೆ ಏನೆಲ್ಲಾ ಸಮಸ್ಯೆಗಳಾಗುತ್ತೆ ಗೊತ್ತಾ?
ಶೇ.66ರಷ್ಟು ಬಾಲಕರು ಹಾಗೂ ಶೇ.40ರಷ್ಟು ಹುಡುಗಿಯರು ತಾನು ಮಾಧ್ಯಮಗಳಲ್ಲಿ ನೋಡಿರುವಂತಹದ್ದನ್ನು ನೈಜ ಜೀವನದಲ್ಲಿ ಅನುಭವಿಸಲು ಬಯಸುವರು. ಇದರಿಂದಾಗಿ ಬೇಡದ ಗರ್ಭಧಾರಣೆ ಸಂಭವಿಸುತ್ತದೆ.
ಅತಿ ಚಿಕ್ಕ ವಯಸ್ಸಿನಲ್ಲಿಯೇ ಹುಡುಗಿಯರು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾದರೆ ಅದರಿಂದ ಹಲವಾರು ರೀತಿಯ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಯಾಕೆಂದರೆ ಸಣ್ಣ ವಯಸ್ಸಿನಲ್ಲಿ ಗರ್ಭ ಧರಿಸಿದರೆ ಅದರಿಂದ ದೈಹಿಕವಾಗಿ ಹಲವಾರು ಬದಲಾವಣೆಗಳು ಆಗಬಹುದು.
2/ 11
ಇದು ಮಾನಸಿಕವಾಗಿ ಹುಡುಗಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹುಡುಗಿಯರು ಸಣ್ಣ ವಯಸ್ಸಿನಲ್ಲಿ ಸೆಕ್ಸ್ ನಲ್ಲಿ ಭಾಗಿಯಾದರೆ ಗರ್ಭಕಂಠದ ಕ್ಯಾನ್ಸರ್ ಗೆ ತುತ್ತಾಗುವಂತಹ ಸಾಧ್ಯತೆಯು ಇಮ್ಮಡಿಯಾಗುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ.
3/ 11
ತುಂಬಾ ಸಣ್ಣ ವಯಸ್ಸಿನಲ್ಲಿ ಸೆಕ್ಸ್ ನಲ್ಲಿ ಭಾಗಿಯಾದರೆ ಆಗ ಕಾಯಿಲೆಗಳು ಬರುವಂತಹ ಅಪಾಯವು ಅತಿಯಾಗಿ ಇರುವುದು ಎಂದು ಅಧ್ಯಯನ ತಿಳಿಸಿದೆ ಮತ್ತು ಹುಡುಗಿಯರು ಸಣ್ಣ ವಯಸ್ಸಿನಲ್ಲಿ ಸೆಕ್ಸ್ ನಲ್ಲಿ ಭಾಗಿಯಾಗಬಾರದು ಎಂದು ಎಚ್ಚರಿಕೆ ಕೂಡ ನೀಡಿದೆ.
4/ 11
ಇಂಗ್ಲೆಂಡ್ ನಲ್ಲಿ ಮಹಿಳೆಯರು 25ರ ಹರೆಯದ ತನಕ ಎನ್ ಎಚ್ ಎಸ್ ಸ್ಕ್ರೀನಿಂಗ್ ಗೆ ಅರ್ಹತೆ ಪಡೆಯುವುದಿಲ್ಲ. ಲೈಂಗಿಕವಾಗಿ ಹರಡುವಂತಹ ಎಚ್ ಪಿವಿ ಎನ್ನುವ ವೈರಸ್ ಗರ್ಭಕಂಠದ ಸೋಂಕು ಉಂಟು ಮಾಡುವುದು.
5/ 11
ಭಾವನಾತ್ಮಕವಾಗಿ ಹಾನಿಯಾಗುವುದು: ಹೌದು, ದೊಡ್ಡ ವಯಸ್ಸಿನವರಿಂದ ಲೈಂಗಿಕ ದೌರ್ಜನ್ಯ, ನಾಚಿಕೆ, ಶಿಕ್ಷೆ ಅಥವಾ ಅತ್ಯಾಚಾರದಂತಹ ಘಟನೆಗಳು ನಡೆದಿದ್ದರೆ ಆಗ ಇದರಿಂದಾಗಿ ಭವಿಷ್ಯದಲ್ಲಿ ಲೈಂಗಿಕ ಸಮಸ್ಯೆಗೆ ಕಾರಣವಾಗುತ್ತದೆ.
6/ 11
ಗರ್ಭಧಾರಣೆಯ ಅಪಾಯ: 13ರ ಹರೆಯದಲ್ಲಿ ಸೆಕ್ಸ್ ನಲ್ಲಿ ಭಾಗಿಯಾಗುವಂತಹ ಮಕ್ಕಳು ಬಹು ಸಂಗಾತಿಗಳನ್ನು ಹೊಂದಿ ಅಸುರಕ್ಷಿತ ಸೆಕ್ಸ್ ನಲ್ಲಿ ಭಾಗಿಯಾಗುವ ಮತ್ತು ಡ್ರಗ್ಸ್ ಹಾಗೂ ಆಲ್ಕೋಹಾಲ್ ಗೆ ದಾಸರಾಗುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ಹೇಳಿವೆ.
7/ 11
ಶೇ.66ರಷ್ಟು ಬಾಲಕರು ಹಾಗೂ ಶೇ.40ರಷ್ಟು ಹುಡುಗಿಯರು ತಾನು ಮಾಧ್ಯಮಗಳಲ್ಲಿ ನೋಡಿರುವಂತಹದ್ದನ್ನು ನೈಜ ಜೀವನದಲ್ಲಿ ಅನುಭವಿಸಲು ಬಯಸುವರು. ಇದರಿಂದಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಲೈಂಗಿಕ ರೋಗಗಳು ಮತ್ತು ಬೇಡದ ಗರ್ಭಧಾರಣೆ ಸಂಭವಿಸುತ್ತದೆ.
8/ 11
ಈ ನಡವಳಿಕೆಯು ಬರಲು ಕಾರಣವೇನು?: ಮಧ್ಯಪಾನ, ಡ್ರಗ್ಸ್ ಬಳಕೆ ಅಥವಾ ಹಿಂಸೆಗೆ ಪ್ರಚೋದಿಸುವಂತಹ ಸಿನಿಮಾ ಅಥವಾ ಸಂಗೀತ ಕೇಳುವಂತಹ ಸಣ್ಣ ವಯಸ್ಸಿನವರು ಇಂತಹ ಲೈಂಗಿಕ ಚಟುವಟಿಕೆಗಳಲ್ಲಿ ಭಾಗಿಯಾಗುವರು ಎಂದು ಅಧ್ಯಯನಗಳು ಹೇಳಿವೆ.
9/ 11
ಸಿನಿಮಾ: ಸಿನಿಮಾದಲ್ಲಿ ಲೈಂಗಿಕ ಅಂಶಗಳನ್ನು ವೀಕ್ಷಿಸುವಂತಹ ಹುಡುಗರು ತಾವು ಇದನ್ನು ನೋಡಿದ ಎರಡು ವರ್ಷಗಳ ಒಳಗಡೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವಂತಹ ಸಾಧ್ಯತೆಯು ಇತರ ಹುಡುಗರಗಿಂತ ಹೆಚ್ಚಾಗಿರುವುದು ಎಂದು ಅಧ್ಯಯನವು ಹೇಳಿದೆ.
10/ 11
ಮಾಧ್ಯಮಗಳಲ್ಲಿ ಲೈಂಗಿಕ ಅಂಶ: ಸಿನಿಮಾದಲ್ಲಿ ಇರುವಂತಹ ಲೈಂಗಿಕ ಅಂಶಗಳು ಕೂಡ ಸಣ್ಣ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.
11/ 11
ಮಾಧ್ಯಮಗಳಲ್ಲಿ ಬರುವಂತಹ ಸಂದೇಶದಿಂದ ಲೈಂಗಿಕ ಅನುಭವವು ತುಂಬಾ ಸಾಮಾನ್ಯ, ಅಸುರಕ್ಷಿತ ಮತ್ತು ಪರಿಣಾಮವಿಲ್ಲದ ಎಂದು ಲೈಂಗಿಕ ಪ್ರೇರಣೆ ನೀಡುತ್ತದೆ. ಇದರಿಂದಾಗಿ ಮಕ್ಕಳು ಭಾವನಾತ್ಮಕ, ಸಾಮಾಜಿಕ ಅಥವಾ ಬೌದ್ಧಿಕವಾಗಿ ತಯಾರಾಗುವ ಮೊದಲೇ ಮಕ್ಕಳು ಲೈಂಗಿಕ ಚಟುವಟಿಕೆಗಳಲ್ಲ ತೊಡಗಿಕೊಳ್ಳುತ್ತಾರೆ.