ಮದುವೆ ನಂತರ ಸೆಕ್ಸ್ ಮೇಲಿನ ಆಸಕ್ತಿ ಕಡಿಮೆ ಆಗೋದೇಕೆ?; ಇಲ್ಲಿದೆ ಉತ್ತರ
ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇದ್ದು, ನಂತರ ದಿನಗಳಲ್ಲಿ ಗಂಡ-ಹೆಂಡತಿ ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಈ ಆಸಕ್ತಿ ಕಡಿಮೆ ಆಗಲು ಕಾರಣಗಳೇನು ಎಂಬುದಕ್ಕೆ ಇಲ್ಲಿದೆ ಉತ್ತರ.
ಮದುವೆ ಆರಂಭದಲ್ಲಿ ಸೆಕ್ಸ್ ಮಾಡೋಕೆ ಉತ್ಸುಕರಾಗಿದ್ದ ಬಹುತೇಕ ದಂಪತಿ ಬರುಬರುತ್ತಾ ಲೈಂಗಿಕ ಜೀವನದ ಮೇಲೆ ಜಿಗುಪ್ಸೆ ತಾಳುತ್ತಾರೆ.
2/ 13
ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇದ್ದು, ನಂತರ ದಿನಗಳಲ್ಲಿ ಹೀಗೆ ಆಗುವುದೇಕೆ? ಈ ಬಗ್ಗೆ ತಜ್ಞರು ಹೇಳೋದು ಹೀಗೆ.
3/ 13
ಸೆಕ್ಸ್ ನಲ್ಲಿ ಪರಾಕಾಷ್ಠೆ ತಲುಪುವ ಪ್ರಮಾಣ ಆರಂಭದಲ್ಲಿ ಹೆಚ್ಚಾಗಿರುತ್ತದೆ. ಬರುಬರುತ್ತಾ ಇದು ಕಡೆಮೆ ಆಗುತ್ತದೆ. ಇದಕ್ಕೆ ನೇರ ಕಾರಣ ಲೈಂಗಿಕ ಜೀವನದ ಬಗ್ಗೆ ಕಡಿಮೆ ಆಗುವ ಆಸಕ್ತಿ ಎಂಬುದು ತಜ್ಞರ ಅಭಿಪ್ರಾಯ.
4/ 13
ಹಾಗಿದ್ರೆ ಸೆಕ್ಸ್ ಬಗ್ಗೆ ಆಸಕ್ತಿ ಕಡಿಮೆ ಆಗಲು ಕಾರಣಗಳೇನು ಎಂಬುದಕ್ಕೆ ಇಲ್ಲಿದೆ ಉತ್ತರ.
5/ 13
ತಣಿಯುವ ಕುತೂಹಲ: ಮದುವೆಗೂ ಮೊದಲು ಸೆಕ್ಸ್ ಬಗ್ಗೆ ಗಂಡು ಹಾಗೂ ಹೆಣ್ಣು ತಮ್ಮದೇ ಫ್ಯಾಂಟಸಿ ಜಗತ್ತನ್ನು ಕಟ್ಟಿಕೊಂಡಿರುತ್ತಾರೆ. ಆದರೆ, ಮದುವೆ ನಂತರದಲ್ಲಿ ಆ ಫ್ಯಾಂಟಸಿ ಜಗತ್ತು ಕಳಚಿ ಬೀಳುತ್ತದೆ. ಇದು ಲೈಂಗಿಕ ಜೀವನದ ಮೇಲೆ ಜಿಗುಪ್ಸೆ ಮೂಡಲು ಮೂಲ ಕಾರಣ ಎನ್ನುತ್ತಾರೆ ವೈದ್ಯರು.
6/ 13
ಒತ್ತಡ: ಪ್ರತಿ ಮನುಷ್ಯ ನಿತ್ಯ ತನ್ನದೇ ಆದ ಒತ್ತಡದಲ್ಲಿ ಮುಳುಗಿರುತ್ತಾನೆ. ಕಚೇರಿ ಮನೆ ಸಮಸ್ಯೆಗಳು ಆತನ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಒತ್ತಡ ಹೆಚ್ಚಿದಂತೆ ಆತ ಸೆಕ್ಸ್ ಮೇಲಿನ ಆಸಕ್ತಿ ಕಳೆದುಕೊಳ್ಳುತ್ತಾನೆ.
7/ 13
ಸಂಬಂಧದಲ್ಲಿ ಬಿರುಕು: ಸಂಬಂಧಗಳಲ್ಲಿ ನಿತ್ಯ ನಡೆವ ಜಗಳಗಳು ಕೂಡ ದಾಂಪತ್ಯದ ಜೊತೆಗೆ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಜಗಳ ಹೆಚ್ಚಿದಂತೆ ಲೈಂಗಿಕ ಆಸಕ್ತಿ ಕಡಿಮೆ ಆಗುತ್ತದೆ.
8/ 13
ಅನುಮಾನ: ಅನೇಕರು ತಮ್ಮ ಪತಿ/ಪತ್ನಿ ಮೇಲೆ ಅನುಮಾನ ಪಡುತ್ತಿರುತ್ತಾರೆ. ಅವರಿಗೆ ತಮ್ಮ ಜತೆಗಾರರನ್ನು ಅನುಮಾನ ಪಡುವುದೇ ಕೆಲಸ. ಇದರಿಂದ ಬೇಡದ ಆಲೋಚನೆಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ಕೂಡ ಸೆಕ್ಸ್ ಬಗೆಗಿನ ಆಸಕ್ತಿ ಕುಗ್ಗುತ್ತದೆ.
9/ 13
ಬಳಲಿಕೆ: ನೀವು ನಿತ್ಯ ಕಚೇರಿಯಲ್ಲಿ ಹೆಚ್ಚು ಕೆಲಸ ಮಾಡುತ್ತೀರಿ. ನಂತರ ಮನೆಗೆ ಬಂದು ಮಲಗಿದರೆ ಸಾಕಪ್ಪ ಅನ್ನಿಸುತ್ತಿರುತ್ತದೆ. ಹೀಗಾದರೂ ಕೂಡ ಸೆಕ್ಸ್ ಬಗೆಗಿನ ಆಸಕ್ತಿ ಕಡಿಮೆ ಆಗಬಹುದು.
10/ 13
ಹಾರ್ಮೋನ್ ಅಸಮತೋಲನ: ನಿಮ್ಮ ದೇಹದಲ್ಲಿ ಕೆಲವೊಮ್ಮೆ ಹಾರ್ಮೋನ್ ಅನಸಮತೋಲನ ಕಾಣಿಸಿಕೊಳ್ಳುತ್ತದೆ. ಇದರಿಂದ ನೀವು ಸೆಕ್ಸ್ ಬಗೆಗಿನ ಆಸಕ್ತಿಯನ್ನು ಕಳೆದುಕೊಳ್ಳಬಹುದು ಎಂಬುದು ವೈದರ ಮಾತು.
11/ 13
ನೋವು: ಸೆಕ್ಸ್ ಮಾಡುವಾಗ ಗುಪ್ತಾಂಗದಲ್ಲಿ ನೋವು ಕಾಣಿಸಿಕೊಂಡರೂ ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಳ್ಳುವುದಲ್ಲದೆ, ಭಯ ಕೂಡ ಹುಟ್ಟಿ ಬಿಡುತ್ತದೆ. ಸೆಕ್ಸ್ ಎಂದರೆ ಭಯ ಎನ್ನುವ ಮನಸ್ಥಿತಿ ಅವರಲ್ಲಿ ಬಂದು ಬಿಡುತ್ತದೆ. ಹೀಗಾದಾಗ ಲೈಂಗಿಕ ಕ್ರಿಯೆಯಿಂದ ಅವರು ದೂರವೇ ಉಳಿಯುತ್ತಾರೆ.
12/ 13
ದೇಹ ಸೌಂದರ್ಯ: ದೇಹದ ಬಣ್ಣ, ಗುಪ್ತಾಂಗದ ಆಕಾರದ ಬಗ್ಗೆ ಕೆಲವರಿಗೆ ಬೇಸರ ಇರುತ್ತದೆ. ಅದನ್ನು ತಮ್ಮ ಪಾರ್ಟ್ ನರ್ ಗೆ ತೊರಿಸೋಕು ಕೆಲವರು ಹಿಂಜರಿಯುತ್ತಾರೆ. ಇದು ಕೂಡ ಸೆಕ್ಸ್ ಬಗೆಗೆ ಆಸಕ್ತಿ ಕಡಿಮೆ ಆಗಲು ಕಾರಣ ಆಗಬಹುದು.
13/ 13
ಈ ಎಲ್ಲ ಕಾರಣಗಳು ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರಬಹುದು. ಆ ಬಗ್ಗೆ ಸ್ವಲ್ಪ ಗಮನ ಹೆರಿಸಿದರೆ ಎಲ್ಲವೂ ಸರಿಯಾಗುತ್ತದೆ.