Kidney Care: ಕಿಡ್ನಿಗೆ ಯಾವುದೇ ಸಮಸ್ಯೆ ಬರಬಾರದು ಅಂದ್ರೆ ಈ 7 ಅಂಶಗಳನ್ನು ಪಾಲಿಸಿ, ಆರೋಗ್ಯವಾಗಿರಿ
ಮನುಷ್ಯನ ದೇಹದಲ್ಲಿ ಪ್ರತಿಯೊಂದು ಅಂಗ ಕೂಡ ಭಾರೀ ಮಹತ್ವ ಪಡೆದಿದೆ. ಅದರಲ್ಲೂ ಹೃದಯ, ಕಿಡ್ನಿ, ಸೇರಿದಂತೆ ದೇಹದಲ್ಲಿ 24 ಗಂಟೆಯೂ ಕಾರ್ಯ ನಿರ್ವಹಿಸುವ ಪ್ರಮುಖ ಅಂಗಗಳು ಏನಾದರೂ ಕೆಲಸ ಮಾಡೋದನ್ನು ನಿಲ್ಲಿಸಿದರೆ ಆ ವ್ಯಕ್ತಿ ಬದುಕೋದು ಕಷ್ಟ ಅಂತಾನೇ ಹೇಳಬಹುದು. ಹಾಗಾಗಿ ನಮ್ಮ ದೇಹದ ಪ್ರತಿಯೊಂದು ಅಂಗಗಳ ಬಗ್ಗೆಯೂ ಕಾಳಜಿ ವಹಿಸೋದು ತುಂಬಾ ಅಗತ್ಯ. ಹೀಗಾಗಿ ದೇಹದಲ್ಲಿ ಸಂಗ್ರಹಗೊಳ್ಳುವ ತ್ಯಾಜ್ಯಗಳನ್ನು ಹಾಗೂ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರ ಹಾಕುವ ಮೂತ್ರಪಿಂಡ ಅರ್ಥಾತ್ ಕಿಡ್ನಿಯ ಆರೋಗ್ಯ ಕಾಪಾಡೋದು ತುಂಬಾನೇ ಮುಖ್ಯ. ಈ ನಿಟ್ಟಿನಲ್ಲಿ ಕಿಡ್ನಿಯ ಆರೋಗ್ಯ ಕಾಪಾಡಲು ಇಲ್ಲಿ ಕೆಲವೊಂದು ಸಲಹೆಗಳನ್ನು ಕೊಡಲಾಗಿದೆ.
ಪ್ರತಿಯೊಬ್ಬರೂ ತಮ್ಮ ದೇಹದ ತೂಕ ಯಾವುದೇ ಕಾರಣಕ್ಕೂ ಏರಿಕೆ ಆಗದಂತೆ ನೋಡಿಕೊಳ್ಳಬೇಕು. ಇದರಿಂದ ದೇಹದಲ್ಲಿ ಕೆಟ್ಟ ಕೊಬ್ಬಿನಾಂಶ ಹಾಗೂ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ ಬೊಜ್ಜಿನ ಸಮಸ್ಯೆ ಕಂಡು ಬರುತ್ತದೆ.
2/ 7
ಸಂಶೋಧಕರು ಹೇಳುವ ಪ್ರಕಾರ ಕಿಡ್ನಿ ಸ್ಟೋನ್‌ಗೂ ಹಾಗೂ ಮಧುಮೇಹಕ್ಕೆ ನೇರವಾದ ಸಂಬಂಧವಿದೆ. ಹೀಗಾಗಿ ಮಧುಮೇಹ ರೋಗಿಗಳು ಕಿಡ್ನಿಯ ಆರೋಗ್ಯದ ವಿಷ್ಯದಲ್ಲಿ ತುಂಬಾನೇ ಎಚ್ಚರಿಕೆ ವಹಿಸಬೇಕು.
3/ 7
ಅಡುಗೆಯಲ್ಲಿ ಆದಷ್ಟು ಉಪ್ಪನ್ನು ಕಡಿಮೆ ಬಳಸಬೇಕು. ಉಪ್ಪಿನಲ್ಲಿ ಸೋಡಿಯಂ ಹಾಗೂ ಕ್ಲೋರೈಡ್ ಅಂಶ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಇದು ಆರೋಗ್ಯಕ್ಕೆ ಸಮಸ್ಯೆ ಉಂಟುಮಾಡುತ್ತದೆ.
4/ 7
ಬೆಳಗ್ಗೆ ಎದ್ದ ಕೂಡಲೇ ವ್ಯಾಯಾಮ ಅಥವಾ ಯೋಗಾಭ್ಯಾಸ ಮಾಡಿ ಸಂಜೆಯ ಸಮಯದಲ್ಲಿ ವಾಕಿಂಗ್ ಮಾಡಬೇಕು. ಹೀಗೆ ಒಂದಿಲ್ಲೊಂದು ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಅಭ್ಯಾಸ ಇಟ್ಟುಕೊಂಡರೆ ಬಹಳ ಒಳ್ಳೆಯದು.
5/ 7
ಟೀ-ಕಾಫಿ ಕುಡಿಯೋದನ್ನು ಕಡಿಮೆ ಮಾಡಬೇಕು. ಟೀ-ಕಾಫಿಯಲ್ಲಿ ಕೆಫೆನ್ ಅಂಶ ಹೆಚ್ಚಾಗಿ ಕಂಡು ಬರುವುದರಿಂದ, ಮೂತ್ರದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿ ಕಿಡ್ನಿಗಳಲ್ಲಿ ಸ್ಟೋನ್ ಉಂಟಾಗುವ ಸಾಧ್ಯತೆ ಇರುತ್ತದೆ.
6/ 7
ಒಂದು ವೇಳೆ ನಿಮಗೆ ಈಗಾಗಲೇ ಕಿಡ್ನಿ ಪ್ರಾಬ್ಲಮ್ ಜೊತೆಗೆ ಸಕ್ಕರೆ ಕಾಯಿಲೆಯ ಸಮಸ್ಯೆಯ ಇದ್ದರೆ ಆದಷ್ಟು ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸಿ.
7/ 7
ಪದೇ ಪದೇ ನೀರು ಅಥವಾ ಹಣ್ಣಿನ ಜ್ಯೂಸ್, ಇಲ್ಲವೆಂದರೆ ದಿನಕ್ಕೊಂದು ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.
First published:
17