Positive Aging Tour: ಅಜ್ಜ-ಅಜ್ಜಿಯರೇ, ವಯಸ್ಸಾಯ್ತು ಅಂತ ಮನೆಯಲ್ಲೇ ಕೂರಬೇಡಿ; ಪ್ರವಾಸಕ್ಕೆ ಹೋದ್ರೆ ನಿಮಗಿದೆ ಪ್ರಯೋಜನ!

ಪ್ರವಾಸ ಅಂದ್ರೆ ನಮಗೆ ಗೊತ್ತಿರದ ಸ್ಥಳಕ್ಕೆ ಭೇಟಿ ನೀಡುವುದು ಮಾತ್ರವಲ್ಲ. ಇದು ನಿಮ್ಮ ದೇಹ ಮತ್ತು ಮನಸ್ಸನ್ನು ಉಲ್ಲಾಸಮಯವಾಗಿಸುತ್ತದೆ. ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿನ ವೈವಿಧ್ಯತೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಸಿಗುತ್ತದೆ. ನಿಮ್ಮ ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೂ ಅವಕಾಶ ನೀಡಿ.

First published:

  • 18

    Positive Aging Tour: ಅಜ್ಜ-ಅಜ್ಜಿಯರೇ, ವಯಸ್ಸಾಯ್ತು ಅಂತ ಮನೆಯಲ್ಲೇ ಕೂರಬೇಡಿ; ಪ್ರವಾಸಕ್ಕೆ ಹೋದ್ರೆ ನಿಮಗಿದೆ ಪ್ರಯೋಜನ!

    ಪಾಸಿಟಿವ್ ಏಜಿಂಗ್ ಪ್ರವಾಸದಲ್ಲಿ ಹಿರಿಯ ನಾಗರಿಕರನ್ನು ಕೊಂಡೊಯ್ಯುವುದು ಅವರು ಸಕ್ರಿಯವಾಗಿರಲು ಮತ್ತು ಸದೃಢವಾಗಿರಲು ಸಹಾಯ ಮಾಡುತ್ತದೆ. ಪ್ರವಾಸದಿಂದ ಹಲವು ಪ್ರಯೋಜನಗಳಿವೆ. ಅದರಲ್ಲೂ ಹಿರಿಯರನ್ನು ಪ್ರವಾಸಕ್ಕೆ ಕರೆದೊಯ್ಯುವುದು ಅವರ ಮನಸ್ಸನ್ನು ಹರ್ಷಗೊಳಿಸುತ್ತದೆ.

    MORE
    GALLERIES

  • 28

    Positive Aging Tour: ಅಜ್ಜ-ಅಜ್ಜಿಯರೇ, ವಯಸ್ಸಾಯ್ತು ಅಂತ ಮನೆಯಲ್ಲೇ ಕೂರಬೇಡಿ; ಪ್ರವಾಸಕ್ಕೆ ಹೋದ್ರೆ ನಿಮಗಿದೆ ಪ್ರಯೋಜನ!

    ಪ್ರಪಂಚದ ಹಲವು ಕುತೂಹಲಗಳನ್ನು ಕಣ್ತುಂಬಿಕೊಳ್ಳಲು ಸಹಾಯಕವಾಗುತ್ತದೆ. ಹಲವು ವೈವಿಧ್ಯಗಳನ್ನು ನೋಡಲು, ಅನುಭವಿಸಲು ಪ್ರವಾಸಿಗರು ಇಷ್ಟ ಪಡ್ತಾರೆ. ಸೀನಿಯರ್‌ ವರ್ಲ್ಡ್‌ನ ಸಿಲ್ವರ್‌ವಿಂಗ್ಸ್ ವಿಶೇಷವಾಗಿ ಹಿರಿಯರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ವಿಶೇಷ ಪ್ರವಾಸ ಕೈಗೊಳ್ಳಲು ಸಹಕಾರಿ.

    MORE
    GALLERIES

  • 38

    Positive Aging Tour: ಅಜ್ಜ-ಅಜ್ಜಿಯರೇ, ವಯಸ್ಸಾಯ್ತು ಅಂತ ಮನೆಯಲ್ಲೇ ಕೂರಬೇಡಿ; ಪ್ರವಾಸಕ್ಕೆ ಹೋದ್ರೆ ನಿಮಗಿದೆ ಪ್ರಯೋಜನ!

    ಹಿರಿಯ ನಾಗರಿಕರ ಅಗತ್ಯಗಳಿಗೆ ಅನುಗುಣವಾಗಿ ಚಟುವಟಿಕೆಗಳು ಮತ್ತು ವಸತಿ ನೀಡಲಾಗುತ್ತದೆ. ಹಿರಿಯ ನಾಗರಿಕರಲ್ಲಿ ಬೇರೂರಿರುವ ಭಯ ನಿವಾರಿಸಲು ಇದು ಸಹಕಾರಿ. ಟ್ರಾವೆಲ್ ಥೆರಪಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ವಯಸ್ಸಿಗೆ ಸಂಬಂಧಿಸಿದ ಸಮಸ್ಯೆ ಎದುರಿಸಲು ಸಹಾಯ ಮಾಡುತ್ತದೆ. ಉತ್ತಮ ಚಿಕಿತ್ಸಕ ಪ್ರಯೋಜನ ಹೊಂದಿದೆ.

    MORE
    GALLERIES

  • 48

    Positive Aging Tour: ಅಜ್ಜ-ಅಜ್ಜಿಯರೇ, ವಯಸ್ಸಾಯ್ತು ಅಂತ ಮನೆಯಲ್ಲೇ ಕೂರಬೇಡಿ; ಪ್ರವಾಸಕ್ಕೆ ಹೋದ್ರೆ ನಿಮಗಿದೆ ಪ್ರಯೋಜನ!

    ವಯಸ್ಸಾದವರು ಎದುರಿಸುವ ಸಾಮಾನ್ಯ ಸ್ಥಿತಿಗಳಲ್ಲಿ ಒಂಟಿತನವು ಒಂದು. ಅವರ ವೃತ್ತಿಜೀವನದ ನಿರ್ಗಮನ ಮತ್ತು ಕುಟುಂಬದ ಜವಾಬ್ದಾರಿಯಿಂದ 60 ನೇ ವಯಸ್ಸಿಗೆ ಹಿರಿಯರು ಸಾಕಷ್ಟು ದಣಿದಿರುತ್ತಾರೆ. ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ನೋವು ಮತ್ತು ಒಂಟಿತನ ಅನುಭವಿಸುತ್ತಾರೆ.

    MORE
    GALLERIES

  • 58

    Positive Aging Tour: ಅಜ್ಜ-ಅಜ್ಜಿಯರೇ, ವಯಸ್ಸಾಯ್ತು ಅಂತ ಮನೆಯಲ್ಲೇ ಕೂರಬೇಡಿ; ಪ್ರವಾಸಕ್ಕೆ ಹೋದ್ರೆ ನಿಮಗಿದೆ ಪ್ರಯೋಜನ!

    ಹಿರಿಯ ನಾಗರಿಕರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗೆ ಮತ್ತು ಒತ್ತಡ ನಿವಾರಿಸಲು ಮತ್ತು ಜೀವನದ ಬಗ್ಗೆ ದೃಷ್ಟಿಕೋನವನ್ನು ಸುಧಾರಿಸಲು ಪ್ರವಾಸ ನಿಜವಾಗಿಯೂ ಉತ್ತಮ. ಇದು ಬುದ್ಧಿಮಾಂದ್ಯತೆಯ ಅಪಾಯ ಕಡಿಮೆ ಮಾಡುತ್ತದೆ. ಖಿನ್ನತೆ ದೂರ ಮಾಡುತ್ತದೆ ಅಂತಾರೆ ಸೀನಿಯರ್‌ ವರ್ಲ್ಡ್‌ ಸಹ ಸಂಸ್ಥಾಪಕ ಮತ್ತು ಸಿಒಒ ಎಂ.ಪಿ.ದೀಪು.

    MORE
    GALLERIES

  • 68

    Positive Aging Tour: ಅಜ್ಜ-ಅಜ್ಜಿಯರೇ, ವಯಸ್ಸಾಯ್ತು ಅಂತ ಮನೆಯಲ್ಲೇ ಕೂರಬೇಡಿ; ಪ್ರವಾಸಕ್ಕೆ ಹೋದ್ರೆ ನಿಮಗಿದೆ ಪ್ರಯೋಜನ!

    ಜವಾಬ್ದಾರಿಗಳೆಲ್ಲಾ ಪೂರೈಸಿದ ನಂತರ ಹಿರಿಯ ನಾಗರಿಕರು ಪ್ರವಾಸ ಕೈಗೊಂಡರೆ ಅದು ಅವರ ಮನಸ್ಥಿತಿ ಸುಧಾರಿಸುತ್ತದೆ. ದೃಷ್ಟಿಕೋನ ಬದಲಾಯಿಸುತ್ತದೆ. ಅರಿವಿನ ದೌರ್ಬಲ್ಯ, ಹೃದಯಾಘಾತ ಮತ್ತು ಪಾರ್ಶ್ವವಾಯು ಸಮಸ್ಯೆ ಕಡಿಮೆ ಮಾಡುತ್ತದೆ. ಪ್ರವಾಸವು ದೀರ್ಘಕಾಲ ಮತ್ತು ಸಂತೋಷದಿಂದ ಬದುಕಲು ಅನುವು ಮಾಡಿ ಕೊಡುತ್ತದೆ.

    MORE
    GALLERIES

  • 78

    Positive Aging Tour: ಅಜ್ಜ-ಅಜ್ಜಿಯರೇ, ವಯಸ್ಸಾಯ್ತು ಅಂತ ಮನೆಯಲ್ಲೇ ಕೂರಬೇಡಿ; ಪ್ರವಾಸಕ್ಕೆ ಹೋದ್ರೆ ನಿಮಗಿದೆ ಪ್ರಯೋಜನ!

    ಹಿರಿಯ ವಯಸ್ಕರನ್ನು ಒಂದು ಗುಂಪಿನಲ್ಲಿರಿಸಿ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವುದು, ಸಂಪರ್ಕ ಮತ್ತು ಅರಿವಿನ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಪ್ರವಾಸ ಸಕ್ರಿಯವಾಗಿಸುತ್ತದೆ. ಅಸ್ತಮಾ, ಸಂಧಿವಾತ ದೀರ್ಘಕಾಲದ ಆರೋಗ್ಯ ಸಮಸ್ಯೆ ಕಡಿಮೆ ಮಾಡುತ್ತದೆ. ಪ್ರವಾಸವು ಹೊಸ ವಿಷಯಗಳ ಅನ್ವೇಷಣೆ ಮತ್ತು ಖುಷಿ ನೀಡುತ್ತದೆ.

    MORE
    GALLERIES

  • 88

    Positive Aging Tour: ಅಜ್ಜ-ಅಜ್ಜಿಯರೇ, ವಯಸ್ಸಾಯ್ತು ಅಂತ ಮನೆಯಲ್ಲೇ ಕೂರಬೇಡಿ; ಪ್ರವಾಸಕ್ಕೆ ಹೋದ್ರೆ ನಿಮಗಿದೆ ಪ್ರಯೋಜನ!

    ಪ್ರವಾಸವು ಆರೋಗ್ಯ ಸಮಸ್ಯೆ ಕಡಿಮೆ ಮಾಡುತ್ತದೆ. ಹಿರಿಯ ನಾಗರಿಕರ ದೈಹಿಕ, ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಜೀವನದುದ್ದಕ್ಕೂ ಸಂತೋಷ ನೀಡುತ್ತದೆ.

    MORE
    GALLERIES