Seeds Benefits: ಈ 8 ರೀತಿಯ ಸೀಡ್ಸ್ನಲ್ಲಿ ಯಾವುದು ತೂಕ ಇಳಿಕೆಯ ಸೂಪರ್ ಫುಡ್ ಗೊತ್ತೇ?
ಈಗ ಏನಿದ್ದರೂ ಸೂಪರ್ ಫುಡ್ ಕಾಲ ಎನ್ನಬಹುದು. ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವುದಾದರೂ ಒಂದು ಸೀಡ್ಸ್ ಅನ್ನು ಸೇವಿಸುತ್ತಾರೆ. ಆದರೆ, ಯಾವ ಬೀಜಗಳಿಂದ ಯಾವ ಆರೋಗ್ಯ ಲಾಭಗಳಿವೆ ಎಂದು ಗೊತ್ತೇ? ಸರಿಯಾಗಿ ತಿಳಿದುಕೊಂಡು ಸೇವಿಸಿದರೆ ಒಳ್ಳೆಯದು. ಇಂದು ನಾವು ನಿಮಗೆ 8 ಬೀಜಗಳ ಬಗ್ಗೆ ನಿಖರವಾದ ಮಾಹಿತಿಯನ್ನು ತಿಳಿಸಿದ್ದೇವೆ.
ಚಿಯಾ ಸೀಡ್ಸ್: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಚಿಯಾ ಸೀಡ್ಸ್ ಅನ್ನು ಸೇವಿಸುತ್ತಿದ್ದಾರೆ. ಅದರಲ್ಲಿರುವ ಪೋಷಕಾಂಶಗಳಿಂದ ಚಿಯಾ ಬೀಜಗಳನ್ನು 'ಸೂಪರ್ ಫುಡ್' ಎಂದೂ ಕರೆಯುತ್ತಾರೆ. ಇದರಲ್ಲಿ ಸಾಕಷ್ಟು ಫೈಬರ್ ಇರುತ್ತದೆ. ಚಿಯಾ ಬೀಜಗಳನ್ನು ಮೊಸರು ಅಥವಾ ತರಕಾರಿಗಳೊಂದಿಗೆ ಸೇವಿಸುವುದು ಉತ್ತಮ.
2/ 8
ಕುಂಬಳಕಾಯಿ ಬೀಜಗಳು: ಪಂಪ್ಕಿನ್ ಸೀಡ್ಸ್ ಅನ್ನು ಅನೇಕ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಸೂಪ್, ಸಲಾಡ್ ಟಾಪ್ಪರ್ ಆಗಿಯೂ ಬಳಸಲಾಗುತ್ತದೆ. ಅನೇಕರು ಇದನ್ನು ಹಗಲಿನಲ್ಲಿ ತಿಂಡಿಯಾಗಿ ತಿನ್ನುತ್ತಾರೆ. ಕುಂಬಳಕಾಯಿ ಬೀಜಗಳು ಬಹಳಷ್ಟು ಮೆಗ್ನೀಸಿಯಮ್ ಅನ್ನು ಹೊಂದಿರುತ್ತವೆ.
3/ 8
ವೈಲ್ಡ್ ರೈಸ್: ನೀವು ಎಂದಾದರೂ ಕಾಡು ಅಕ್ಕಿಯ ಬಗ್ಗೆ ಕೇಳಿದ್ದೀರಾ. ವಾಸ್ತವವಾಗಿ, ಇವು ಹುಲ್ಲಿನ ಬೀಜಗಳಾಗಿವೆ. ಇತರ ಧಾನ್ಯಗಳಿಗೆ ಹೋಲಿಸಿದರೆ ಅವುಗಳಲ್ಲಿ ಬಹಳಷ್ಟು ಪ್ರೋಟೀನ್ ಕಂಡುಬರುತ್ತದೆ. ಕಾಡು ಅಕ್ಕಿಯಲ್ಲಿ ಮೆಗ್ನೀಸಿಯಮ್, ರಂಜಕ, ಸತು, ವಿಟಮಿನ್ ಬಿ 6 ಕೂಡ ಇದೆ.
4/ 8
Quinoa: ನೀವು ಪ್ರೋಟೀನ್ ಭರಿತ ಆಹಾರವನ್ನು ಹುಡುಕುತ್ತಿದ್ದರೆ, quinoa ಒಂದೊಳ್ಳೆ ಆಯ್ಕೆ. ಇದು ಬಹಳಷ್ಟು ಪ್ರೋಟೀನ್ ಅನ್ನು ಹೊಂದಿದೆ. ಇದು ಗ್ಲುಟನ್ ಮುಕ್ತ ಆಹಾರ. ಕ್ವಿನೋವಾ ಫೈಬರ್ ಮತ್ತು ಕಬ್ಬಿಣವನ್ನು ಸಹ ಹೊಂದಿದೆ.
5/ 8
ದಾಳಿಂಬೆ ಬೀಜಗಳು: ದಾಳಿಂಬೆ ವಿಟಮಿನ್ ಗಳಿಂದ ಸಮೃದ್ಧವಾಗಿರುವ ಹಣ್ಣಾಗಿದ್ದು, ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳನ್ನು ಹೇರಳವಾಗಿ ಹೊಂದಿದೆ. ಇದು ಬಹಳ ಕಡಿಮೆ ಕ್ಯಾಲೋರಿ ಹಣ್ಣಾಗಿದೆ.
6/ 8
ಅಗಸೆಬೀಜಗಳು: ಫ್ಲೆಕ್ಸ್ ಸೀಡ್ಸ್ ಅನ್ನು ವಿಶ್ವದ ವಿವಿಧೆಡೆ ಶತಮಾನಗಳಿಂದ ತಿನ್ನಲಾಗುತ್ತಿದೆ. ಅಗಸೆ ಬೀಜಗಳು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್, ಫೈಬರ್ ಹೇರಳವಾಗಿದೆ.
7/ 8
ಎಳ್ಳು: ಎಳ್ಳನ್ನು ನಾವು ಭಾರತೀಯರು ಹೇರಳವಾಗಿ ಬಳಸುತ್ತೇವೆ. ಇದರಲ್ಲಿ ಫೈಬರ್, ಪ್ರೋಟೀನ್ ಮತ್ತು ಕೊಬ್ಬಿನಾಮ್ಲವಿದೆ, ಇದು ಕೂಡ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
8/ 8
ಸೂರ್ಯಕಾಂತಿ ಬೀಜಗಳು: ಸನ್ ಫ್ಲವರ್ ಎಣ್ಣೆಯನ್ನು ಯತೇಚ್ಛವಾಗಿ ಸೇವಿಸಲಾಗುತ್ತೆ. ಇದು ಬಹಳಷ್ಟು ವಿಟಮಿನ್ ಇ ಅನ್ನು ಹೊಂದಿರುತ್ತದೆ. ಇದರೊಂದಿಗೆ ಸಾಕಷ್ಟು ಆರೋಗ್ಯಕರ ಕೊಬ್ಬು ಕೂಡ ಇದೆ.