ಪ್ರೀತಿ ಕುರುಡು ಎಂಬ ಮಾತನ್ನು ಎಲ್ಲರೂ ಕೇಳಿರುತ್ತೀರಿ. ಆದ್ದರಿಂದ ಯಾರು ಯಾರನ್ನು ಯಾವಾಗ ಪ್ರೀತಿಸುತ್ತಾರೆ ಎಂದೇ ಹೇಳಲಾಗುವುದಿಲ್ಲ. ಇದಲ್ಲದೇ, ಒಂದು ಬಾರಿ ಪ್ರೀತಿ ಹೊಂದದೆ ಇರುವ ಜನರು ಅನೇಕರಿದ್ದಾರೆ. ಜೀವನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ರೀತಿಯಲ್ಲಿ ಬಿದ್ದವರು. ಅದಕ್ಕಿಂತ ಹೆಚ್ಚಾಗಿ ಮದುವೆಯ ನಂತರ ಕೂಡ ಅನೇಕ ಮಂದಿ ಇತರರನ್ನು ಪ್ರೀತಿಸುತ್ತಾರೆ. ಮಹಿಳೆಯರು ಇದಕ್ಕೆ ಹೊರತಾಗಿಲ್ಲ.
ತಜ್ಞರ ಪ್ರಕಾರ, ಮಹಿಳೆಯರು ಯಾರನ್ನಾದರೂ ಪ್ರೀತಿಸಿದಾಗ, ಅವರು ಅವನ ಬಗ್ಗೆ ಅತಿರೇಕವಾಗಿ ಯೋಚಿಸಲು ಪ್ರಾರಂಭಿಸುತ್ತಾರೆ. ಅದರಲ್ಲೂ ಒಂಟಿಯಾಗಿರುವಾಗ ಯಾರೊಂದಿಗೆ ಏಕಪಕ್ಷೀಯ ಪ್ರೀತಿ ಇರುತ್ತದೋ ಅದೇ ವ್ಯಕ್ತಿಯ ಬಗ್ಗೆ ಯೋಚಿಸುತ್ತಿರುತ್ತಾಳೆ. ತನ್ನ ಗೆಳೆಯ ಭೇಟಿಯಾದಾಗ ಆಕೆ ಏನು ಮಾಡುಬೇಕು ಎಂಬೆಲ್ಲಾ ಆಲೋಚನೆಗಳು ಆಕೆಯ ಮನಸ್ಸಿನಲ್ಲಿ ನಿರಂತರವಾಗಿ ಓಡುತ್ತಲೆ ಇರುತ್ತದೆ. ಅವರ ಈ ವಿಚಾರಗಳು ಇತರರಿಗೆ ತಿಳಿಯದೇ ಇರುವುದು ಒಳಗೊಳಗೆ ಉತ್ಸುಕತೆ ಮತ್ತು ಸಂತೋಷವನ್ನು ನೀಡುತ್ತವೆ.
ಮಹಿಳೆಯರು ತಮ್ಮ ಪತಿ ಅಥವಾ ಪ್ರೇಮಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಬಯಸುತ್ತಾರೆ. ಹಾಗಾಗಿ ಅವರ ಸೋಷಿಯಲ್ ಮೀಡಿಯಾ ಖಾತೆ, ಅವರ ಫೋನ್ ನಂಬರ್, ಫ್ರೆಂಡ್ ಲಿಸ್ಟ್ ಹಾಗೂ ಸ್ನೇಹಿತರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುತ್ತಾರೆ. ನೀವು ನಕಲಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಖಾತೆಯನ್ನು ಹೊಂದಿದ್ದರೂ, ಅದನ್ನು ಮಹಿಳೆಯರು ಸುಲಭವಾಗಿ ಕಂಡು ಹಿಡಿಯುತ್ತಾರೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)