Pooja Hegde: ಬುಟ್ಟಬೊಮ್ಮ ಬೆಡಗಿಯ ಸೌಂದರ್ಯದ ರಹಸ್ಯ ಇದಂತೆ
Pooja Hegde Beauty Secret: ನಟಿ ಪೂಜಾ ಹೆಗ್ಡೆ ತಮ್ಮ ಅಮೋಘ ಅಭಿನಯದ ಮೂಲಕ ಜನರ ಮನಗೆದ್ದಿದ್ದಾರೆ. ಒಂದೆಡೆ ಅಭಿನಯವಾದರೆ, ಅವರ ಸೌಂದರ್ಯ ಸಹ ಎಲ್ಲರನ್ನು ಸೆಳೆಯುತ್ತದೆ ಎನ್ನಬಹುದು. ಈ ಕರಾವಳಿ ಸುಂದರಿಯ ಅಂದದ ಗುಟ್ಟೇನು ಎಂಬುದು ಇಲ್ಲಿದ್ದು, ನೀವೂ ಸಹ ಅವರ ರೀತಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
ನಟಿ ಪೂಜಾ ಹೆಗ್ಡೆ ತಮ್ಮ ಅಮೋಘ ಅಭಿನಯದ ಮೂಲಕ ಜನರ ಮನಗೆದ್ದಿದ್ದಾರೆ. ಒಂದೆಡೆ ಅಭಿನಯವಾದರೆ, ಅವರ ಸೌಂದರ್ಯ ಸಹ ಎಲ್ಲರನ್ನು ಸೆಳೆಯುತ್ತದೆ ಎನ್ನಬಹುದು. ಈ ಕರಾವಳಿ ಸುಂದರಿಯ ಅಂದದ ಗುಟ್ಟೇನು ಎಂಬುದು ಇಲ್ಲಿದ್ದು, ನೀವೂ ಸಹ ಅವರ ರೀತಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
2/ 8
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ತಮ್ಮ ತ್ವಚೆಯ ಕಾಳಜಿಗೆ ಸಹ ಸಮಯ ಮೀಸಲಿಡುತ್ತಾರಂತೆ. ಸಾಮಾನ್ಯವಾಗಿ ನಟಿಯರಿಗೆ ಮೇಕಪ್ ಅವಶ್ಯಕತೆ ಇರುತ್ತದೆ. ಆದರೆ ಆ ಮೇಕಪ್ಗಳಲ್ಲಿ ರಾಸಾಯನಿಕಗಳಿರುವ ಕಾರಣ, ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯವಿದೆ.
3/ 8
ನಟಿಯ ಪ್ರಕಾರ ಮೊದಲು ಆಹಾರದ ಮೂಲಕ ನಾವು ತ್ವಚೆಯ ಕಾಳಜಿ ಮಾಡಬೇಕು. ಅವರು ಪ್ರತಿದಿನ ತಮ್ಮ ಆಹಾರದಲ್ಲಿ ತುಪ್ಪವನ್ನು ಬಳಸುತ್ತಾರಂತೆ. ಅಲ್ಲದೇ ತ್ವಚೆಯ ಅಂದ ಹೆಚ್ಚಿಸುವ ಹಣ್ಣು, ತರಕಾರಿಗಳನ್ನು ಮಿಸ್ ಮಾಡದೇ ಸೇವನೆ ಮಾಡುತ್ತಾರಂತೆ.
4/ 8
ನಟಿ ಹೇಳುವಂತೆ ತ್ವಚೆಯ ಅಂದ ಕಾಪಾಡಿಕೊಳ್ಳುವುದು ಮುಖ್ಯ ಆದರೆ ಅತಿಯಾಗಿ ಸಹ ಮಾಡಬಾರದು. ಹಾಗೆಯೇ ಪೂಜಾ ಹೆಗ್ಡೆ ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆದು ಮಾಯಿಶ್ಚರೈಸರ್ ಹಚ್ಚುವುದನ್ನ ಮರೆಯುವುದಿಲ್ಲವಂತೆ.
5/ 8
ಇನ್ನು ಇವರ ಬ್ಯಾಗ್ನಲ್ಲಿ ಯಾವಾಗಲೂ ಮಾಯಿಶ್ಚರೈಸರ್, ಫೇಸ್ ವಾಶ್ ಮತ್ತು ಒಂದು ಫೇಸ್ ಪ್ಯಾಕ್ ಇದ್ದೇ ಇರುತ್ತಂತೆ. ನಾನು ಎಲ್ಲಿಯೇ ಹೋದರೂ ಈ ಮೂರು ವಸ್ತುಗಳಿಲ್ಲದೇ ಇರುವುದಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.
6/ 8
ಶೂಟಿಂಗ್ ಮುಗಿದ ನಂತರ ಮೊದಲು ಮಾಡುವ ಕೆಲಸ ಎಂದರೆ ಮೇಕಪ್ ತೆಗೆಯುವುದು. ಈ ಮೇಕಪ್ ರಿಮೂವ್ ಮಾಡಿದ ನಂತರ ಮಾಯಿಶ್ಚರೈಸರ್ ಹಚ್ಚಬೇಕು ಅಥವಾ ಪ್ಯಾಕ್ ಬಳಸಬೇಕು ಎಂದು ನಟಿ ಹೇಳುತ್ತಾರೆ.
7/ 8
ಇನ್ನೂ ಶೂಟಿಂಗ್ ಇಲ್ಲದ ಸಮಯದಲ್ಲಿ ನಟಿ ಹೊರಗೆ ಹೋಗುವಾಗ ನಾನು ಮೇಕಪ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅತಿಯಾಗಿ ಮೇಕಪ್ ಮಾಡುವುದು ಚರ್ಮಕ್ಕೆ ಉಸಿರುಗಟ್ಟಿಸಿದ್ದಂತೆ ಎಂಬುದು ಅವರ ಅಭಿಪ್ರಾಯ.
8/ 8
ಕೆಲ ಮನೆಮದ್ದುಗಳನ್ನು ಬಳಸುವ ನಟಿ, ಮಿಸ್ ಮಾಡದೇ ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚುತ್ತಾರಂತೆ. ತಾಜಾ ಜೆಲ್ ಚರ್ಮದ ಸಮಸ್ಯೆಗೆ ಪರಿಹಾರ ನೀಡುತ್ತದೆ ಹಾಗೂ ತ್ವಚೆ ಹೊಳೆಯುವಂತೆ ಮಾಡುತ್ತದೆ ಎಂದಿದ್ದಾರೆ.