ಸಾಕಷ್ಟು ಜನರು ಪ್ರಯಾಣದ ವೇಳೆ ಅಂಗಡಿಯಲ್ಲಿ ದೊರೆಯುವ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಖರೀದಿಸಿ ಆಯಾಸ ನೀಗಿಸಿಕೊಳ್ಳುತ್ತಾರೆ. ನಂತರ ಅದೇ ಬಾಟಲಿಯನ್ನು ಮತ್ತೆ ಬಳಸಿಕೊಂಡು ನೀರು ಕುಡಿಯುತ್ತಾರೆ. ಆದರೆ ಆ ಬಾಟಲಿಗಳನ್ನು ಮತ್ತೆ ಬಳಸುವುದು ಎಷ್ಟು ಡೇಂಜರಸ್ ಗೊತ್ತಾ?
2/ 13
ಒಮ್ಮೆ ಬಳಸಿದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಮತ್ತೆ ಬಳಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀಳುವುದರಲ್ಲಿ ಎರಡು ಮಾತಿಲ್ಲ.
3/ 13
ಪ್ಲಾಸ್ಟಿಕ್ ಬಾಟಲಿಯನ್ನು ಯಾಕೆ ಬಳಸಬಾರದು ಗೊತ್ತಾ?
4/ 13
ವಿಶೇಷವಾಗಿ ಅಂಗಡಿಗಳಲ್ಲಿ ಸಿಗುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಅಂಟಿಸಿರುವ ಸ್ಟಿಕರ್ಸ್ಗಳ ಮೇಲೆ ಒಮ್ಮೆ ಕಣ್ಣು ಹಾಯಿಸಿನೋಡಿ. ತ್ರಿಕೋನಾಕರಾದ ಗುರುತಿನ ನಡುವೆ ಇಲ್ಲವೆ ಅಕ್ಕ ಪಕ್ಕದಲ್ಲಿ PET, PC, PP, PETE, PVC, HDPE, HDP, LDPE ಎಂದು ಬರೆದಿರಲಾಗುತ್ತದೆ.
5/ 13
PET, PC, PP, PETE, PVC, HDPE, HDP, LDPE ಈ ಪದಗಳು ಏನು ಹೇಳುತ್ತಿವೆ ಗೊತ್ತಾ?
6/ 13
ಹೆಚ್ಚಿನ ಪ್ಲಾಸ್ಟಿಕ್ ಬಾಟಲಿಗಳ ಮೇಲೆ PET, PC, PP, PETE, PVC, HDPE, HDP, LDPE ಬರೆದಿರುತ್ತವೆ. ಈ ಪದ ನೀವು ಬಳಸುತ್ತಿರುವ ಪ್ಲಾಸ್ಟಿಕ್ ಬಾಟಲಿಯ ಗುಣಮಟ್ಟವನ್ನು ಹೇಳುತ್ತದೆ. ಅಂದರೆ ಈ ಪ್ಲಾಸ್ಟಿಕ್ ಬಾಟಲಿಯು ಬಳಕೆಗೆ ಯೋಗ್ಯವೇ? ಎಂಬುದನ್ನು ತಿಳಿಸುತ್ತದೆ.
7/ 13
ನೀರಿನ ಬಾಟಲಿಯ ಬುಡದಲ್ಲಿ PET ಅಥವಾ PETE ಬರೆದುಕೊಂಡಿದ್ದರೆ ಎಚ್ಚರ. ಏಕೆಂದರೆ ಅಂತಹ ಬಾಟಲಿಗೆ ನೀರು ಹಾಕಿ ಬಳಸಿದರೆ ಅದರಲ್ಲಿ ವಿಷ ಪದಾರ್ಥ ಬಿಡುಗಡೆಯಾಗುತ್ತದೆ. ಆದ್ದರಿಂದ ಇಂತಹ ಬಾಟಲಿಗಳ ನೀರು ಕುಡಿಯುವುದು ಸುರಕ್ಷಿತವಲ್ಲ.
8/ 13
ಇನ್ನು ಕೆಲ ಬಾಟಲಿಗಳ ಮೇಲೆ PC ಎಂದು ಬರೆದುಕೊಂಡಿರುತ್ತದೆ. ಇಂತಹ ಬಾಟಲಿಗಳು ತುಂಬಾ ಅಪಾಯಕಾರಿ. ಇಂತಹ ಬಾಟಲಿಗಳನ್ನು ಬಳಸಲೇ ಬಾರದು.
9/ 13
PS ಎಂದು ಬರೆದುಕೊಂಡಿರುವ ಪ್ಲಾಸ್ಟಿಕ್ ಅನ್ನು ಮಗ್ಗಳನ್ನು ತಯಾರಿಸಲು ಬಳಸುತ್ತಾರೆ. ಇಂತಹ ಮಗ್ಗಳಲ್ಲಿ ಕಾಫಿ, ಟೀ, ಹಾಲಿನಂಥ ಬಿಸಿ ಪದಾರ್ಥಗಳನ್ನು ಹಾಕಿದರೆ ಅವು ಕಾರ್ಸಿನೋಜೆನಿಕ್ ಅನ್ನು ಬಿಡುಗಡೆ ಮಾಡುತ್ತವೆ.
10/ 13
PVC ಅಥವಾ 3V ಎಂದು ಬರೆದಿದ್ದರೆ ಅದು ಅಪಾಯಕಾರಿ ಪ್ಲಾಸ್ಟಿಕ್. ಇಂಥ ಪ್ಲಾಸ್ಟಿಕ್ ಬಳಕೆ ಹಾರ್ಮೋನ್ಗಳ ಅಸಮತೋಲನಕ್ಕೆ ದಾರಿಯಾಗಲಿದೆ. ಕೆಲವು ಪ್ಲಾಸ್ಟಿಕ್ಗಳು ಕ್ಯಾನ್ಸರ್ ಕಾರಕ ಎಂದು ಹೇಳಲಾಗುತ್ತಿದೆ.
11/ 13
ಹಾಗೆಂದು ಎಲ್ಲಾ ಪ್ಲಾಸ್ಟಿಕ್ ಬಾಟಲಿಗಳು ಅಪಾಯಕಾರಿಯಲ್ಲ. ಕೆಲ ಬಾಟಲಿಗಳ ಮೇಲೆ PP, HDPE, HDP LDPE ಸೇರಿವೆ. ಟಾನಿಕ್, ಔಷಧಿಗಳನ್ನು ಹಾಕಲು PP ಪ್ಲಾಸ್ಟಿಕ್ಟ್ಗಳನ್ನ ಬಳಸಲಾಗುತ್ತದೆಯಂತೆ.
12/ 13
ಇನ್ನು HDPE ಅಥವಾ HDP ಎಂದು ಬರೆದಿದ್ದರೆ ಅವು ಬಳಸಲು ಯೋಗ್ಯ. ಇಂತಹ ಬಾಟಲಿಗಳನ್ನು ನೀರು ಕುಡಿಯಲು ಬಳಸಿದರೆ ಅಪಾಯವೇನಿಲ್ಲ.
13/ 13
ಅಂತೆಯೇ LDPE ಎಂದು ಬರೆದಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿದರು ಯಾವುದೇ ಅಪಾಯವಿಲ್ಲ.