ಇಂದಿನ ದಿನಗಳಲ್ಲಿ ಕೂದಲು ಉದುರುವಿಕೆ ಮತ್ತು ಕೂದಲು ಬಿಳಿಯಾಗುವ ಸಮಸ್ಯೆ ಹಲವರನ್ನು ಕಾಡುತ್ತಿದೆ. ಇದಕ್ಕಾಗಿ ಜನರು ಹಲವು ರೀತಿಯಲ್ಲಿ ಕಾಳಜಿ ವಹಿಸಲು ಮುಂದಾಗುತ್ತಾರೆ. ಕೂದಲಿನ ಆರೈಕೆ ಮಾಡವುದು ತುಂಬಾ ಮುಖ್ಯವೂ ಸಹ ಆಗಿದೆ. ಅಲ್ಲದೇ ಕೂದಲು ಚೆನ್ನಾಗಿಡಲು ಹಲವು ವಿಧಾನಗಳಿವೆ. ಅದಾಗ್ಯೂ ಜನರು ಕೂದಲು ಆರೋಗ್ಯಕ್ಕೆ ಹಲವು ರಾಸಾಯನಿಕ ಪ್ರೊಡಕ್ಟ್ ಗಳನ್ನು ಬಳಸುತ್ತಾರೆ.
ಬೆಳ್ಳುಳ್ಳಿಯು ಸೆಲೆನಿಯಮ್ ಮತ್ತು ಸಲ್ಫರ್ ಹೊಂದಿದೆ. ಇದು ಕೂದಲಿನ ಬೆಳವಣಿಗೆ ಹೆಚ್ಚಿಸಿ, ಬಲಪಡಿಸುತ್ತದೆ. ನೀವು ಬೆಳ್ಳುಳ್ಳಿ ಎಣ್ಣೆಯನ್ನು ಮನೆಯಲ್ಲೇ ತಯಾರಿಸಿ, ಕೂದಲಿನ ಆರೋಗ್ಯ ಕಾಪಾಡಬಹುದು. ಕೂದಲಿನ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಲು ಬೆಳ್ಳುಳ್ಳಿ ಎಸಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಗೆ ಬೆಳ್ಳುಳ್ಳಿ ಎಸಳು ಸೇರಿಸಿ.
ತಂಪು ವಾತಾವರಣದಲ್ಲಿ ಹತ್ತು ದಿನ ಜಾರ್ ನಲ್ಲಿ ಸಂಗ್ರಹಿಸಿಡಿ. ನಂತರ ಮತ್ತೆ ಕತ್ತರಿಸಿದ ಬೆಳ್ಳುಳ್ಳಿಯನ್ನು ಬೆಚ್ಚಗಿನ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ. ತಲೆಸ್ನಾನ ಮಾಡುವ ಒಂದು ಗಂಟೆ ಮೊದಲು ಹಚ್ಚಿರಿ. ನಂತರ ಕೂದಲು ಶಾಂಪೂ ಮಾಡಿ. ನೆತ್ತಿಯ ಆರೋಗ್ಯ ಕಾಪಾಡಲು ಮತ್ತು ತಲೆಹೊಟ್ಟು ಮತ್ತು ತುರಿಕೆ ನಿವಾರಣೆಗೆ ಬೇವಿನ ಎಲೆ ಮದ್ದು. ರಾತ್ರಿ ನೀರಿನಲ್ಲಿ ಬೇವಿನ ಎಲೆ ಕುದಿಸಿಡಿ.