ವೃತ್ತಾಕಾರದ ರಂಗೋಲಿಗಳನ್ನು ಬಿಡಿಸುವುದು ಸುಲಭ ಮತ್ತು ಅಂದವಾಗಿ ಕಾಣುತ್ತದೆ. ಕೆಂಪು, ಕಿತ್ತಳೆ, ನೀಲಿ ಮತ್ತು ಹಸಿರು ಮುಂತಾದ ಅನೇಕ ಬಣ್ಣಗಳನ್ನು ಬಳಸಿಕೊಂಡು ನೀವು ಬಹುಕಾಂತೀಯ ವೃತ್ತಾಕಾರದ ಸಂಕ್ರಾಂತಿ ರಂಗೋಲಿ ವಿನ್ಯಾಸಗಳನ್ನು ಮಾಡಬಹುದು. ಈ ರಂಗೋಲಿಯ ಮಧ್ಯದಲ್ಲಿ ಕಲಶವನ್ನು ಇಡುವುದು ಉತ್ತಮ ಉಪಾಯ. ಇದನ್ನು ಅದೃಷ್ಠ ಎಂದು ಪರಿಗಣಿಸಲಾಗುತ್ತದೆ.
2/ 8
ಹಬ್ಬ ಅಂತ ಆದ್ಮೇಲೆ ಮನೆಗೆ ಹೂವನ್ನು ತಂದೇ ತರ್ತೀರ. ಹೀಗಾಗಿ ಹೂವಿನ ರಂಗೋಲಿಯನ್ನು ಹಾಕಿ. ಮಾರಿಗೋಲ್ಡ್, ಗುಲಾಬಿ, ಡ್ಯಾಫಡಿಲ್ ಮತ್ತು ಮಲ್ಲಿಗೆಯಂತಹ ವಿವಿಧ ಹೂವುಗಳ ದಳಗಳನ್ನು ಇದನ್ನು ಮಾಡಲು ಬಳಸಬಹುದು. ನೋಡಲು ಸುಂದರವಾಗಿ ಕಾಣುವುದು ಮಾತ್ರವಲ್ಲದೇ, ಘಮ ಘಮ ಅಂತ ಸುವಾಸನೆಯು ಕೂಡ ಬೀರುತ್ತದೆ.
3/ 8
ನವಿಲು ಆಕಾರದ ರಂಗೋಲಿ. ನೋಡಲು ಬಲು ಅಂದ ಮತ್ತು ಈ ನವಿಲು ಹಬ್ಬದ ಶೋಭೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನವಿಲು ರಂಗೋಲಿಯನ್ನು ಹಂತ ಹಂತವಾಗಿ ಮಾಡಲು ನೀವು ಅನೇಕ ಆನ್ಲೈನ್ ಟ್ಯುಟೋರಿಯಲ್ಗಳನ್ನು ಕಾಣಬಹುದು. ಮನೆಯ ಹೊಸಿಲಿನ ಮುಂಬಾಗದಲ್ಲಿ ಈ ರಂಗೋಲಿಯನ್ನು ಹಾಕಿದರೆ ನಿಜಕ್ಕೂ ಗುಡ್ ವೈಬ್ ಸಿಗುತ್ತದೆ.
4/ 8
ನೀಲಿ ಮತ್ತು ಗುಲಾಬಿ ಬಣ್ಣದ ರಂಗೋಲಿಯನ್ನು ಬಿಡಿಸಿ ಮಧ್ಯಭಾಗದಲ್ಲಿ ದೀಪವನ್ನು ಇರಿಸಿ. ನೋಡಲು ತುಂಬಾ ಅಂದವಾಗಿ ಕಾಣುತ್ತದೆ. ಇದರ ಜೊತೆಗೆ ದೀಪ ಅಂದ್ರೆ ಕತ್ತಲಿನಿಂದ ಬೆಳಕಿನೆಡೆಗೆ ಎಂಬ ಅರ್ಥವನ್ನು ಸೂಚಿಸುತ್ತದೆ. ಈ ಸಂಕ್ರಾಂತಿ ಹಬ್ಬಕ್ಕೆ ಈ ದೀಪದ ರಂಗೋಲಿಯನ್ನು ಬಿಡಿಸಿ.
5/ 8
ಈ ಸಂಕ್ರಾಂತಿಗೆ ಹಳದಿ ಮತ್ತು ಕೇಸರಿ ಸೇವಂತಿಗೆಯ ದಳಗಳಿಂದ ರಂಗೋಲಿಯ ಮುಂದೆ ಅಲಂಕಾರ ಮಾಡಿ. ನೀವು ಮೊದಲ ಬಾರಿಗೆ ರಂಗೋಲಿ ಬಿಡಿಸಿರಬಹುದು ಮತ್ತು ಅದು ಚೆನ್ನಾಗಿ ಕಾಣುತ್ತಾ ಇಲ್ಲ ಎಂದು ನಿಮಗೆ ಅನಿಸಿದ್ದಲ್ಲಿ ಈ ಹೂವಿನ ದಳದಿಂದ ಅಲಂಕಾರ ಮಾಡಿ. ಹಾಳಾದ ರಂಗೋಲಿಗೊಂದು ಅಂದ ಕೊಟ್ಟ ಹಾಗೆ ಕಾಣುತ್ತದೆ. ಇದರ ಜೊತೆಗೆ ದೀಪವನ್ನೂ ಇರಿಸಿ. ಶುಭವನ್ನು ನೀಡುತ್ತದೆ.
6/ 8
ಈ ಅಲಂಕಾರ ನೋಡುವಾಗಲೇ ಕಣ್ಣಿಗೆ ಮತ್ತು ಮನಸ್ಸಿಗೆ ಮುದವನ್ನು ನೀಡುತ್ತದೆ ಅಲ್ವಾ? ಇದಕ್ಕೆ ರಂಗೋಲಿ ಪುಡಿ ಬೇಕು ಅಂತ ಏನು ಇಲ್ಲ. ಕೇವಲ ಹಳದಿ ಮತ್ತು ಕೇಸರಿ ಬಣ್ಣದ ದೊಡ್ಡ ಗಾತ್ರದ ಚಂಡು ಹೂವು ಮತ್ತು ಮಾವಿನ ಎಲೆಗಳಿಂದ ಸಿಂಪಲ್ ಆಗಿ ಅಲಂಕಾರ ಮಾಡಬಹು. ಮಾಧ್ಯದಲ್ಲಿ ಕಾಲಿ ಇರುವ ಜಾಗದಲ್ಲಿ ಕಳಶವನ್ನು ಕೂರಿಸಬಹುದು.
7/ 8
ಇದು ಸಿಂಪಲ್ ರಂಗೋಲಿ ಹುಡಿಯಿಂದ ಬಿಡಿಸಲ್ಪಡುವ ಡಿಸೈನ್. ಮಧ್ಯದಲ್ಲಿ ಶ್ರೀ ಎಂದು ಬರೆಯಿರಿ ಹಾಗೆಯೇ ಇದು ಅದೃಷ್ಟವನ್ನು ನೀಡುವಂತಹ ರಂಗೋಲಿ. ಈ ಸಂಕ್ರಾಂತಿಗೆ ನೀವು ಮನೆಯ ಒಳಗೆ ಅಂದ್ರೆ ದೇವರ ಕೋಣೆಯಲ್ಲಿ ಈ ರಂಗೋಲಿಯನ್ನು ಬಿಡಿಸಬಹುದು.
8/ 8
ರಂಗೋಲಿಯನ್ನು ಮನೆಯ ಮುಂಬಾಗದಲ್ಲಿ(ಅಂಗಳ), ಹೊಸಿಲಿನ ಪಕ್ಕ, ದೇವರ ಮನೆಯಲ್ಲಿ ರಂಗೋಲಿಯನ್ನು ಬಿಡಿಸಬಹುದು. ನೀವು ಹೂವಿನ ರಂಗೋಲಿಯನ್ನು ಹಾಕುವುದಾದರೆ ಹಿಂದಿನ ದಿನವೇ ಹಾಕಿದರೆ ಒಳಿತು. ಮುಂಜಾವಿನ ಇಬ್ಬನಿಗೆ ಇನ್ನು ಫ್ರೆಶ್ ಆಗಿ ಕಾಣುತ್ತೆ ನಿಮ್ಮ ಮನೆಯ ರಂಗೋಲಿ. ಈ ಸಂಕ್ರಾಂತಿಗೆ ಮಿಸ್ ಮಾಡದೇ ಈ ರಂಗೋಲಿಗಳನ್ನು ಬಿಡಿಸಿ.