ಪ್ರಪಂಚದಾದ್ಯಂತ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವುದು ಬಹಳ ಕಡಿಮೆ. ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ, ಅವರ ಸುರಕ್ಷತೆ ಮುಂತಾದ ನಾನಾ ಕಾರಣಗಳು ಇದಕ್ಕೆ ಅಡ್ಡಿಯನ್ನುಂಟು ಮಾಡುತ್ತಿದೆ. ಈ ಪ್ರವಾಸದ ಮೂಲಕ ಹೊಸ ಜನರನ್ನು ಭೇಟಿ ಮಾಡಲು ಅವಕಾಶಗಳು ದೊರೆಯುತ್ತದೆ ಮತ್ತು ದೈನಂದಿನ ಜೀವನದ ಒತ್ತಡಗಳಿಂದ ವಿಶ್ರಾಂತಿ ಪಡೆಯಲು ಮತ್ತು ಶಾಂತವಾಗಿರಲು ಸಮಯ ದೊರೆಯುತ್ತದೆ.
ವಸತಿಯನ್ನು ಪರಿಶೀಲಿಸುವುದು : ಹೊಸ ನಗರಗಳಿಗೆ ಪ್ರಯಾಣಿಸುವುದು ಮತ್ತು ವಸತಿಗಾಗಿ ಹುಡುಕುವುದು ಕಷ್ಟಕರವಾಗಿರುತ್ತದೆ, ಆದ್ದರಿಂದ ನೀವು ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ ಆನ್ಲೈನ್ನಲ್ಲಿ ರೂಮ್ಗಳನ್ನು ಬುಕ್ ಮಾಡಿಕೊಳ್ಳುವುದು ಉತ್ತಮ. ಅಲ್ಲದೇ, ನೀವು ವಾಸಿಸಲು ಹೊರಟಿರುವ ಸ್ಥಳದ ಸುತ್ತಮುತ್ತಲಿನ ವಾತಾವರಣದ ಬಗ್ಗೆ ತಿಳಿದುಕೊಳ್ಳಲು ಹಗಲು ಹೊತ್ತಿನಲ್ಲಿ ಭೇಟಿ ನೀಡುವುದನ್ನು ಮರೆಯಬೇಡಿ.
ಸಾಮಾನುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು : ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವಾಗ ಬೃಹತ್ ಗಾತ್ರದ ಬ್ಯಾಗ್ಗಳನ್ನು ಕೊಂಡೊಯ್ಯುವುದನ್ನು ಮರೆಯಬೇಡಿ. ನಿಮಗೆ ಬೇಕಾದುದನ್ನು ಮಾತ್ರ ತೆಗೆದುಕೊಂಡು ಹೋಗಿ, ಇದರಿಂದ ನಿಮ್ಮ ಪ್ರಯಾಣ ಸುಲಭವಾಗಿರುತ್ತದೆ ಮತ್ತು ಯಾವುದೇ ತೊಂದರೆಗಳಾಗುವುದಿಲ್ಲ. ಪವರ್ ಬ್ಯಾಂಕ್, ಹೆಡ್ಫೋನ್ ಇತ್ಯಾದಿಗಳನ್ನು ಯಾವಾಗಲೂ ಕೊಂಡೊಯ್ಯುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಜೊತೆಗೆ ಇವೆಲ್ಲವನ್ನೂ ಬಹಳ ಸುರಕ್ಷಿತವಾಗಿಡುವುದು ಮುಖ್ಯ.
ಹೊಸ ಸ್ನೇಹ ಸಂಪಾದಿಸಿ: ವಿದೇಶ ಪ್ರವಾಸದಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಒಳ್ಳೆಯದು. ಆದರೆ ನಿಮ್ಮ ವಸತಿ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದು ಉತ್ತಮ. ಯಾರಾದರೂ ಹೆಚ್ಚು ಪ್ರಶ್ನೆಗಳನ್ನು ಕೇಳಿದರೆ ಅವರ ಪ್ರಶ್ನೆಗಳಿಗೆ ಬದಲಾಗಿ ಅವರನ್ನು ಬೇರೆ ಚಟುವಟಿಕೆಗಳಿಗೆ ತಿರುಗಿಸುವುದು ಮತ್ತು ಸ್ಥಳವನ್ನು ಬಿಡುವುದು ಉತ್ತಮ. ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಪ್ರಯಾಣದ ಸ್ಥಳಗಳು ಮತ್ತು ವಸತಿ ವಿವರಗಳ ಕುರಿತು ಮಾಹಿತಿಗಳನ್ನು ಹಂಚಿಕೊಳ್ಳುವುದನ್ನು ಮುಖ್ಯವಾಗಿ ತಪ್ಪಿಸಿ. ನೀವು ನಿಮ್ಮ ಮನೆಗೆ ಮರಳಿದ ನಂತರ, ನೀವು ಅಲ್ಲಿ ತೆಗೆದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.
ಆರೋಗ್ಯ ಉತ್ಪನ್ನಗಳನ್ನು ಒಯ್ಯಿರಿ : ಚರ್ಮದ ಆರೋಗ್ಯಕ್ಕಾಗಿ ನೀವು ಬಳಸುವ ಬಾಡಿ ಲೋಷನ್, ಸೀರಮ್, ಸನ್ಸ್ಕ್ರೀನ್ ಲೋಷನ್, ಲಿಪ್ ಬಾಮ್ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಿ. ಮುಖ್ಯವಾಗಿ ಪ್ರವಾಸದ ವೇಳೆ ಕೆಲವರಿಗೆ ಋತುಸ್ರಾವವಾದರೆ ಸ್ಯಾನಿಟರಿ ಪ್ಯಾಡ್, ತಲೆನೋವಿನ ಔಷಧ, ಜ್ವರದ ಮಾತ್ರೆಗಳನ್ನು ತೆಗೆದುಕೊಂಡು ಹೋಗಬೇಕು. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಫೇಸ್ ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಜರ್ಗಳನ್ನು ಒಯ್ಯುವುದು ಸಹ ಅಗತ್ಯವಾಗಿದೆ. ಈ ರೀತಿಯ ಮುಂಗಡ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ನಿಮ್ಮ ಸೋಲೋ ಟ್ರಿಪ್ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.