ಸಾಮಾನ್ಯವಾಗಿ ಫ್ಯಾಷನ್ ಜಗತ್ತಿನಲ್ಲಿ ಮಿಂಚೋ ಮಾಡೆಲ್ಗಳು ತೆಳ್ಳಗೆ, ಬೆಳ್ಳಗೆ ಇರಬೇಕು ಅನ್ನೋ ಮಾತಿದೆ. ಆದರೆ ಸೌಂದರ್ಯಕ್ಕೆ ಏಕೆ ಚೌಕಟ್ಟು? ದಪ್ಪಗಿದ್ದವರು, ಕಪ್ಪಗಿರುವವರು ಮಾಡೆಲ್ ಆಗಬಾರದಾ.. ಬದಲಾದ ಕಾಲದಲ್ಲಿ ಸುಂದರವಾಗಿರೋದು ಅನ್ನೋದು ಸಾಂಪ್ರದಾಯಿಕ ಚೌಕಟ್ಟನ್ನು ಮೀರಿದೆ. ಸದ್ಯ ಫ್ಯಾಷನ್ ಜಗತ್ತಿನಲ್ಲೇ ತನ್ನದೇ ಛಾಪು ಮೂಡಿರುವ ಈಕೆ ವರ್ಷಿತಾ. ಸೂಪರ್ ಮಾಡೆಲ್. ತೆಳ್ಳಗೇ ಇರಬೇಕು, ಬೆಳ್ಳಗೇ ಇರಬೇಕು ಅನ್ನೋ ಸ್ಟೈಲ್ ಈಕೆಯದ್ದು ಅಲ್ಲ. ಭಾರತೀಯರ ಹೇಗಿದ್ದಾರೋ ಅದೇ ಸೌಂದರ್ಯ ಎನ್ನುತ್ತಿದ್ದಾರೆ. ವರ್ಷ ಸಾಮಾನ್ಯ ಮಾಡೆಲ್ಗಳ ಮಧ್ಯೆ ತಮ್ಮ ಬಣ್ಣ, ದೇಹದ ತೂಕದಿಂದಲೇ ಭಿನ್ನವಾಗಿ ಎದ್ದು ಕಾಣುತ್ತಾರೆ. ಹೀಗಾಗಿಗೆ ಖ್ಯಾತ ಫ್ಯಾಷನ್ ಡಿಸೈನರ್ ಸವ್ಯಸಾಚಿ ತಮ್ಮ ಬ್ರಾಂಡ್ಗೆ ವರ್ಷಿತಾರನ್ನು ಮಾಡೆಲ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಬಾಡಿ ಶೇಮಿಂಗ್ ಬಗ್ಗೆ ಜಾಗೃತಿ ಮೂಡುತ್ತಿರುವ ಹೊತ್ತಿನಲ್ಲಿ ವರ್ಷಿತಾರ ಯಶಸ್ವಿ ವೃತ್ತಿ ಹಲವರಲ್ಲಿ ಸ್ಪೂರ್ತಿ ಮೂಡಿಸಿದೆ. ಈ ಬಗ್ಗೆ ಖುದ್ದು ಮಾತನಾಡಿರುವ ವರ್ಷಿತಾ, ಭಾರತೀಯರಿಗೆ ತಮ್ಮದೇ ಆದ ಬಣ್ಣ, ಸೌಂದರ್ಯವಿದೆ ಅದನ್ನು ಗೌರವಿಸಿ ಹೆಮ್ಮೆಯಿಂದ ಸ್ವೀಕರಿಸಬೇಕು ಎಂದಿದ್ದಾರೆ. ಫ್ಯಾಷನ್ ಜಗತ್ತು ಕೂಡ ಬದಲಾಗುತ್ತಿದ್ದು ಸೈಜ್ ಪ್ಲಸ್ ಮಾಡೆಲ್ಗಳಿಗೆ ಈಗ ಮಣೆ ಹಾಕುತ್ತಿದೆ. ವರ್ಷಿತಾ ಸವ್ಯಸಾಚಿ ಮಾಡೆಲ್ ಆಗಿ ಕಾಣಿಸಿಕೊಂಡಾಗ ಅದೆಷ್ಟೋ ಮಂದಿ ವಿಶ್ವಾದ್ಯಂತ ಇವರಿಗೆ ಕಮೆಂಟ್ ಮಾಡಿ ಅಭಿನಂದಿದ್ದರಂತೆ. ಶತಮಾನಗಳಿಂದ ಇರುವ ಸೌಂದರ್ಯದ ಅಳತೆಗೋಲನ್ನು ಮೀರಿ ಯಶಸ್ವಿಯಾಗಿರುವ ವರ್ಷಿತಾ ಅನೇಕರಿಗೆ ಮಾದರಿಯಾಗಿದ್ದಾರೆ. ಮಾಡೆಲ್ ವರ್ಷಿತಾ