Eye Twitching: ಆಗಾಗ ನಿಮ್ಮ ಬಲಗಣ್ಣು ಅದರುತ್ತಾ? ಹಾಗಾದ್ರೆ ಇದೇ ರೀಸನ್
ನಿಮ್ಮ ಬಲಗಣ್ಣು ಆಗಾಗ ಅದರುತ್ತಾ? ಆದ್ರೂ ನೀವು ಸುಮ್ಮನೇ ಇದ್ದೀರಾ? ಹಾಗಾದ್ರೆ ಖಂಡಿತ ನೀವೊಮ್ಮೆ ಇದನ್ನು ಓದ್ಲೇ ಬೇಕು.
1/ 7
ಬಲಗಣ್ಣು ಅದರಿದರೆ ಮಹಿಳೆಯರಿಗೆ ಅದು ಅಪಶಕುನ ಎಂದು ಹೇಳಲಾಗುತ್ತದೆ. ಆದರೆ ಅದು ಹಾಗಲ್ಲಾ. ಅದಕ್ಕೆ ಕೆಲವು ಸೈಂಟಿಫಿಕ್ ಕಾರಣಗಳಿವೆ. ಅದೇನೆಂದು ತಿಳಿಯಲು ಇದನ್ನು ಓದಿ.
2/ 7
ನಿಮಗೆ ತುಂಬಾ ಆಯಾಸವಾದಾಗ ನಿಮ್ಮ ಬಲಗಣ್ಣು ಅದರುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಆತಂಕ ಪಡಬಾರದು ರೆಸ್ಟ್ ತೆಗೆದುಕೊಳ್ಳಬೇಕು.
3/ 7
ನಿಮ್ಮ ಕಣ್ಣಲ್ಲಿ ನೀರಿನ ಅಂಶ ಕಡಿಮೆ ಇದ್ದಾಗಲೂ ಈ ರೀತಿ ಆಗುವ ಸಾಧ್ಯತೆ ಇರುತ್ತದೆ. ಆ ಕಾರಣದಿಂದ ನೀವು ನಿಮ್ಮ ಕಣ್ಣಿನ ತೇವಾಂಶ ಕಾಪಾಡುವಂತ ಆಹಾರ ಸೇವಿಸಬೇಕು.
4/ 7
ನಿಮಗೆ ನಿದ್ದೆ ಕಡಿಮೆಯಾಗಿದ್ದರೂ ಇದೇ ರೀತಿ ಆಗುತ್ತದೆ. ಆದ ಕಾರಣ ಸರಿಯಾದ ಸಮಯಕ್ಕೆ ನಿದ್ರೆ ಮಾಡಬೇಕು ಹಾಗೆ ಮಾಡಿದಲ್ಲಿ ಬಲಗಣ್ಣು ಅದರುವುದಿಲ್ಲ.
5/ 7
ನೀವು ತುಂಬಾ ಕೆಫೆನ್ ಅಂಶ ಇರುವ ಪದಾರ್ಥವನ್ನು ಸೇವಿಸಿದರೂ ಕೂಡಾ ಈ ರೀತಿ ಆಗುತ್ತದೆ. ಈ ರೀತಿ ಆದಾಗ ಕಾಫಿ, ಟೀ ಮತ್ತು ಜಾಕೊಲೇಟ್ ತಿನ್ನುವುದನ್ನು ಬಿಡಿ.
6/ 7
ಕಣ್ಣು ರೆಪ್ಪೆ ಸೆಳೆತ ಸಾಮಾನ್ಯವಾಗಿ ಒಂದೇ ಕಣ್ಣಿಗೆ ಸಂಭವಿಸುತ್ತದೆ. ಅತಿಯಾದ ಆಲ್ಕೋಹಾಲ್ ಸೇವನೆ ಮಾಡಿದರೂ ಈ ರೀತಿಯಾಗುತ್ತದೆ.
7/ 7
ನಿಮಗೆ ಹಲವಾರು ದಿನಗಳಿಂದ ಇದೇ ರೀತಿ ಆಗುತ್ತಿದ್ದರೆ ಒಮ್ಮೆ ವೈದ್ಯರಿಗೆ ಕಾಣಿಸುವುದು ಉತ್ತಮ. ಇದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಿ.
First published: