ಯಾರಿಗೆ ತಾನೇ ಹೆಚ್ಚು ವರ್ಷ ಬದುಕಲು ಆಸೆ ಇರುವುದಿಲ್ಲ ಹೇಳಿ? ಆದರೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾವು ಏನು ಮಾಡಬೇಕು ಎಂಬ ಬಗ್ಗೆ ಅನೇಕ ಮಂದಿಗೆ ಗೊಂದಲವಿದೆ. ಕೆಲವೊಮ್ಮೆ ನಮ್ಮ ಕೆಟ್ಟ ಅಭ್ಯಾಸಗಳೇ ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುತ್ತದೆ. ಒಂದರ ನಂತರ ಒಂದು ರೋಗಗಳು ಬರುತ್ತಲೇ ಇರುತ್ತದೆ. ಹಾಗಾಗಿ ಹೆಚ್ಚು ಕಾಲ ಬದುಕಬೇಕೆಂದರೆ ಕೆಲವು ಉತ್ತಮ ಆಹಾರ ಮತ್ತು ಪದಾರ್ಥಗಳನ್ನು ತಿನ್ನಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಉತ್ತಮ ಆಹಾರವನ್ನು ಸೇವಿಸುವುದರಿಂದ ಹೃದ್ರೋಗದಿಂದ ಸಾಯುವ ಅಪಾಯವನ್ನು ಶೇಕಡಾ 18 ಮತ್ತು 28 ರಷ್ಟು ಕಡಿಮೆ ಮಾಡಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹಾಗಾಗಿ ವಿಶೇಷ ಆಹಾರವನ್ನು ಸೇವಿಸಲು ಸೂಚಿಸಲಾಗುತ್ತದೆ. ಆದರೆ ನಾವು ಪ್ರತಿದಿನ ತಿನ್ನುವ ಆಹಾರದಲ್ಲಿಯೇ ಸಾಕಷ್ಟು ಮಹತ್ವವಿದೆ. ಆದರೆ ಈ ಬಗ್ಗೆ ನಮಗೆ ತಿಳಿದಿಲ್ಲ. ಹೌದು, ಈ ಒಂದು ತರಕಾರಿಯಲ್ಲಿ ಉತ್ತಮ ಗುಣಮಟ್ಟದ ಜೀವನ ಅಡಗಿದೆ. (ಸಾಂಕೇತಿಕ ಚಿತ್ರ)